ಸುದ್ದಿವಿಜಯ, ಜಗಳೂರು: ನಾಮಪತ್ರ ಸಲ್ಲಿಸಿದ ನಂತರ ಇಪ್ಪತ್ತು ದಿನಗಳ ಕಾಲ ಇಡೀ ಕ್ಷೇತ್ರದಲ್ಲಿ ಮತ ಬೇಟೆಯಲ್ಲಿ ಬ್ಯೂಸಿಯಾಗದ್ದ ಕಾಂಗ್ರೆಸ್, ಬಿಜೆಪಿ ಮತ್ತು ಪಕ್ಷೇತರ ಅಭ್ಯರ್ಥಿಗಳು ಬುಧವಾರ ಚುನಾವಣೆ ಮುಗಿದ ನಂತರ ಗುರುವಾರ ರಿಲ್ಯಾಕ್ಸ್ ಮೂಡಿಗೆ ಜರುಗಿದರು.
ಕಾಂಗ್ರೆಸ್ ಅಭ್ಯರ್ಥಿ ಚಿಕ್ಕಮ್ಮನಹಟ್ಟಿ ಬಿ.ದೇವೇಂದ್ರಪ್ಪ ಅವರು ಗುರುವಾರ ತಮ್ಮ ಜಗಳೂರು ಪಟ್ಟಣದ ನಿವಾಸದಲ್ಲಿ ದಿನ ಪತ್ರಿಕೆಯಗಳ ಮೇಲೆ ಕಣ್ಣಾಡಿಸಿದ ನಂತರ ಕಾರ್ಯಕರ್ತರು, ಅಭಿಮಾನಿಗಳ ಜೊತೆ ಸ್ವಲ್ಪ ಹೊತ್ತು ಚರ್ಚಿಸಿದರು.ನಂತರ ಮೊಮ್ಮಕ್ಕಳ ಜೊತೆ ಸಂಭಾಷಣೆ ನಡೆಸಿದರು. ಮಧ್ಯಾಹ್ನ ಊಟದ ನಂತರ ನಿದ್ರೆಗೆ ಜಾರಿ ವಿಶ್ರಾಂತಿ ಮಾಡಿದರು.
ಇತ್ತರ ಪಕ್ಷೇತರ ಅಭ್ಯರ್ಥಿ ಎಚ್.ಪಿ.ರಾಜೇಶ್, ಮತ ಸಮೀಕ್ಷೆಗಳ ಬಗ್ಗೆ ಪತ್ರಿಕೆ ಓದಿದ ನಂತರ ಅಭಿಮಾನಿಗಳು ಮತ್ತು ಕಾರ್ಯಕರ್ತರ ಜೊತೆ ಕ್ಷೇತ್ರವಾರು ಮತಗಳಿಕೆ ಲೆಕ್ಕಾಚಾರದಲ್ಲಿ ಬ್ಯೂಸಿಯಾಗಿದ್ದರು. ಮಧ್ಯಾಹ್ನದ ನಂತರ ದಾವಣಗೆರೆಯಲ್ಲಿ ಸ್ನೇಹಿತರು, ಸಂಬಂಧಿಕರ ವಿವಾಹ ಕಾರ್ಯಕ್ರಮದಲ್ಲಿ ಭಾಗವಹಿಸಿದರು.
ಇನ್ನು ಬಿಜೆಪಿ ಅಭ್ಯರ್ಥಿ ಎಸ್.ವಿ.ರಾಮಚಂದ್ರ ಅವರು ದಾವಣಗೆರೆಯ ತಮ್ಮ ನಿವಾಸದಲ್ಲಿ ಮತಗಳಿಕೆಯ ಲೆಕ್ಕಾಚಾರದ ಮಾಹಿತಿಯನ್ನು ಪಕ್ಷದ ಮುಖಂಡರು, ಕಾರ್ಯಕರ್ತರ ಜೊತೆ ಫೋನ್ ಸಂಭಾಷಣೆಯಲ್ಲಿ ಬ್ಯೂಸಿಯಾದರು. ಇಡೀ ದಿನ ಅವರು ಮನೆಯಲ್ಲೇ ವಿಶ್ರಾಂತಿ ಪಡೆದರು.