ಬಾಲ್ಯದಲ್ಲಿ ಮಕ್ಕಳನ್ನು ಕೆಲಸಕ್ಕೆ ಕಳಿಸುವುದು ಅಪರಾಧ, ಶಿಕ್ಷಣ ಕೊಡಿಸಿ ವಿದ್ಯಾವಂತರನ್ನಾಗಿ ಮಾಡಿ: ಪಿಎಸ್ ಐ ಓಂಕಾರನಾಯ್ಕ ಹೇಳಿಕೆ

Suddivijaya
Suddivijaya June 16, 2023
Updated 2023/06/16 at 2:23 AM

Suddivijaya|Kannada News|16-06-2023

ಸುದ್ದಿವಿಜಯ ಜಗಳೂರು.ಮಣ್ಣಿಗೆ ಯಾವ ರೂಪ ಕೊಟ್ಟರೂ ಅದು ಸುಂದರವಾಗಿ ಕಾಣುತ್ತದೆ. ಹಾಗೇಯೆ ಮಕ್ಕಳು ಮಣ್ಣಿದ್ದಾಗೆ ಅವರನ್ನು ಪ್ರಬುದ್ದರನ್ನಾಗಿ ಮಾಡುವುದು ಪಾಲಕರ ಜವಾಬ್ದಾರಿಯಾಗಿದೆ ಎಂದು ಪಿಎಸ್‌ಐ ಓಂಕಾರನಾಯ್ಕ ಹೇಳಿದರು.

ತಾಲೂಕಿನ ಬಸವನಕೋಟೆ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ಗುರುವಾರ ಡಾನ್ ಬಾಸ್ಕೋ ಬಾಲಕಾರ್ಮಿಕರ ಮಿಷನ್ ದಾವಣಗೆರೆ, ಬ್ರೆಡ್ಷ್ ಸಂಸ್ಥೆ, ಸಿ.ಎಸ್ ಯೋಜನೆ. ಸಾರ್ವಜನಿಕ ಶಿಕ್ಷಣ ಇಲಾಖೆ, ಗ್ರಾಮ ಪಂಚಾಯಿತಿ ಇವರ ಸಹಾಯೋಗದಲ್ಲಿ ಹಮ್ಮಿಕೊಂಡಿದ್ದ ವಿಶ್ವ ಬಾಲ ಕಾರ್ಮಿಕ ಪದ್ದತಿ ವಿರೋಧಿ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಕಾರ್ಮಿಕರಾಗಲು ಮುಖ್ಯ ಕಾರಣ ಬಡತನ, ಅಜ್ಞಾನ ಹಾಗೂ ಕುಟುಂಬ ನಿರ್ವಹಣೆ ಸಾಧ್ಯವಾಗದ ಸಂಧರ್ಭದಲ್ಲಿ ಮಕ್ಕಳನ್ನು ಕೆಲಸಕ್ಕೆ ಸೇರಿಸುವ ಕಾರ್ಯ ಪಾಲಕರು ಮಾಡುತ್ತಾರೆ. ಆದರೆ ಈಗ ಶಿಕ್ಷಣ ನೀತಿ ಬದಲಾಗಿದ್ದು, 14ನೇ ವರ್ಷದ ತನಕ ಕಡ್ಡಾಯ ಶಿಕ್ಷಣ ದೊರೆಯಬೇಕು. ಶಿಕ್ಷಣದಿಂದ ಯಾವೊಬ್ಬ ಮಗು ಸಹ ವಂಚಿತವಾಗಬಾರದು ಎಂಬ ಕಾನೂನು ಬಾಲ ಕಾರ್ಮಿಕ ಪದ್ದತಿಯನ್ನು ನಿಲ್ಲಿಸಿದೆ ಎಂದರು.

ಡಾನ್ ಬಾಸ್ಕೋ ಸಂಸ್ಥೆ ನಿರ್ದೇಶಕ ಫಾದರ್ ರೆಜಿ ಜೇಕಬ್ ಮಾತನಾಡಿ, ಅತ್ಯಂತ ಸಣ್ಣ ವಯಸ್ಸಿನಲ್ಲಿ ಬಾಲ ಕಾರ್ಮಿಕರಾಗುವುದನ್ನು ತಪ್ಪಿಸಿ ಅವರು ಮುಂದೆ ಉತ್ತಮ ನಾಗರೀಕರಾಗಬೇಕು ಎನ್ನುವ ಉದ್ದೇಶ ಬಾಲ ಕಾರ್ಮಿಕ ಪದ್ಧತಿ ವಿರೋಧಿ ದಿನಾಚರಣೆಯನ್ನು ಆಚರಿಸುವುದಾಗಿದೆ. ಬಾಲ ಕಾರ್ಮಿಕರಾಗಿಯೇ ದುಡಿಯುತ್ತ ಅವರ ಜೀವನ ಹಾಳಾಗಬಾರದು. ವಿದ್ಯಾಭ್ಯಾಸ ಸಿಗುವ ವಯಸ್ಸಿನಲ್ಲಿ ಸರಿಯಾದ ವಿದ್ಯೆ ಸಿಗಬೇಕು. ವಿದ್ಯೆ ಕಲಿತು ಅವರೂ ಕೂಡಾ ಉತ್ತಮ ನಾಗರೀಕರಾಗಿ ಬಾಳಬೇಕೆನ್ನುವ ಕುರಿತು ಸಮಾಜದಲ್ಲಿ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಪ್ರತಿ ಹಳ್ಳಿ ಸೇರಿದಂತೆ ನಗರದಾದ್ಯಂತ ಇಂತಹ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗುತ್ತಿದೆ ಎಂದರು.

ಪಾಲಕರ ಬೇಜವಾಬ್ದಾರಿಗೆ ಶಿಕ್ಷಣದಿಂದ ವಂಚಿತ:

‘ಪಾಲಕರ ಬೇಜವಾಬ್ದಾರಿ ಹಾಗೂ ಮೂಢ ನಂಬಿಕೆಗಳಿಂದ ಮಕ್ಕಳು ವಿದ್ಯಾಭ್ಯಾಸವನ್ನು ಅರ್ಧಕ್ಕೆ ಮೊಟಕುಗೊಳಿಸಿ ಶಿಕ್ಷಣದ ಭವಿಷ್ಯವನ್ನು ಹಾಳು ಮಾಡುತ್ತಿದ್ದಾರೆ. ಬಡ ಕುಟುಂಬಗಳಲ್ಲಿ ಆರ್ಥಿಕ ತೊಂದರೆಯಿಂದ ಮಕ್ಕಳನ್ನು ಓದಿಸಲು ಹಿಂಜರಿಯುತ್ತಾರೆ. ಆದರೆ ಏನೆ ಕಷ್ಟ ಬಂದರೂ ಅಕ್ಷರ ಜ್ಞಾನ ಕಲಿಸಿದರೆ ಮುಂದೊಂದು ದಿನ ಇಡೀ ಕುಟುಂಬನ್ನೇ ಸಾಕುವ ಶಕ್ತಿ ಮಕ್ಕಳಲ್ಲಿ ಬೆಳೆಯುತ್ತದೆ. ಶಿಕ್ಷಕರು ಎಲ್ಲಾ ಮಕ್ಕಳನ್ನು ಸಮಾನತೆಯಿಂದ ಕಾಣಬೇಕು”

                – ವಿಣಾಶ್ರೀ ವಿದ್ಯಾರ್ಥಿನಿ. 6ನೇ ತರಗತಿ.

ಈ ಸಂದರ್ಭದಲ್ಲಿ ಗ್ರಾ.ಪಂ ಅಧ್ಯಕ್ಷ ಜ್ಯೋತಿಲಿಂಗಪ್ಪ, ಸದಸ್ಯೆ ಮಂಜಮ್ಮ, ಎಸ್ ಡಿಎಂಸಿ ಅಧ್ಯಕ್ಷರಾದ ಸುರೆಶ್, ಸುಭಾನ್, ಮುಖ್ಯ ಶಿಕ್ಷಕ ಎನ್.ಮಂಜುನಾಥ್, ಶಿಕ್ಷಕರಾದ ಆಂಜನೇಯ, ಎನ್.ಎಚ್ ಬಸವರಾಜಪ್ಪ, ಎನ್.ನಟರಾಜ್, ಗೋವಿನಾಯ್ಕ, ಆರ್. ದುರುಗಪ್ಪ ಸೇರಿದಂತೆ ಮತ್ತಿತರಿದ್ದರು.

 

 

Share this Article
Leave a comment

Leave a Reply

Your email address will not be published. Required fields are marked *

error: Content is protected !!