ಜಗಳೂರು:ಬಾಲ ಕಾರ್ಮಿಕ ಪದ್ಧತಿ ಸಮಾಜಕ್ಕೆ ಮಾರಕ!

Suddivijaya
Suddivijaya February 28, 2023
Updated 2023/02/28 at 12:52 PM

ಸುದ್ದಿವಿಜಯ, ಜಗಳೂರು:ಬಾಲಕಾರ್ಮಿಕ ಪದ್ದತಿ ಸಮಾಜಕ್ಕೆ ಮಾರಕ ನಿಯಂತ್ರಿಸಲು ಕಾನೂನು ಜಾಗೃತಿ ಅಗತ್ಯ  ಎಂದು ಜೆಎಂಎಫ್ ಸಿ ಹಾಗೂ ಸಿವಿಲ್ ನ್ಯಾಯಾಧೀಶ  ಮಹಮ್ಮದ್ ಯೂನಿಸ್ ಅಥಣಿ ಅಭಿಮತ ವ್ಯಕ್ತಪಡಿಸಿದರು.

ಪಟ್ಟಣದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಕಾನೂನು ಸೇವಾ ಸಮಿತಿ,ತಾಲೂಕು ಆಡಳಿತ,ಶಿಶು ಅಭಿವೃದ್ದಿ,ಆರೋಗ್ಯ,ಶಿಕ್ಷಣ ಇಲಾಖೆಗಳು ಹಾಗೂ ಬಾಲಕಾರ್ಮಿಕ ಯೋಜನಾ ಸೊಸೈಟಿ ಇವರುಗಳ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ ಬಾಲಕಾರ್ಮಿಕ ಹಾಗೂ ಕಿಶೋರ ಕಾರ್ಮಿಕ ನಿಷೇಧ ಕಾಯ್ದೆ 1986 ಕುರಿತು ಕಾನೂನು ಅರಿವು ನೆರವು ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಮಕ್ಕಳನ್ನು ದೇವರ ಸಮಾನವಾಗಿ ಕಾಣುವ ದೇಶದಲ್ಲಿ  ಬಾಲಕಾರ್ಮಿಕ ಪದ್ದತಿ ನಿಷೇಧ ಕಾಯ್ದೆ 26 ಸೆಕ್ಷೆನ್ ಗಳನ್ನೊಳಗೊಂಡು 1986 ರಲ್ಲಿ ಜಾರಿಯಾಗಿದ್ದು ಪರಿಪಾಲನೆಯಾಗದೆ.

ಜಗಳೂರು ಪಟ್ಟಣದ ತಾಪಂ ಸಭಾಂಗಣದಲ್ಲಿ ಬಾಲಕಾರ್ಮಿಕ ನಿರ್ಷೇದ ದಿನಾಚರಣೆ ಹಮ್ಮಿಕೊಳ್ಳಲಾಗಿತ್ತು.
ಜಗಳೂರು ಪಟ್ಟಣದ ತಾಪಂ ಸಭಾಂಗಣದಲ್ಲಿ ಬಾಲಕಾರ್ಮಿಕ ನಿರ್ಷೇದ ದಿನಾಚರಣೆ ಹಮ್ಮಿಕೊಳ್ಳಲಾಗಿತ್ತು.

ಇಂದಿಗೂ ಮಕ್ಕಳ ಮೇಲಿನ ದೌರ್ಜನ್ಯಗಳು, ಬಾಲಕಾರ್ಮಿಕ ನಿರ್ಮೂಲನೆ ಸಾಧ್ಯವಾಗಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಸಮಾಜದಲ್ಲಿ 14 ವರ್ಷದೊಳಗಿನ ಬಾಲಕರನ್ನು ದುಡಿಮೆಗೆ ಕಳಿಸದಂತೆ,14 ವರ್ಷ ಮೇಲ್ಪಟ್ಟ ಕಿಶೋರರನ್ನು ಅಪಾಯಕಾರಿ ಸ್ಥಳಗಳಿಗೆ ಕೆಲಸದಿಂದ ಮುಕ್ತಿಗೊಳಿಸಲು ಹಾಗೂ ಉಚಿತ ಮತ್ತು ಕಡ್ಡಾಯ ಶಿಕ್ಷಣಕ್ಕೆ ಒತ್ತುನೀಡಲು  ಪ್ರತಿಯೊಬ್ಬ ನಾಗರೀಕನ  ಜವಾಬ್ದಾರಿಎಂದು ಸಲಹೆ ನೀಡಿದರು.

ವಕೀಲ‌ರ ಸಂಘದ ತಾಲೂಕು ಅಧ್ಯಕ್ಷ ಓಂಕಾರೇಶ್ವರ್ ಮಾತನಾಡಿ,ಪೋಷಕರು ಮಕ್ಕಳ ಬದುಕು ಮತ್ತು ಬವಣೆಗಳನ್ನು ಅರಿತು ಭವಿಷ್ಯ ರೂಪಿಸಬೇಕು.ಆರ್ಥಿಕ ಸಂಕಷ್ಟಕ್ಕೆ ಬಾಲಕಾರ್ಮಿಕ ಪದ್ದತಿ ಅನುಸರಣೆ ಸಲ್ಲದು.

ಕೌಟುಂಬಿಕ ವ್ಯವಸ್ಥೆಯಿಂದ ಹೊರಗಡೆ ಮಕ್ಕಳನ್ನು ದುಡಿಮೆಗೆ ಒಳಪಡಿಸಿದರೆ ಕಾನೂನಿನಡಿ ಶಿಕ್ಷೆಗಳು ಖಂಡಿತ ತಪ್ಪಿದ್ದಲ್ಲ.ಆದ್ದರಿಂದ ಸರಕಾರದ ಯೋಜನೆಗಳನ್ನು ಸದುಪಯೋಗಪಡೆದುಕೊಳ್ಳಬೇಕು ಎಂದರು.

ಟಿಎಚ್ಓ ಡಾ.ನಾಗರಾಜ್, ಹೋಟೆಲ್,ಆಶಾ ಅಂಗನವಾಡಿ ಕಾರ್ಯಕರ್ತೆಯರು ಆರೋಗ್ಯ ಇಲಾಖೆ ಸಿಬ್ಬಂದಿಗಳು ಗ್ರಾಮೀಣ ಭಾಗದಲ್ಲಿ ಬಾಲಕಾರ್ಮಿಕ ಪದ್ದತಿಯ ಪರಿಣಾಮಗಳನ್ನು ಜಾಗೃತಿ ಮೂಡಿಸಲಾಗುತ್ತಿದೆ ಇಟ್ಟಿಗೆ ಭಟ್ಟಿಯಲ್ಲಿ ಹೊರರಾಜ್ಯದಿಂದ ಆಗಮಿಸಿದ ವಲಸೆ ಬಾಲ ಕಾರ್ಮಿಕರಿಗೆ ಆರೋಗ್ಯ ತಪಾಸಣೆಯೊಂದಿಗೆ ಸ್ವಗ್ರಾಮಕ್ಕೆ ಮರಳಿ ಕಳಿಸಿಕೊಡಲಾಯಿತು ಎಂದು ತಿಳಿಸಿದರು.

ಸಂದರ್ಭದಲ್ಲಿ ಸಿಡಿಪಿಓ ಬೀರೇಂದ್ರಕುಮಾರ,ಕಾರ್ಯದರ್ಶಿ ರುದ್ರೇಶ್,ಹಿರಿಯ ವಕೀಲ ವೈ. ಹನುಮಂತಪ್ಪ,ಸುರೇಶ್,ಸೇರಿದಂತೆ ಇದ್ದರು.

Share this Article
Leave a comment

Leave a Reply

Your email address will not be published. Required fields are marked *

error: Content is protected !!