ಸುದ್ದಿವಿಜಯ, ಜಗಳೂರು: ತಾಲೂಕಿನ ಗೌರಿಪುರ ಹೊಸೂರು ಗ್ರಾಮದ ಚೌಡಮ್ಮ ಅವರಿಗೆ ಶುಕ್ರವಾರ ತಡರಾತ್ರಿ ಹೆರಿಗೆ ನೋವು ಕಾಣಿಸಿಕೊಂಡು ತೀವ್ರ ಯಾತನೆ ಅನುಭವಿಸುತ್ತಿದ್ದಾಗ, ಅಂಬುಲೆನ್ಸ್ ನಲ್ಲಿದ್ದ ಅರೆವೈದ್ಯಕೀಯ ಸಿಬ್ಬಂದಿ ಎನ್.ಚೌಡಪ್ಪ ಮತ್ತು ಆಶಾ ಕಾರ್ಯಕರ್ತೆ ನೆರವಿಗೆ ದಾವಿಸಿ ದಾರಿ ಮಧ್ಯೆ ಅಂಬುಲೆನ್ಸ್ ನಿಲ್ಲಿಸಿ ಸುಸೂತ್ರವಾಗಿ ಹೆರಿಗೆ ಮಾಡಿಸಿ ತಾಯಿ ಮಗು ಆರೋಗ್ಯ ಕಾಪಾಡುವಲ್ಲಿ ಯಶಸ್ವಿಯಾಗಿದ್ದಾರೆ.
ಚೌಡಮ್ಮ ಅವರಿಗೆ ಶುಕ್ರವಾರ ತಡರಾತ್ರಿ 1ಗಂಟೆ ಸುಮಾರಿಗೆ ಹೆರಿಗೆನೋವು ಕಾಣಿಸಿಕೊಸಿಕೊಂಡಿತ್ತು. ಅವರನ್ನು ಕುಟುಂಬದವರು ಖಾಸಗಿ ವಾಹನದಲ್ಲಿ ಸೊಕ್ಕೆ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆದೊಯ್ಯಯ್ದರು. ಆದರೆ ಹೆರಿಗೆ ನೋವು ತೀವ್ರವಾಗುತ್ತಿದ್ದಂತೆ ಇಲ್ಲಿ ಸಾಧ್ಯವಿಲ್ಲ ಜಗಳೂರು ಸಾರ್ವಜನಿಕ ಆಸ್ಪತ್ರೆಗೆ ಕರೆದೊಯ್ಯಲು ಅಲ್ಲಿನ ವೈದ್ಯಸಿಬ್ಬಂದಿ ಸೂಚನೆ ನೀಡಿದ್ದಾರೆ.
ತಕ್ಷಣವೇ ಅಂಬುಲೆನ್ಸ್ ಮೂಲಕ ಅವರನ್ನು ಜಗಳೂರು ಪಟ್ಟಣದ ಸರಕಾರಿ ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆ ಹೆರಿಗೆ ನೋವು ತೀವ್ರವಾಗಿ ಕಠಿಣ ಪರಿಸ್ಥಿತಿ ನಿರ್ಮಾಣವಾಗಿತ್ತು. ತಕ್ಷಣ ಅಂಬುಲೆನ್ಸ್ ನಲ್ಲಿದ್ದ ಅರೆವೈದ್ಯಕೀಯ ಸಿಬ್ಬಂದಿ ಎನ್.ಔಡಪ್ಪ ಅವರು ಗರ್ಭಿಣಿ ಚೌಡಮ್ಮ ಅವರಿಗೆ ಹೆರಿಗೆ ಮಾಡಿಸುವ ಮೂಲಕ ತಾಯಿ ಮತ್ತು ಮಗುವನ್ನು ಅಪಾಯದಿಂದ ಪಾರುಮಾಡಿದ್ದಾರೆ.
ಚೌಡಮ್ಮ ಅವರು ಗಂಡು ಮಗುವಿಗೆ ಜನ್ಮ ನೀಡಿದ್ದು ಅವರನ್ನು ಜಗಳೂರು ಸರಕಾರಿ ಆಸ್ಪತ್ರೆಗೆ ದಾಖಲಿಸಿ ಹೆಚ್ಚಿನ ಚಿಕಿತ್ಸೆ ನೀಡಲಾಗುತ್ತಿದೆ. ಈ ಸಂದರ್ಭದಲ್ಲಿ ಅಂಬುಲೆನ್ಸ್ ಚಾಲಕರಾದ ಹನುಮಂತ ಹಾಗೂ ಆಶಾ ಕಾರ್ಯಕರ್ತೆ ಶ್ವೇತಾ ಅವರು ಸಹಕಾರ ನೀಡಿದ್ದು, ಸರಿಯಾದ ಸಮಯಕ್ಕೆ ಧಾವಿಸಿ ಉಚಿತ ಆರೋಗ್ಯ ಸೇವೆ ಒದಗಿಸಿದ ಅಂಬುಲೆನ್ಸ್ ಸಿಬ್ಬಂದಿ ಕಾರ್ಯಕ್ಕೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತವಾಗಿದೆ.