ಸುದ್ದಿವಿಜಯ, ಜಗಳೂರು: ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಎಸ್. ವಿ ರಾಮಚಂದ್ರ ಅವರು ಕೆಲವೇ ಮತಗಳ ಅಂತರದಿಂದ ಪರಾಭಗೊಂಡಿದ್ದಾರೆ. ಮತದಾರರ ತೀರ್ಪಿಗೆ ತಲೆ ಬಾಗುತ್ತೇವೆ ಎಂದು ಬಿಜೆಪಿ ತಾಲೂಕಾಧ್ಯಕ್ಷ ಎಚ್.ಸಿ ಮಹೇಶ್ ತಿಳಿಸಿದರು.
ಪಟ್ಟಣದ ಪ್ರೆಸ್‍ಕ್ಲಬ್‍ನಲ್ಲಿ ಮಂಗಳವಾರ ಸುದ್ದಿಗಾರರ ಜತೆ ಮಾತನಾಡಿ, ಕೇಂದ್ರ ಮತ್ತು ರಾಜ್ಯದಲ್ಲಿ ಬಿಜೆಪಿ ಆಡಳಿತ ರೂಢ ಸರಕಾರಗಳ ಫಲವಾಗಿ ತಾಲೂಕಿಗೆ ಮೂರು ಶಾಶ್ವತ ನೀರಾವರಿ ಯೋಜನೆಗಳು ಸಾಕಾರಗೊಂಡು ಕಾಮಗಾರಿಗಳು ಪ್ರಗತಿಯಲ್ಲಿವೆ.
ಮತ್ತೊಮ್ಮೆ ಆಡಳಿತಕ್ಕೆ ಬಂದಮೇಲೆ ಕಾಮಗಾರಿ ಮುಂದುವರೆಸಲು ನಿರೀಕ್ಷೆಯಿಟ್ಟಿದ್ದೆವು. ಆದರೆ ನಮಗೆ ಅಧಿಕಾರವಿಲ್ಲ. ಈಗನ ಕಾಂಗ್ರೆಸ್ ಶಾಸಕರು ಮುಂದುವರಿಸಿ ಜನತೆಗೆ ಒಳ್ಳೆಯದನ್ನು ಮಾಡಲಿ ಎಂದರು.
ಕ್ಷೇತ್ರದಲ್ಲಿನ ಬಿಜೆಪಿ, ಕಾಂಗ್ರೆಸ್, ಪಕ್ಷೇತರ ಅಭ್ಯರ್ಥಿಗಳ ಸೇರಿ ತ್ರಿಕೋನ ಸ್ಪರ್ಧೆಯಲ್ಲಿ ಕಾಂಗ್ರೆಸ್ ಪಕ್ಷ ಗೆಲುವು ಸಾಧಿಸಿದೆ. ರಾಜ್ಯದಲ್ಲಿಯೂ ಕಾಂಗ್ರೆಸ್ ಬಹುಮತ ಪಡೆದಿದ್ದು. ಅಭಿವೃದ್ಧಿ ಕಾಮಗಾರಿ ಕೈಗೊಳ್ಳಬೇಕು. ನೀರಾವರಿ ಯೋಜನೆಗಳ ಕಾಮಗಾರಿಗಳನ್ನು ಪೂರ್ಣಗೊಳಿಸಬೇಕು. ನಮ್ಮ ಸಹಕಾರವಿದೆ ಆದರೆ ಭ್ರಷ್ಟಾಚಾರದ ಆಡಳಿತ, ಅಭಿವೃದ್ದಿ ಕುಂಠಿತವಾದಲ್ಲಿ ವಿರೋಧಪಕ್ಷದವರಾದ ನಾವು ಹೋರಾಟ ನಡೆಸುತ್ತೇವೆ ಎಂದು ಎಚ್ಚರಿಸಿದರು.
ಮಾಜಿ ಶಾಸಕ ಎಚ್.ಪಿ ರಾಜೇಶ್ ಬಿಜೆಪಿ ಸೇರ್ಪಡೆ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು ಸಂಸದ ಜಿ.ಎಂ ಸಿದ್ದೇಶ್ವರ್, ಹೈಕಮಾಂಡ್ ಗೆ ಬಿಟ್ಟಿದ್ದೇವೆ ಅವರ ತೀರ್ಮಾನಕ್ಕೆ ನಾವು ಬದ್ದರಾಗಿರುತ್ತೇವೆ. ಇದರಲ್ಲಿ ನಮ್ಮ ಅಭಿಪ್ರಾಯವೇನು ಇಲ್ಲವೆಂದು ಸ್ಪಷ್ಟನೆ ನೀಡಿದರು.
ಸಂದರ್ಭದಲ್ಲಿ ಮುಖಂಡರಾದ ಬಿದರಕೆರೆ ರವಿಕುಮಾರ್,ವಕೀಲಹನುಮಂತಪ್ಪ, ಹೊನ್ನಮರಡಿ ಬಾಲರಾಜ್, ಬಸವರಾಜ್, ಯೋಗಾನಂದ, ರವಿಕುಮಾರ್ ಸೇರಿದಂತೆ ಇದ್ದರು.
16ಜೆಎಲ್‍ಆರ್‍ಚಿತ್ರ2ಎ: ಎಚ್.ಸಿ.ಮಹೇಶ್, ಬಿಜೆಪಿ ಮಂಡಲ ಅಧ್ಯಕ್ಷರು