ಸುದ್ದಿವಿಜಯ,ಜಗಳೂರು: ಪಟ್ಟಣದ ಕೆಎಸ್ಆರ್ಟಿಸಿ ಬಸ್ ನಿಲ್ದಾಣದ ರಸ್ತೆಯಲ್ಲಿ ಕೋಳಿ ಅಂಗಡಿಗಳ ಮಾಲೀಕರು ಮುಂದೆ ಬಂದು ಸಾರ್ವಜನಿಕರಿಗೆ ಕಿರಿಕಿರಿ ಉಂಟು ಮಾಡುತ್ತಿದ್ದ ಸುದ್ದಿಯನ್ನು ಸುದ್ದಿವಿಜಯ ವೆಬ್ ನ್ಯೂಸ್ ಪ್ರಸಾರ ಮಾಡಿತ್ತು.
ಸುದ್ದಿ ವೀಕ್ಷಿಸಿದ ಪಪಂ ಚೀಫ್ ಆಫೀಸರ್ ಲೋಕ್ಯಾನಾಯ್ಕ್ ಮತ್ತು ಆರೋಗ್ಯಾಧಿಕಾರಿ ಕಿಫಾಯತ್ ಅಹಮದ್ ಅವರ ತಂಡ ಸ್ಥಳಕ್ಕೆ ತೆರಳಿ ತೆರವುಗೊಳಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಕೋಳಿಅಂಗಡಿಗಳ ಮಾಲೀಕರು ರಸ್ತೆಗೆ ಅಡ್ಡಾವಾಗಿ ಇಟ್ಟಿರುವ ಕೋಳಿ ಫ್ರೇಮ್ ತೆರವು ಗೊಳಿಸಿ ಸಾರ್ವಜನಿಕರ ಸುಗಮ ಸಂಚಾರಕ್ಕೆ ಅನುವುಮಾಡಿಕೊಟ್ಟರು.
ಕೋಳಿ ಕಟ್ ಮಾಡಿ ಗಬ್ಬುನಾಥದಿಂದ ವಿದ್ಯಾರ್ಥಿಗಳು, ಸಾರ್ವಜನಿಕರು ರೋಸಿ ಹೋಗಿದ್ದರು. ಸ್ವಚ್ಚತೆ ಕಾಪಾಡುವಂತೆ ಎಚ್ಚರಿಕೆ ನೀಡಿದರು. ಅಷ್ಟೇ ಅಲ್ಲ ನಿಷೇಧಿತ ಪ್ಲಾಸ್ಟಿಕ್ ಬಳಸುವವರಿಗೆ 500/-ರೂ ದಂಡವಿಧಿಸಿ ಜಾಗೃತಿ ಮೂಡಿಸಲಾತು.
ಪ್ಲಾಸ್ಟಿಕ್ ಮುಕ್ತ ಪಟ್ಟಣವಾಗಿಸಲು ಮುಖ್ಯಾಧಿಕಾರಿಗಳಾದ ಲೋಕ್ಯಾನಾಯ್ಕ್ ತಂಡ ಎಚ್ಚರಿಕೆಯ ಜೊತೆಗೆ ದಂಡ ಮತ್ತು ಪ್ಲಾಸ್ಟಿಕ್ ವಶಪಡಿಸಿಕೊಳ್ಳುವ ಮೂಲಕ ಜನ ಜಾಗೃತಿ ಮೂಡಿಸುತ್ತಿದ್ದಾರೆ.