ಸಮಾಜ ಕಲ್ಯಾಣಾಧಿಕಾರಿ ಮಹೇಶ್ವರಪ್ಪ ಅರ್ಥಪೂರ್ಣವಾಗಿ ಜನ್ಮದಿನ ಆಚರಣೆ!

Suddivijaya
Suddivijaya July 23, 2023
Updated 2023/07/23 at 8:02 AM

ಸುದ್ದಿವಿಜಯ, ಜಗಳೂರು: ತಾಲೂಕಿನ ಕಲ್ಲೇದೇವರ ಪುರ ಗ್ರಾಮದ ಶ್ರೀಕಲ್ಲೇಶ್ವರ ಪ್ರೌಢಶಾಲೆ ಆವರಣದಲ್ಲಿ ಮಕ್ಕಳ ಜೊತೆ ಸಮಾಜ ಕಲ್ಯಾಣ ಇಲಾಖೆ‌ ಸಹಾಯಕ ನಿರ್ದೇಶಕ‌ ಬಿ. ಮಹೇಶ್ವರಪ್ಪ ಹುಟ್ಟುಹಬ್ಬವನ್ನು ಸರಳವಾಗಿ ಆಚರಿಸಿಕೊಂಡರು.

ಮಧ್ಯಾಹ್ನದ ಬಿಸಿಯೂಟ ಸೇವಿಸಲು ವಿದ್ಯಾರ್ಥಿಗಳಿಗೆ ಉಚಿತವಾಗಿ ತಟ್ಟೆ ಲೋಟ,ಹಾಗೂ ಮಕ್ಕಳ ಕಲಿಕೆಗಾಗಿ ಕಂಪ್ಯೂಟರ್ ವಿತರಿಸಿ ಅವರು ಮಾತನಾಡಿದರು.

ನಾನು ಸುಮಾರು 27 ವರ್ಷಗಳ ಕಾಲ ಜಗಳೂರು ತಾಲೂಕಿನ ಸಮಾಜ ಕಲ್ಯಾಣ ಇಲಾಖೆಯಲ್ಲಿ ಪ್ರಥಮ‌ ದರ್ಜೆ ಸಹಾಯಕ ನಾಗಿ ಸೇರ್ಪಡೆಗೊಂಡೆ ನಂತರ ನಾನು ವ್ಯವಸ್ಥಾಪಕನಾಗಿ, ಸಹಾಯಕ ನಿರ್ದೇಶಕನಾಗಿ ಮುಂಬಡ್ತಿಯಾಗಿ ಸೇವೆ ಸಲ್ಲಿಸುತ್ತಿದ್ದು.

ಇನ್ನೇನು ಕೆಲವೇ ದಿನಗಳಲ್ಲಿನಿವೃತ್ತಿ ಅಂಚಿನಲ್ಲಿ ರುವ ನನ್ನ ಹುಟ್ಟು ಹಬ್ಬ ವನ್ನು ಶಾಲಾ‌ ಮಕ್ಕಳೊಂದಿಗೆ ಆಚರಿಸಿ ಕೊಂಡಿರುವುದು ಹಿತೈಷಿಗಳ ಅಭಿಲಾಷೆಗೆ ಬದ್ದನಾಗಿರುವೆ ಎಂದರು‌.

ಕೆಪಿಸಿಸಿ ಎಸ್ ಟಿ ಘಟಕದ ರಾಜ್ಯಾಧ್ಯಕ್ಷ ಕೆ.ಪಿ ಪಾಲಯ್ಯ ಮಾತ ನಾಡಿ, ಜಗಳೂರು ತಾಲೂಕಿನ ಸಾವಿರಾರು ಬಡ ವಿದ್ಯಾರ್ಥಿ ಗಳಿಗೆ ಸರಕಾರಿ ಹಾಸ್ಟೆಲ್ ಸೌಲಭ್ಯ ದಿಂದ ಭವಿಷ್ಯ ರೂಪಿಸಿದ ಸಹಾಯಕ‌ ನಿರ್ದೇಶಕ ಅಧಿಕಾರಿ ಬಿ. ಮಹೇಶ್ವರಪ್ಪ ಅವರು ನಿವೃತ್ತಿಗೆ ಕೆಲದಿನಗಳು ಬಾಕಿ ಇದ್ದು.

ಇವರ ಹುಟ್ಟುಹಬ್ಬವನ್ನು ಸರಳ ವಾಗಿ ಶ್ರೀ ಕಲ್ಲೇಶ್ವರ ಗ್ರಾಮಾಂತರ ಪ್ರೌಢಶಾಲೆಯ ವಿದ್ಯಾರ್ಥಿಗಳ ಸಮ್ಮುಖದಲ್ಲಿ ಆಚರಿಸಿ ಕೊಳ್ಳುತ್ತಿರುವುದು ನಿಜಕ್ಕೂ ಶ್ಲಾಘನೀಯ ಇದೇ ಶಾಲೆಗೆ ತಟ್ಟೆ ಲೋಟ ಮತ್ತು ಕಂಪ್ಯೂಟರ್ ವಿತರಣೆ ಮಾಡುತ್ತಿರುವುದು ಮುಂದಿನ ವಿದ್ಯಾರ್ಥಿಗಳ ಭವಿಷ್ಯಕ್ಕಾಗಿ ಎಂದರು.

ಈ ಸಂದರ್ಭದಲ್ಲಿ ಮಾಜಿ ತಾಲೂಕು ಪಂಚಾಯಿತಿ ಸದಸ್ಯರಾದ ಸಣ್ಣಸೂರಯ್ಯ, ನಿವೃತ್ತ ಶಿಕ್ಷಕ ಕೃಷ್ಣಮೂರ್ತಿ.

ಬಡಯ್ಯ,ಹಿರಿಯ ಪತ್ರಕರ್ತ ದೊಣ್ಣೆಹಳ್ಳಿ ಗುರುಮೂರ್ತಿ ಮುಖಂಡರಾದ ಕೊಟ್ಟಿಗೆ ತಿಪ್ಪೇಸ್ವಾಮಿ,ಪ್ರಸನ್ನ.ಮುಖ್ಯ ಶಿಕ್ಷಕರಾದ ರಮೇಶ್ ನಾಯ್ಕ.

ಸಹ ಶಿಕ್ಷಕರಾದ ತಿಪ್ಪೇಸ್ವಾಮಿ. ಚಿತ್ತಯ್ಯ.ನಾಗರಾಜ್ ನಾಯ್ಕ. ಚೈತ್ರ ಟಿ. ಅನಂತ್.ಸೇರಿದಂತೆ, ಬಿಸಿ ಊಟದ ಸಿಬ್ಬಂದಿಗಳು ಸಹಾಯಕರು ಗ್ರಾಮಸ್ಥರು ಭಾಗವಹಿಸಿದ್ದರು.

Share this Article
Leave a comment

Leave a Reply

Your email address will not be published. Required fields are marked *

error: Content is protected !!