ಜಗಳೂರು: ಕಾರು-ಬೈಕ್ ಮಧ್ಯೆ ಅಪಘಾತ ಓರ್ವ ಸಾವು!

Suddivijaya
Suddivijaya January 15, 2024
Updated 2024/01/15 at 11:47 AM

ಸುದ್ದಿವಿಜಯ, ಜಗಳೂರು: ಭಾನುವಾರ ರಾತ್ರಿ ತಾಲೂಕಿನ ತೋರಣಗಟ್ಟೆ-ಕಟ್ಟಿಗೆಹಳ್ಳಿ ರಸ್ತೆಯ ಅರಿಶಿಣಗುಂಡಿ ಗೇಟ್ ಸಮೀಪ ಬೈಕ್ ಮತ್ತು ಕಾರಿನ ಮಧ್ಯೆ ಸಂಭವಿಸಿದ ಭೀಕರ ಅಪಘಾತದಲ್ಲಿ ಬೈಕ್ ಸವಾರ ಗೌರಮ್ಮನಹಳ್ಳಿ ಗ್ರಾಮದ ಹನುಮಂತಪ್ಪ (35) ಮೃತಪಟ್ಟು ಹಿಂಬದಿ ಸವಾರ ಮಾರುತಿ ತೀವ್ರ ಗಾಯಗೊಂಡು ಆಸ್ಪತ್ರೆಯಲ್ಲಿ ಸಾವು ಬದುಕಿನ ಮಧ್ಯೆ ಸೆಣಸಾಡುತ್ತಿದ್ದಾನೆ.

ಘಟನೆ ವಿವರ: ಮಂತ್ರಾಲಯದ ಶ್ರೀ ರಾಘವೇಂದ್ರ ಸ್ವಾಮೀಜಿ ಮಠಕ್ಕೆ ತೆರಳಿದ್ದ ಭರಮಸಾಗರ ಪಟ್ಟಣದ ಜಿಪಂ ಮಾಜಿ ಸದಸ್ಯ ಡಿ.ವಿ.ಶರಣಪ್ಪನವರ ಕುಟುಂಬದ ಕಾರು ದೊಣೆಹಳ್ಳಿ ಮಾರ್ಗವಾಗಿ ಭರಮಸಾಗರಕ್ಕೆ ಹೋಗುತ್ತಿತ್ತು.

ಬಿದರಕೆರೆಯಿಂದ ಬರುತ್ತಿದ್ದ ಗೌರಮ್ಮನಹಳ್ಳಿ ಗ್ರಾಮದ ಹನುಮಂತಪ್ಪ ಎಂಬುವರ ಬೈಕ್ ಕಾರಿಗೆ ಮಧ್ಯೆ ಅಪಘಾತವಾಗಿದ್ದು ಚಾಲನೆ ಮಾಡುತ್ತಿದ್ದ ಹನುಮಂತಪ್ಪ ಸ್ಥಳದಲ್ಲೇ ಮೃತಪಟ್ಟಿದ್ದಾನೆ.ಜಗಳೂರು: ಕಾರು,ಬೈಕ್ ಮಧ್ಯೆ ಅಪಘಾತ ಓರ್ವ ಸಾವುಜಗಳೂರು: ಕಾರು,ಬೈಕ್ ಮಧ್ಯೆ ಅಪಘಾತ ಓರ್ವ ಸಾವು

ಮಾರುತಿ ಎಂಬ ವ್ಯಕ್ತಿಗೆ ತೀವ್ರ ಪೆಟ್ಟಾಗಿದೆ. ಅವರನ್ನು ಜಗಳೂರಿನ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ ನಂತರ ಹೆಚ್ಚಿನ ಚಿಕಿತ್ಸೆಗೆ ದಾವಣಗೆರೆ ಆಸ್ಪತ್ರೆಗೆ ದಾಖಲಿಸಲಾಗಿದೆ. ಸ್ಥಳೀಯರು 112 ಟೋಲ್ ಫ್ರೀ ನಂಬರ್‍ಗೆ ಕರೆ ಮಾಡಿ ಅಂಬುಲೆನ್ಸ್ ಮೂಲಕ ಆಸ್ಪತ್ರೆಗೆ ದಾಖಲಿಸಿದಾಗ ಹನುಮಂತಪ್ಪ ಮೃತ ಪಟ್ಟಿರುವುದಾಗಿ ವೈದ್ಯರು ದೃಢಪಡಿಸಿದ್ದಾರೆ.

ಈ ಪ್ರಕರಣ ಸಂಬಂಧ ಜಗಳೂರು ಪಟ್ಟಣದ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಸ್ಥಳಕ್ಕೆ ಇನ್‍ಸ್ಪೆಕ್ಟರ್ ಎಂ.ಶ್ರೀನಿವಾಸ್ ರಾವ್, ಪಿಎಸ್‍ಐ ಮಂಜುನಾಥ್ ಭೇಟಿ ನೀಡಿ ಪರಿಶೀಲಿಸಿ ತನಿಖೆ ನಡೆಸಿದರು.

15ಜೆಎಲ್‍ಆರ್‍ಚಿತ್ರ2ಎ: ಜಗಳೂರು ತಾಲೂಕಿನ ಅರಿಶಿಣಗುಂಡಿ ಗ್ರಾಮದ ಗೇಟ್ ಬಳಿ ಕಾರು-ಬೈಕ್ ಮಧ್ಯೆ ಅಪಘಾತವಾದ ಚಿತ್ರ

Share this Article
Leave a comment

Leave a Reply

Your email address will not be published. Required fields are marked *

error: Content is protected !!