suddivijayanews20/07/2024
ಸುದ್ದಿವಿಜಯ, ಜಗಳೂರು: ತಾಲೂಕಿನ ಗೌರಿಪುರ ಗ್ರಾಮದ ವೈ.ಪಿ.ಸಿದ್ದನಗೌಡ ಎಂಬ ವ್ಯಕ್ತಿಯು ಚಿತ್ರ ಬರಹಗಾರ ಟಿ.ಹರೀಶ್‍ಗೆ ಪಟ್ಟಣದ ಹೃದಯ ಭಾಗವಾದ ಮರೇನಹಳ್ಳಿ ರಸ್ತೆಯಲ್ಲಿ ಬೆಳಿಗ್ಗೆಯೇ ಮಚ್ಚು ಬೀಸಿ ಕೊಲೆ ಮಾಡಲು ಮುಂದಾಗಿದ್ದು ನನ್ನ ಭುಜಕ್ಕೆ ಗಾಯವಾಗಿದೆ ಎಂದು ಹರೀಶ್ ಪಟ್ಟಣದ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಜುಲೈ 17 ರಂದು ಬೆಳಿಗ್ಗೆ 9.45 ರ ಸುಮಾರಿಗೆ ಚಿತ್ರಕಲಾವಿದರಾದ ಹರೀಶ್ ಎನ್‍ಆರ್‍ಇಜಿ ಬೋರ್ಡ್ ಬರೆಯಲು ಜಮ್ಮಾಪುರ ಗ್ರಾಮಕ್ಕೆ ಬೈಕ್‍ನಲ್ಲಿ ತೆರಳುತ್ತಿದ್ದಾಗ ಅಡ್ಡ ತಡೆದ ವೈ.ಪಿ.ಸಿದ್ದನಗೌಡ ಎಂಬ ವ್ಯಕ್ತಿಯು ಹರೀಶ್ ಅವರನ್ನು ತಡೆದು ಅವಾಚ್ಯ ಶಬ್ಧಗಳಿಂದ ನಿಂದಿಸಿ ಕೈಯಲ್ಲಿದ್ದ ಮಚ್ಚು ಬೀಡಿದ್ದಾನೆ. ತಕ್ಷಣವೇ ಕ್ಷಣಾರ್ಧದಲ್ಲೇ ತಪ್ಪಿಸಿಕೊಂಡ ಹರೀಶ್ ಸಾವಿನಿಂದ ಪಾರಾಗಿದ್ದಾರೆ.
ಘಟನೆ ಹಿನ್ನೆಲೆ: ಸಿದ್ದನಗೌಡ ಮತ್ತು ಹರೀಶ್ ಇಬ್ಬರು ದೂರದ ಸಂಬಂಧಿಕರು. ಸಿದ್ದನಗೌಡನ ದೊಡ್ಡಪ್ಪನ ಮಗಳನ್ನೇ ಮದುವೆಯಾಗಿರು ಹರೀಶ್ ಜಗಳೂರು ಪಟ್ಟಣದಲ್ಲೇ ವಾಸವಾಗಿದ್ದಾರೆ.
ಇತ್ತೀಚೆಗೆ ಸಿದ್ದನಗೌಡ ಮತ್ತು ಹರೀಶ್ ಅವರ ಪತ್ನಿಯ ಸಹೋದರರ ಮಧ್ಯೆ ಗೌರಿಪುರ ಗ್ರಾಮದಲ್ಲಿ ಗಲಾಟೆಯಾಗಿತ್ತು. ಅದರಲ್ಲಿ ಹರೀಶ್ ಕೈವಾಡವಿದೆ ಎಂದು ಅನುಮಾನಿಸಿ ಏಕಾಏಕಿ ಹರೀಶ್‍ನನ್ನು ತಡೆದು ಅವಾಚ್ಯ ಶಬ್ಧಗಳಿಂದ ನಿಂದಿಸಿದ್ದಾನೆ.
ತಕ್ಷಣವೇ ಆತನ ಕೈಯಲ್ಲಿದ್ದ ಮಚ್ಚುನ್ನು ಹರೀಶ್ ತಲೆಗೆ ಬೀಸಿದ್ದಾನೆ. ತಪ್ಪಿಸಿಕೊಂಡಾಗ ಅವರ ಭುಜಕ್ಕೆ ಮಚ್ಚು ತಾಗಿ ಬಲವಾದ ಏಟು ಬಿದ್ದಿದೆ.
ಗೌರಿಪುರಕ್ಕೆ ಎಷ್ಟೋ ವರ್ಷಗಳಿಂದ ಹೋಗದ ಹರೀಶ್ ಮೇಲೆ ಅನುಮಾನಿಸಿ ಗಲಾಟೆಗೆ ನೀನೇ ಕಾರಣ ಎಂದು ಉದ್ದೇಶಪೂರ್ವಕವಾಗಿ ಏಕಾ ಏಕಿ ಹಲ್ಲೆ ಮಾಡಿದ ಸಿದ್ದನಗೌಡ ವಿರುದ್ಧ ಜಗಳೂರು ಪಟ್ಟಣದ ಪೊಲೀಸ್ ಠಾಣೆಯಲ್ಲಿ ಎಫ್‍ಐಆರ್ ದಾಖಲಾಗಿದೆ.
307 ಪ್ರಕರಣ ದಾಖಲಾಗುತ್ತಿದ್ದಂತೆ ಸಿದ್ದನಗೌಡ ತಲೆಮರೆಸಿಕೊಂಡಿದ್ದಾನೆ. ಇನ್‍ಸ್ಪೆಕ್ಟರ್ ಡಿ.ಶ್ರೀನಿವಾಸ್‍ರಾವ್ ಮತ್ತು ಪಿಎಸ್‍ಐ ಎಸ್.ಡಿ. ಸಾಗರ್ ನೇತೃತ್ವದಲ್ಲಿ ಪೊಲೀಸರು ತಂಡ ರಚಿಸಿದ್ದು ಆರೋಪಿ ಪತ್ತೆಗೆ ಬಲೆ ಬೀಸಿದ್ದಾರೆ.