ಸುದ್ದಿವಿಜಯ, ಜಗಳೂರು: ಪಟ್ಟಣದ ಬಾಲಾಜಿ ವಾಟರ್ ಸಪ್ಲೆಯರ್ಸ್ ಮತ್ತು ಬೋರ್‍ವೆಲ್ ಮಾಲೀಕರಾದ ಎಸ್.ಮಂಜುನಾಥ್ ಎಂಬುವರಿಗೆ ಸೇರಿದ ಗೋದಾಮಿನ ಬೀಗ ಮುರಿದು ಅಂದಾಜು 1.35 ಲಕ್ಷ ರೂ ಮೌಲ್ಯದ ಡ್ರಿಲ್ಲಿಂಗ್ ಬಿಡ್ ಮತ್ತು ಬೋರ್‍ವೆಲ್ ಲಾರಿಯಲ್ಲಿದ್ದ 5 ವರ್ಕಿಂಗ್ ಬಿಟ್‍ಗಳನ್ನು ಕಳ್ಳತನ ನಡೆದಿರುವ ಘಟನೆ ಜುಲೈ 27ರ ರಾತ್ರಿ ನಡೆದಿದ್ದು, ಜಗಳೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಘಟನೆ ವಿವರ:
ಪಪಂ ಸದಸ್ಯರೂ ಆಗಿರುವ ಎಸ್.ಮಂಜುನಾಥ್ ಅವರಿಗೆ ಸೇರಿದ ಗೋದಾಮಿನಲ್ಲಿ ಬೋರ್‍ವೆಲ್‍ನ ಬಿಡಿ ಭಾಗಗಳಾದ ಪೈಪ್, ಡ್ರಿಲ್ಲಿಂಗ್ ಬಿಡ್‍ಗಳನ್ನು ಕೆರೆ ಸಮೀಪದ ಪಾಪಲಿಂಗೇಶ್ವರ ದೇವಸ್ಥಾನದ ಬಳಿ ಇರುವ ತಮ್ಮ ಗೋದಾಮಿನಲ್ಲಿ ಇರಿಸಲಾಗಿದ್ದ 39ಕ್ಕೂ ಹೆಚ್ಚು ಬೋರ್‍ವೆಲ್‍ನ ಕಬ್ಬಿಣದ ಬಿಟ್‍ಗಳನ್ನು ಇರಿಸಿದ್ದರು.
ಜುಲೈ 27 ರಂದು ರಾತ್ರಿ ಎಂದಿನಂತೆ ಗೋದಾಮು ಮೇಲ್ವಿಚಾರಕ ಅಜ್ಜಯ್ಯ ಬೀಗ ಹಾಕಿ ಮನೆ ಹೋಗಿದ್ದಾರೆ. ಮಧ್ಯರಾತ್ರಿ ನುಗ್ಗಿದ ಕಳ್ಳರು ಉಪಯೋಗಕ್ಕೆ ಬರುವ ಮತ್ತು ರಿಪೇರಿಯ ಹಂತದಲ್ಲಿದ್ದ ಕಬ್ಬಿಣದ ಬೃಹತ್ ಬಿಡ್‍ಗಳನ್ನು ಬೀಗ ಮುರಿದು ಕಳ್ಳತನ ಮಾಡಿ ಪರಾರಿಯಾಗಿದ್ದಾರೆ. ಸಿಸಿಟಿವಿಯಲ್ಲಿ ಕಳ್ಳತನ ದೃಶ್ಯ ದಾಖಲಾಗಿದೆ.
ಒಂದು ಬಿಟ್‍ನ ಬೆಲೆ 1500 ಸಾವಿರ ರೂ, ಹಾಗೂ ಬೋರ್‍ವೆಲ್‍ಗಳಲ್ಲಿ ಇದ್ದ ಉಪಯೋಗಕ್ಕೆ ಬರುತ್ತಿದ್ದ ಹೊಸದಾಗಿ ಅಳವಡಿಸಲಾಗಿದ್ದ ಐದು ಕಬ್ಬಿಣದ ಬಿಡ್‍ಗಳ ಅಂದಾಜು 75 ಸಾವಿರ ಮೌಲ್ಯದ ವಸ್ತುಗಳನ್ನು ಕಳ್ಳತನವಾಗಿದೆ.
ಜುಲೈ 28 ರಂದು ಬೆಳಿಗ್ಗೆ ಗೋದಾಮು ತೆರೆಯಲು ಬಂದಾಗ ಮೇಲ್ವಿಚಾರಕ ಅಜ್ಜಯ್ಯನಿಗೆ ಕಳ್ಳತನವಾಗಿರುವ ಬಗ್ಗೆ ಮಾಲೀಕರಾದ ಮಂಜುನಾಥ್ ಅವರ ಗಮನಕ್ಕೆ ತಂದಿದ್ದಾರೆ.
ತಕ್ಷಣ ಕಳ್ಳತನ ನಡೆದಿರುವ ಬಗ್ಗೆ ಜಗಳೂರು ಪಟ್ಟಣದ ಪೊಲೀಸ್ ಠಾಣೆಯಲ್ಲಿ ಮಂಜುನಾಥ್ ಅವರ ಪುತ್ರ ಎ.ಎಂ.ರಾಕೇಶ್ ಪ್ರಕರಣ ದಾಖಲಿಸಿದ್ದಾರೆ.
ದೂರಿನ ಅನ್ವಯ ಎಫ್‍ಐಆರ್ ದಾಖಲಾಗಿದೆ. ಅಳವಡಿಸಿರುವ ಸಿಸಿಟಿವಿಯಲ್ಲಿ ಕಳ್ಳರ ಕೈಚಳ ಸೆರೆಯಾಗಿದೆ. ಪೊಲೀಸರು ತನಿಖೆ ಆರಂಭಿಸಿದ್ದಾರೆ. ಕಳೆದ ಎರಡು ವರ್ಷಗಳಲ್ಲಿ ಇದೇ ಗೋದಾಮಿನಲ್ಲಿ ನಡೆದಿರುವ ಮೂರನೇ ಕಳ್ಳತನ ಪ್ರಕರಣವಾಗಿದ್ದು ತಕ್ಷಣ ಪತ್ತೆ ಮಾಡಿ ತಪ್ಪಿತಸ್ಥರಿಗೆ ಶಿಕ್ಷೆಯಾಗಬೇಕು ಎಂದು ಮಾಲೀಕರಾದ ಎಸ್.ಮಂಜುನಾಥ್ ಪೊಲೀಸರಿಗೆ ಮನವಿ ಮಾಡಿದ್ದಾರೆ.