Suddivijaya | Kannada News | 03-04-2023
ಸುದ್ದಿವಿಜಯ, ಜಗಳೂರು: ಕೊಂಡುಕುರಿ ನಾಡಿನಲ್ಲಿ ಮೂರು ಬಾರಿ ಜಯದ ಮಾಲೆ ಹಾಕಿ ಶಾಸಕರಾಗಿರುವ ಎಸ್.ವಿ.ರಾಮಚಂದ್ರ ಮತ್ತೊಮ್ಮೆ ಅದೃಷ್ಟ ಪರೀಕ್ಷೆಗೆ ರೆಡಿಯಾಗಿದ್ದಾರೆ.
ಜಗಳೂರು ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಯಿಂದ ಏಕೈಕ ಟಿಕೆಟ್ ಆಕಾಂಕ್ಷಿಯಾಗಿರುವ ರಾಮಚಂದ್ರ ಅವರಿಗೆ ಟಿಕೆಟ್ ಸಿಗೋದು ಪಕ್ಕಾ ಎನ್ನುವ ಮಾತುಗಳು ಕೇಳಿ ಬರುತ್ತಿವೆ. ಆದರೂ ಬಿಜೆಪಿ ವರಿಷ್ಠರು ಯಾರಿಗೆ ಟಿಕೆಟ್ ಕೊಡ್ತಾರೆ ಎಂದು ತೀರ್ಮಾನ ಮಾಡಿಲ್ಲ. ಕಾಂಗ್ರೆಸ್, ಜೆಡಿಎಸ್‌ನಲ್ಲಿ ಟಿಕೆಟ್ ಹಂಚಿಕೆ ಮಾಡಿ ತಲೆ ನೋವು ಕಡಿಮೆ ಮಾಡಿಕೊಂಡಿದ್ದಾರೆ. ಆದರೆ ರಾಜ್ಯ ಬಿಜೆಪಿಯಲ್ಲಿ ಇನ್ನೂ ಸಹ ಅಭ್ಯರ್ಥಿಗಳು ಯಾರು ಎನ್ನುವ ಪ್ರಶ್ನೆಗೆ ಉತ್ತರ ಸಿಕ್ಕಿಲ್ಲ.
ಬಿಜೆಪಿಯಲ್ಲಿ ಟಿಕೆಟ್ ಹಂಚಿಕೆ ಕಸರತ್ತು ಮಲ್ಲೇಶ್ವರದ ಬಿಜೆಪಿ ಕಚೇರಿ ಮತ್ತು ದೆಹಲಿಯ ವರಿಷ್ಠರ ಅಂಗಳದಲ್ಲಿ ರಾಜಕೀಯದ ಚಂಡು ಇದೆ. ಆದರೆ ಟಿಕೆಟ್ ಪಟ್ಟಿಯಲ್ಲಿ ಹೆಸರು ಬರುವವರೆಗೂ ಅಭ್ಯರ್ಥಿಗಳ ಎದೆಯಲ್ಲಿ ಸಣ್ಣನೆಯ ಕಂಪನ ಇದ್ದೇ ಇರುತ್ತದೆ.
ಜಗಳೂರು ವಿಧಾನಸಭಾ ಕ್ಷೇತ್ರದ ಟಿಕೆಟ್ ಯಾರಿಗೆ?
ಈಗಾಗಲೇ ರಣೋತ್ಸಾಹದಲ್ಲಿರುವ ಶಾಸಕ ಎಸ್.ವಿ.ರಾಮಚಂದ್ರ ಸಭೆಯ ಮೇಲೆ ಸಭೆ ನಡೆಸಿರುವ ಅವರು ಟಿಕೆಟ್ ಹಂಚಿಕ ರೇಸ್‌ನಲ್ಲಿ ಅವರದ್ದೇ ಸಿಂಹಪಾಲು. ಈಗಾಗಲೇ ಕ್ಷೇತ್ರದಾದ್ಯಂತ ಸುತ್ತಾಡಿ ಸಂಘಟನೆಯಲ್ಲಿ ತೊಡಗಿರುವ ಶಾಸಕ ಎಸ್.ವಿ.ರಾಮಚಂದ್ರ ಅವರು ಟಿಕೆಟ್‌ಗಾಗಿ ವರಿಷ್ಠರ ಮುಂದೆ ನಿಂತಿದ್ದಾರೆ.
ವಚನ ಕೊಟ್ಟಿದ್ದ ಮುಖ್ಯಮಂತ್ರಿ
ಕಳೆದ ಆರು ತಿಂಗಳ ಹಿಂದೆ ಭದ್ರಾ ಮೇಲ್ದಂಡೆ ಯೋಜನೆ ಶಂಕುಸ್ಥಾಪನೆಗೆ ಆಗಮಿಸಿದ್ದ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಜಗಳೂರಿನ ಕ್ಷೇತ್ರದ ಸಾಕ್ಷಾತ್ ಶ್ರೀ ರಾಮಚಂದ್ರ ಎಂದೇ ಹೊಗಳಿದ್ದರು. ಟಿಕೆಟ್ ಕೂಡಾ ನೀಡುವ ಭರವಸೆ ನೀಡಿದ್ದರು. ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಸಹ ರಾಮಚಂದ್ರ ಅವರಿಗೆ ಟಿಕೆಟ್ ಕೊಡುವ ಭರವಸೆ ನೀಡಿದ್ದರು. ಸಂಸದ ಜಿ.ಎಂ.ಸಿದ್ದೇಶ್ವರ್ ಅವರು ರಾಮಚಂದ್ರ ಅವರಿಗೆ ಬೆಂಗಾವಲಿಗೆ ನಿಂತಿದ್ದಾರೆ. ಹೀಗಾಗಿ ಟಿಕೆಟ್ ಸಿಕ್ಕೇ ಸಿಗುತ್ತದೆ ಎನ್ನುವ ಧೈರ್ಯದಲ್ಲಿ ಶಾಸಕ ಎಸ್.ವಿ.ರಾಮಚಂದ್ರ ಅವರು ಕ್ಷೇತ್ರದಲ್ಲಿ ರಣೋತ್ಸಾಹದಿಂದ ಮತಪ್ರಚಾರ ಮಾಡುತ್ತಿದ್ದಾರೆ.
ಈ ಬಾರಿ ಬಿಜೆಪಿ/ಕಾಂಗ್ರೆಸ್ ಫೈಟ್
ಈ ಬಾರಿ ಚುನಾವಣೆಯಲ್ಲಿ ಜಗಳೂರು ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ / ಬಿಜೆಪಿ ನೇರ ಹಣಾಹಣಿ. ಜೆಡಿಎಸ್ ಪಕ್ಷದಿಂದ ಯಾರಿಗೂ ಟಿಕೆಟ್ ಘೋಷಣೆ ಮಾಡಿಲ್ಲ. ಕಾಂಗ್ರೆಸ್‌ನಿAದ ಯಾರಿಗೆ ಟಿಕೆಟ್ ಸಿಕ್ಕರೂ ನೇರವಾಗಿ ಬಿಜೆಪಿ ವಿರುದ್ಧವೇ ವಾರ್ ಶುರುವಾಗಲಿದೆ. ಇನ್ನು ಆಪ್ ಪಕ್ಷದದಿಂದ ಗೋವಿಂದ ರಾಜು ಅಭ್ಯರ್ಥಿಯಾಗಿ ಕಣದಲ್ಲಿದ್ದಾರೆ. ಆಪ್‌ನಾಯಕರು ಅವರು ಗೆದ್ದೇಗೆಲ್ಲುತ್ತಾರೆ ಎನ್ನುವ ಭರವಸೆಯಿಂದ ಟಿಕೆಟ್ ನೀಡಿದ್ದಾರೆ.
ಇಂದು ಅಥವಾ ನಾಳೆ ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ:
ಬಿಜೆಪಿ ಪಕ್ಷದಿಂದ ಮೊದಲ ಪಟ್ಟಿ ಇಂದು ಅಥವಾ ನಾಳೆ ಬಿಡುಗಡೆ ಸಾಧ್ಯತೆಯಿದ್ದು ಮೊದಲ ಪಟ್ಟಿಯಲ್ಲೇ ಎಸ್.ವಿ.ರಾಮಚಂದ್ರ ಅವರಿಗೆ ಟಿಕೆಟ್ ನೀಡುವ ಸಾಧ್ಯತೆಯಿದೆ ಎಂದು ಮೂಲಗಳಿಂದ ತಿಳಿದು ಬಂದಿದೆ. ಒಟ್ಟಿನಲ್ಲಿ ಬಿಜೆಪಿ ಟಿಕೆಟ್ ಫೈಟ್ ರೇಸ್‌ನಲ್ಲಿ ರಾಮಚಂದ್ರ ಅವರು ಏಕೈಕ ಅಭ್ಯರ್ಥಿಯಾಗಿದ್ದು ಟಿಕೆಟ್ ಸಿಗುವ ಸಾಧ್ಯತೆ ದಟ್ಟವಾಗಿದೆ.