ಬಿಜೆಪಿ ತೊರೆದು ಕಾಂಗ್ರೆಸ್ ಸರ್ಪಡೆಗೊಂಡ ಕ್ಯಾಸೇನಹಳ್ಳಿ ಗ್ರಾ.ಪಂ ಅಧ್ಯಕ್ಷ ಹಾಗೂ ಸದಸ್ಯರು,ಮುಖಂಡರು.

Suddivijaya
Suddivijaya May 3, 2023
Updated 2023/05/03 at 6:11 AM

Suddivijaya|Kannada News|03-05+2023

ಸುದ್ದಿವಿಜಯ ಜಗಳೂರು.
ತಾಲೂಕಿನ ಕ್ಯಾಸೇನಹಳ್ಳಿ ಗ್ರಾಮ ಪಂಚಾಯಿತಿಯ ಅಧ್ಯಕ್ಷ ಟಿ. ನಾಗರಾಜ್ ಸೇರಿದಂತೆ ಹತ್ತಾರು ಮುಖಂಡರು ಬಿಜೆಪಿ ತೊರೆದು ಬುಧವಾರ ಕೆಪಿಸಿಸಿ ಎಸ್ಟಿ ಘಟಕದ ರಾಜ್ಯಾಧ್ಯಕ್ಷ ಕೆ.ಪಿ ಪಾಲಯ್ಯ ಇವರ ನೇತೃತ್ವದಲ್ಲಿ ಅಧಿಕೃತವಾಗಿ ಕಾಂಗ್ರೆಸ್ ಸೇರ್ಪಡೆಗೊಂಡರು.

ಗ್ರಾ.ಪಂ ಸದಸ್ಯ ಕ್ಯಾಸೇನಹಳ್ಳಿ ಹನುಮಂತಪ್ಪ, ಮುಖಂಡರಾದ ಕಾಡಜ್ಜಿ ಬಸವರಾಜಪ್ಪ, ಬೀಮಜ್ಜರು ರಾಮಪ್ಪ, ಮತ್ತಿಗೆರೆ ರಾಮಚಂದ್ರಪ್ಪ. ಶೆಟ್ಟಪ್ಪರು ರಾಮಚಂದ್ರಪ್ಪ, ಓಬಳೇಶ್, ಶಿವಣ್ಣ, ಪೂಜಾರಿ ಓಬಳೇಶ್ ಸೇರಿದಂತೆ ಇತರರು ಕಾಂಗ್ರೆಸ್ ಕೈ ಹಿಡಿದು ಚಿಕ್ಕಮ್ಮನಹಟ್ಟಿ ದೇವೇಂದ್ರಪ್ಪ ಗೆಲುವಿಗೆ ಸಾಥ್ ನೀಡಿದ್ದಾರೆ.

ಅನೇಕ ವರ್ಷಗಳಿಂದಲೂ ಬಿಜೆಪಿಯಲ್ಲಿದ್ದ ಇವರು ಪಕ್ಷದಲ್ಲಿನ ಅಸಮಾಧಾನ, ಅಭಿವೃದ್ದಿ ಹಿನ್ನೆಡೆ ಹೀಗೆ ಅನೇಕ ಕಾರಣಗಳಿಂದ ಬೇಸತ್ತು. ಕಾಂಗ್ರೆಸ್ ಪಕ್ಷದ ತತ್ವ ಸಿದ್ದಾಂತ ಹಾಗೂ ಬಡವ, ದೀನ, ದಲಿತರ ಅಭಿವೃದ್ದಿಗೆ ಒತ್ತು ನೀಡುತ್ತಿರುವುದನ್ನು ಮನಗಂಡು ಕಾಂಗ್ರೆಸ್ ಪಕ್ಷವನ್ನು ಸೇರಿಕೊಂಡಿದ್ದೇವೆ ಎಂದು ತಿಳಿಸಿದರು.

ಕೆಪಿಸಿಸಿ ಎಸ್ಟಿ ಘಟಕದ ರಾಜ್ಯಾಧ್ಯಕ್ಷ ಕೆ.ಪಿ ಪಾಲಯ್ಯ ಮಾತನಾಡಿ, ರಾಜ್ಯದಲ್ಲಿ ಪ್ರತಿಯೊಬ್ಬರು ನೆಮ್ಮದಿಯಿಂದ ಬದುಕಬೇಕು, ಬೆಲೆ ಏರಿಕೆಯಿಂದ ದೂರವಿರಬೇಕು ಎಂದರೆ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರಬೇಕು, ಕಳೆದ ಐದು ವರ್ಷಗಳಲ್ಲಿ ಬಿಜೆಪಿ ಸರ್ಕಾರ ನಡೆಸಿದ ಭ್ರಷ್ಟ ಆಡಳಿತ, ಕಮಿಷನ್ ದಂಧೆ, ಧರ್ಮ ಧರ್ಮಗಳ ನಡುವೆ ಬಿತ್ತುವ ವಿಷ ಬೀಜಗಳಿಂದ ಜನರು ಸಾಕಷ್ಟು ನೋಂದು ಹೋಗಿ ಬಿಜೆಪಿ ವಿರುದ್ದ ತಿರುಗಿ ಬಿದ್ದಿದ್ದಾರೆ ಎಂದರು.

ಈ ಎಲ್ಲಾ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ಕ್ಷೇತ್ರದಲ್ಲಿ ಬಿಜೆಪಿ ಸೇರಿದಂತೆ ವಿವಿಧ ಪಕ್ಷಗಳನ್ನು ತೊರೆದು ಕಾಂಗ್ರೆಸ್ ಅಪ್ಪಿಕೊಳ್ಳುತ್ತಿದ್ದಾರೆ. ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ದೇವೇಂದ್ರಪ್ಪ ಹೆಚ್ಚು ಮತಗಳ ಅಂತರದಿಂದ ಗೆದ್ದು ವಿಜಯ ಮಾಲೆ ಹಾಕಿಸಿಕೊಳ್ಳಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಒಬಿಸಿ ಅಧ್ಯಕ್ಷ ಅಹಮದ್ ಅಲಿ, ಮಾಜಿ ಗ್ರಾ.ಪಂ ಅಧ್ಯಕ್ಷ ಅಜ್ಜಯ್ಯ, ಮಡ್ರಳ್ಳಿ ಗಿರೀಶ್ ಸೇರಿದಂತೆ ಮತ್ತಿತರಿದ್ದರು.

 

Share this Article
Leave a comment

Leave a Reply

Your email address will not be published. Required fields are marked *

error: Content is protected !!