ಬಡವರಿಗೆ 2.95 ಕೋಟಿ ಮನೆಗಳ ನಿರ್ಮಾಣ ಪ್ರಧಾನಿ ಗುರಿ: ಸಂಸದ ಜಿ.ಎಂ.ಸಿದ್ದೇಶ್ವರ್

Suddivijaya
Suddivijaya June 26, 2023
Updated 2023/06/26 at 11:09 AM

ಸುದ್ದಿವಿಜಯ, ಜಗಳೂರು: ಸೂರಿಲ್ಲದ ಬಡವರಿಗೆ ಸೂರು ಕಲ್ಪುಸಲು ನಮ್ಮ ಹೆಮ್ಮೆಯ ಪ್ರಧಾನಿ ನರೇಂದ್ರ ಮೋದಿ ಅವರು ಈ ವರ್ಷ 9.95 ಕೋಟಿ ಮನೆಗಳ ನಿರ್ಮಾಣಕ್ಕೆ ಗುರಿ ಹಾಕಿಕೊಂಡಿದ್ದಾರೆ ಎಂದು
ಸಂಸದ ಜಿ.ಎಂ ಸಿದ್ದೇಶ್ವರ್ ಹೇಳಿದರು.

ತಾಲೂಕಿನ ಅಸಗೋಡು ಗ್ರಾಮದಲ್ಲಿ ಸೋಮವಾರ ಜಿಲ್ಲಾ ಪಂಚಾಯತ್, ತಾಲೂಕು ಪಂಚಾಯತ್ ಸಹಾಯೋಗದಲ್ಲಿ ಪ್ರಧಾನ ಮಂತ್ರಿಗಳ ಆವಾಸ್( ಗ್ರಾಮೀಣ) ಯೋಜನೆಯ ಫಲಾನುಭವಿಗಳಿಗೆ ಹಕ್ಕು ಪತ್ರ ವಿತರಣಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.


ಎಲ್ಲಾ ವಸತಿ ರಹಿತರು ಮತ್ತು ಪಾಳುಬಿದ್ದ ಮನೆಗಳಲ್ಲಿ ವಾಸಿಸುವ ಕುಟುಂಬಗಳಿಗೆ ಪಕ್ಕಾ ಮನೆ ನಿರ್ಮಿಸಲು ಆರ್ಥಿಕ ನೆರವು ನೀಡಲಾಗುತ್ತದೆ. ಪ್ರಧಾನ ಮಂತ್ರಿ ಆವಾಸ್ ಯೋಜನೆಯೂ 2015 ರಲ್ಲಿ ಪ್ರಾರಂಭವಾಗಿದ್ದು, ಸಮಾಜದ ಆರ್ಥಿಕವಾಗಿ ದುರ್ಬಲ ವರ್ಗಗಳಿಗೆ ಕೈಗೆಟುಕುವ ದರದಲ್ಲಿ ವಸತಿ ಒದಗಿಸಲು ಭಾರತ ಸರಕಾರದ ಒಂದು ಉಪಕ್ರಮವಾಗಿದೆ.

ಯೋಜನೆಯು ಕೈಗೆಟುಕುವ ಬೆಲೆಯಲ್ಲಿ ಸುಮಾರು 20 ಮಿಲಿಯನ್ ಮನೆಗಳನ್ನು ನಿರ್ಮಿಸುವ ಗುರಿಯನ್ನು ಹೊಂದಿದೆ. ಪ್ರಧಾನ ಮಂತ್ರಿ ಆವಾಸ್ ಯೋಜನೆ ಗ್ರಾಮೀಣಯನ್ನು 2024 ರ ವರೆಗೆ ವಿಸ್ತರಿಸಲಾಗಿದೆ. ಪಕ್ಕಾ ಮನೆಗಳನ್ನು ನಿರ್ಮಿಸಿಕೊಡಲು ಕೇಂದ್ರ ಸರ್ಕಾರ ಸುಮಾರು 2,95 ಕೋಟಿ ಮನೆಗಳಿಗೆ ಪರಿಷ್ಕರಿಸಲಾಗಿದೆ.ಅರ್ಹ ಫಲಾನುಭವಿಗಳು ಇದರ ಸದುಪಯೋಗಪಡಿಸಿಕೊಂಡು ಉತ್ತಮ ಮನೆಗಳನ್ನು ನಿರ್ಮಿಸಿಕೊಳ್ಳಬಹುದಾಗಿದೆ ಎಂದರು.

ಪ್ರಧಾನಿಗಳು ಜನ್ ಧನ್ ಯೋಜನೆ, ಸ್ಕಿಲ್ ಇಂಡಿಯಾ ಮಿಷನ್, ಸಂಸದ್ ಆದರ್ಶ್ ಗ್ರಾಮ ಯೋಜನೆ, ಮಿಷನ್ ಸ್ವಚ್ಛ ಭಾರತ್, ಬೇಟಿ ಬಚಾವೋ ಬೇಟಿ ಪಢಾವೋ, ಪ್ರಧಾನ ಮಂತ್ರಿ ಮುದ್ರಾ ಯೋಜನೆ ಸೇರಿದಂತೆ ಪ್ರಧಾನ ಮಂತ್ರಿಗಳು ಸುಮಾರು 26 ಮಹತ್ವದ ಯೋಜನೆಗಳನ್ನು ಅನುಷ್ಠಾನಗೊಳಿಸಿದ್ದಾರೆ.

ಆಯುಷ್ಮಾನ್‍ಭಾರತ್ ಕಾರ್ಡ್ ಕಡ್ಡಾಯವಾಗಿ ಮಾಡಿ ಆರೋಗ್ಯ ಸೌಲಭ್ಯವನ್ನು ಪಡೆದುಕೊಳ್ಳಬೇಕು. 5 ಲಕ್ಷದವರೆಗೂ ಉಚಿತವಾಗಿ ಚಿಕಿತ್ಸೆ ನೀಡಲಾಗುತ್ತಿದೆ. ಇದನ್ನು ಬಡವರಿಗಾಗಿಯೇ ಮಾಡಲಾಗಿದೆ ಸದುಪಯೋಗ ಪಡಿಸಿಕೊಳ್ಳಬೇಕು. ಜನಧನ್‍ಖಾತೆ ತೆರೆಯದಿದ್ದರೇ ಮನೆಯ ನಿರ್ಮಿಸಿಕೊಂಡವರಿಗೆ ಹಣ ಹಾಕುವುದಿಲ್ಲ ಎಂದು ಸಲಹೆ ನೀಡಿದರು.
ಶಾಸಕ ಬಿ.ದೇವೇಂದ್ರಪ್ಪ ಅವರಿಗೆ ನನ್ನ ಸಹಕಾರವಿರುತ್ತದೆ:

ಎಸ್.ವಿ ರಾಮಚಂದ್ರ ಮಾಜಿ ಆಗಿರಬಹುದು ಆದರೆ ಕಳೆದ ಬಿಜೆಪಿ ಸರ್ಕಾರದ ಅವದಿಯಲ್ಲಿ ಭದ್ರಾ ಮೇಲ್ದಂಡೆ ಯೋಜನೆ, 57 ಕೆರೆಗಳಿಗೆ ನೀರು ತುಂಬಿಸುವ ಯೋಜನೆ, ಜಲಜೀವನ್‍ಮಿಷನ್‍ಯೋಜನೆ, ಬಹು ಗ್ರಾಮ ಕುಡಿಯುವ ನೀರು ಯೋಜನೆ ಸೇರಿದಂತೆ 4 ಸಾವಿರಕ್ಕೂ ಹೆಚ್ಚು ಕೋಟಿ ಅನುದಾನ ತಂದು ಅಭಿವೃದ್ದಿಗೆ ಒತ್ತು ನೀಡಿದ್ದರು. ಆದರೆ ಇದೀಗ ಹೊಸದಾಗಿ ಆಯ್ಕೆಯಾಗಿರುವ ಶಾಸಕ ಬಿ.ದೇವೇಂದ್ರಪ್ಪ ಅವರಿಗೆ ನನ್ನ ಸಹಕಾರವಿರುತ್ತದೆ. ಅವರು ನನ್ನನ್ನು ಉಪಯೋಗಿಸಿಕೊಳ್ಳಲಿ ಎಂದರು.

ಮಾಜಿ ಶಾಸಕ ಎಸ್.ವಿ ರಾಮಚಂದ್ರ ಮಾತನಾಡಿ, ಮನೆ ತಂದುಕೊಟ್ಟವನು ನಾನು ಕೊಡುವುದಕ್ಕೆ ಅವಕಾಶವಿಲ್ಲ, ಸೋತರು ನಿಮ್ಮನ್ನು ನೋಡಬೇಕು ಎನ್ನುವ ಆಸೆಯಿಂದ ಬಂದಿದ್ದೇನೆ. ಎಲ್ಲರಿಗೂ ಸೂರು -ನೀರು ಒದಿಸುವ ಕೆಲಸ ಮಾಡಿದ್ದೇನೆ, ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಆಸೆಯಂತೆ ಫಲಾನುಭವಿಗಳಿಗೆ ಹಕ್ಕು ಪತ್ರ ನೀಡಲಾಗಿದೆ ಎಂದರು.

ಈ ಸಂದರ್ಭದಲ್ಲಿ ತಾ.ಪಂ ಇಒ ಚಂದ್ರಶೇಖರ್, ಪಿಡಿಒಗಳಾದ ಮರುಳಸಿದ್ದಪ್ಪ, ತಿಮ್ಮೇಶ್, ವಾಸು, ಗ್ರಾ.ಪಂ ಅಧ್ಯಕ್ಷರಾದ ರೇಣುಕಮ್ಮ ಸಿದ್ದೇಶ್, ಹಾಲೇಕಲ್ಲು ಬಸವರಾಜಪ್ಪ, ಉಪಾಧ್ಯಕ್ಷೆ ನಾಗಮ್ಮ, ಬಿಜೆಪಿ ತಾಲೂಕು ಅಧ್ಯಕ್ಷ ಎಚ್.ಸಿ ಮಹೇಶ್, ಮಾಜಿ ಜಿ.ಪಂ ಸದಸ್ಯ ಎಸ್.ಕೆ ಮಂಜುನಾತ್, ಶಿವಕುಮಾರ್‍ಸ್ವಾಮಿ, ವಸತಿ ಯೋಜನಾಧಿಕಾರಿ ತಿಮ್ಮೇಶ್, ಗ್ರಾ.ಪಂ ಸದಸ್ಯರಾದ ಜಿ.ಎಂ ರವಿಕುಮಾರ್, ನಾಗರಾಜ್, ಎಚ್.ಆರ್ ಬಸವರಾಜ್, ಶಂಕರಪ್ಪ, ನಸರುಲ್ಲಾ, ವೀರಮ್ಮ,ಶಿಲ್ಪಾ, ಸರೋಜಮ್ಮ, ಲಲೀತಮ್ಮ, ರೇಷ್ಮಾ, ಶಕುಂತಲಮ್ಮ, ರೇಣುಕಮ್ಮ ಸೇರಿದಂತೆ ಮತ್ತಿತರಿದ್ದರು.

 

Share this Article
Leave a comment

Leave a Reply

Your email address will not be published. Required fields are marked *

error: Content is protected !!