ಸುದ್ದಿವಿಜಯ, ಜಗಳೂರು:ಬಕ್ರೀದ್ ತ್ಯಾಗ-ಬಲಿದಾನವನ್ನು ಸ್ಮರಿಸುವ ಮಹತ್ವದ ಹಬ್ಬವಾಗಿದೆ ಎಂದು ಶಾಸಕ ಚಿಕ್ಕಮ್ಮನಹಟ್ಟಿ ಬಿ. ದೇವೇಂದ್ರಪ್ಪ ಹೇಳಿದರು.
ಇಲ್ಲಿನ ಈದ್ಗಾ ಮೈದಾನದಲ್ಲಿ ಗುರುವಾರ ಮುಸ್ಲಿಂ ಸಮುದಾಯದಿಂದ ಬಕ್ರೀದ್ ಹಬ್ಬದ ಹಿನ್ನೆಲೆ ಹಮ್ಮಿಕೊಂಡಿದ್ದ ಸಾಮೂಹಿಕ ಪ್ರಾರ್ಥನೆಯಲ್ಲಿ ಭಾಗವಹಿಸಿ ಮಾತನಾಡಿದರು.
ತ್ಯಾಗವನ್ನು ಈ ಬಕ್ರೀದ್ ಸಾಂಕೇತಿಕರಿಸುತ್ತದೆ, ಹೀಗಾಗಿ ಪ್ರವಾದಿ ಹಜರತ್ ಇಬ್ರಾಹಿಂ ಅವರ ಜೀವನ ತತ್ವ, ದೈವ ನಿಷ್ಠೆ ತ್ಯಾಗಗುಣದೊಂದಿಗೆ ಬಕ್ರೀದ್ ಹಬ್ಬ ಬೆಸೆದುಕೊಂಡಿದೆ ಎಂದರು.
ತಾಲೂಕಿನ ಹಿಂದು-ಮುಸ್ಲಿಂ ಎಂಬ ಬೇಧ, ಭಾವವಿಲ್ಲದೇ ಎಲ್ಲರು ಶಾಂತಿ ಸೌಹಾರ್ಧತೆ, ಸಾಮರಸ್ಯದಿಂದ ಬದುಕುತ್ತಿದ್ದೇವೆ.
ಭಾರತೀಯರು ನಾವೇಲ್ಲರೂ ಒಂದೂ ಎಂಬ ಭಾವನೆ ಎಲ್ಲರಲ್ಲೂ ಮೂಡಬೇಕು. ಸಮುದಾಯದ ಅಭಿವೃದ್ದಿಗೆ ಬೇಕಾದ ಒತ್ತು ನೀಡಲಾಗುವುದು, ಮುಂದಿನ ದಿನಗಳಲ್ಲಿ ಎಲ್ಲರೊಂದಿಗೆ ಚರ್ಚಿಸಿ ಅಗತ್ಯ ಸೌಲಭ್ಯಗಳನ್ನು ಕಲ್ಪಿಸಲಾಗುವುದು ಎಂದರು.
ಕೆಪಿಸಿಸಿ ಎಸ್ಟಿ ಘಟಕ ಅಧ್ಯಕ್ಷ ಕೆ. ಪಿ ಪಾಲಯ್ಯ ಮಾತನಾಡಿ, ಮುಸ್ಲೀಂ ಸಮುದಾಯ ಬಕ್ರೀದ್ ಹಬ್ಬದಲ್ಲಿ ದಾನ, ಧರ್ಮದ ಮೂಲಕ ಮಾನವೀಯತೆ ತೋರಿಸುತ್ತಾರೆ ಎಂದರು.
ಬೆಳಗ್ಗೆ ಶ್ವೇತವಸ್ತ್ರ ಧರಿಸಿದ ಪುರುಷರು ಹಾಗೂ ಮಕ್ಕಳು ಪಟ್ಟಣದ ಈದ್ಗಾ ಮೈದಾನದಲ್ಲಿ ಸಮಾವೇಶಗೊಂಡು ಪರಸ್ಪರ ಆಲಂಗಿಸಿ ಶುಭಾಶಯ ವಿನಿಮಯ ಮಾಡಿಕೊಂಡರು. ನಂತರ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು.
ಧರ್ಮಗುರು ಪ್ರವಾದಿ ಹಜರತ್ ಇಬ್ರಾಹಿಂ ಅವರ ತ್ಯಾಗ, ಬಲಿದಾನ, ಅಚಲ ದೈವಭಕ್ತಿ ಹಾಗೂ ಅವರ ಪುತ್ರ ಹಜರತ್ ಇಸ್ಮಾಯಿಲ್ ಅವರ ದೈವಭಕ್ತಿಯನ್ನು ಸಾಂಕೇತಿಕರಿಸುವ
ಬಕ್ರೀದ್ ತ್ಯಾಗ-ಬಲಿದಾನವನ್ನು ಸ್ಮರಿಸುವ ಮೂಲಕ ಹಬ್ಬದ ಮಹತ್ವ ತಿಳಿಸಿದರು. ಬಲಿದಾನಗಳ ಸಂಕೇತವಾದ ಬಕ್ರೀದ್ ಹಬ್ಬವನ್ನು ಪಟ್ಟಣ ಸೇರಿದಂತೆ ತಾಲೂಕಿನ ಎಲ್ಲ ಹಳ್ಳಿಗಳಲ್ಲಿ ಮುಸ್ಲಿಂ ಭಾಂದವರು ಶ್ರದ್ದೆ ಭಕ್ತಿಯಿಂದ ಆಚರಿಸಿದರು.
ಈ ಸಂದರ್ಭದಲ್ಲಿ ಕೆಪಿಸಿಸಿ ಸದಸ್ಯ ಕಲ್ಲೇಶ್‌ರಾಜ್ ಪಟೇಲ್, ಹಿರಿಯ ಮುಖಂಡ ಇಮಾ ಅಲಿ, ಮಹಮದ್ ಅನ್ವರ್, ಖಲಂದರ್, ಮಾಜಿ ಪ.ಪಂ ಅಧ್ಯಕ್ಷ ಇಕ್ಬಾಲ್ ಖಾನ್, ಮಹಮದ್ ಗೌಸ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಷಂಷೀರ್ ಅಹಮದ್, ಸದಸ್ಯರಾದ ಮಹಮದ್, ಶಕೀಲ್, ಮುಖ್ಯಾಧಿಕಾರಿ ಲೋಕ್ಯನಾಯ್ಕ, ಪಲ್ಲಾಗಟ್ಟೆ ಶೇಖರಪ್ಪ ಸೇರಿದಂತೆ ಮತ್ತಿತರಿದ್ದರು.