ಜಗಳೂರು ಸುದ್ದಿವಿಜಯ: ಹಳೆ ದ್ವೇಷದ ಕಾರಣಕ್ಕೆ ತಾಲೂಕಿನ ಕಟ್ಟಿಗೆಹಳ್ಳಿ ಗ್ರಾಮದ ಕೆ.ಎಸ್.ಬಸವರಾಜಪ್ಪ ಎಂಬುವರ ಪುತ್ರ ಎಸ್.ಬಿ.ಪ್ರದೀಪ್ ಅವರ ಹೊಲದಲ್ಲಿ ಗುರುವಾರ ರಾತ್ರಿ ನಾಟಿ ಮಾಡಲಾಗಿದ್ದ ಅಡಕೆ ಸಸಿಗಳನ್ನು ದುಷ್ಕರ್ಮಿಗಳು ಕಿತ್ತುಹಾಕಿದ್ದಾರೆ.
ಕಟ್ಟಿಗೆಹಳ್ಳಿ ಗ್ರಾಮದಿಂದ ಒಂದು ಕಿಮೀ ದೂರವಿರುವ ರಸ್ತೆಮಾಕುಂಟೆ ಗೊಲ್ಲರಹಟ್ಟಿ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯ ಪಕ್ಕದಲ್ಲೇ ಇರುವ ಹೊಲದಲ್ಲಿ ಕಳದ 25 ದಿನಗಳ ಹಿಂದೆ ಎಸ್.ಬಿ.ಪ್ರದೀಪ್ ಅವರು ನಾಲ್ಕು ಎಕರೆ ಅಡಕೆ ಸಸಿಗಳನ್ನು ನಾಟಿ ಮಾಡಿದ್ದರು.
ನಾಟಿ ಮಾಡಿದ ಸಸಿಗಳಲ್ಲಿ ಅಂದಾಜು 30ಕ್ಕೂ ಹೆಚ್ಚು ಸಸಿಗಳನ್ನು ರಾತ್ರೋ ರಾತ್ರಿ ಬಂದು ಕೆಲ ಕಿಡಿಗೇಡಿಗಳು ಕಿತ್ತು ಹಾಕಿದ್ದಾರೆ. ಕಿರಾತರ ಕೃತ್ಯದಿಂದ ಅಂದಾಜು 15 ಸಾವರ ಮೌಲ್ಯದ ಸಸಿಗಳು ನಾಶವಾಗಿವೆ.

ಜಗಳೂರು ಪೊಲೀಸ ಅಧಿಕಾರಿಗಳಿಗೆ ಪ್ರದೀಪ್ ಅವರು ಈ ವಿಷಯ ತಿಳಿಸಿದ್ದು ಜಮೀನಿಗೆ ಭೇಟಿ ನೀಡಿದ ಸಬ್‍ಇನ್‍ಸ್ಪೆಕ್ಟರ್ ಎಸ್.ಡಿ.ಸಾಗರ್ ಹಾಗೂ ಪೊಲೀಸರ ತಂಡ ಪರಿಶೀಲಿಸಿತು. ನಂತರ ಗ್ರಾಮದಲ್ಲಿ ಕೆಲ ಯುವಕರನ್ನು ವಿಚಾರಣೆ ಮಾಡಿದರು.
ವ್ಯಕ್ತಿಗತ ದ್ವೇಷಕ್ಕೆ ನಾಟಿ ಮಾಡಿದ ಅಡಕೆ ಸಸಿಗಳನ್ನು ನಾಶ ಮಾಡಿದರೆ ಗ್ರಾಮದಲ್ಲಿ ದ್ವೇಷಮಯ ವಾತಾವರಣ ನಿರ್ಮಾಣವಾಗುತ್ತದೆ. ಗ್ರಾಮದಲ್ಲಿ ಸೌಹಾರ್ಧತೆ ಕಾಪಾಡಿಕೊಳ್ಳಬೇಕು.

ಇನ್ನು ಮುಂದೆ ಇಂತಹ ಪ್ರಕರಣಗಳು ಮರು ಕಳಿಸಬಾರದು. ಮತ್ತೊಮ್ಮೆ ಈ ರೀತಿ ಘಟನೆ ನಡೆದರೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿ ಕಾನೂನು ಮೂಲಕ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು. ಯಾರೂ ಈ ರೀತಿ ಮಾಡಬಾರದು.
ವ್ಯಕ್ತಿಘತ ದ್ವೇಷಗಳಿದ್ದರೆ ಸೌಹಾರ್ಧತೆಯಿಂದ ಬಗೆಹರಿಸಿಕೊಳ್ಳಬೇಕು. ಈ ರೀತಿ ಕೆಟ್ಟ ಕೆಲಸ ಮಾಡುವವರು ಹೇಡಿಗಳಿಗೆ ಸಮ ಎಂದು ರೈತ ಪ್ರದೀಪ್ ಹೇಳಿದರು.