ಸುದ್ದಿವಿಜಯ, ಜಗಳೂರು: ಹಿರೇಮಲ್ಲನಹೊಳೆ ಗ್ರಾಮದ ಬಳಿಯ ಸರ್ವೆ ನಂ 34 ರಲ್ಲಿ ಕಾನೂನು ಮೀರಿ ಕಾಮಗಾರಿ ನಡೆಯುತ್ತಿದ್ದು ತಹಶೀಲ್ದಾರ್ ಚಂದ್ರಶೇಖರ್ ನಾಯ್ಕ್ ಸೂಚನೆ ಮೇರಿಗೆ ಬುಧವಾರ ಖುದ್ದು ಭೇಟಿ ನೀಡಿ ನೋಟಿಸ್ ಕೊಟ್ಟರೂ ಸಹ ಕ್ಲೀನ್ ಮ್ಯಾಕ್ಸ್ ಕಂಪನಿ, ಕೆಲಸ ಸ್ಥಗತಿಗೊಳಿಸದೇ ಕಾರ್ಮಿಕರು ರಾತ್ರಿಯಲ್ಲಾ ಕಾಮಗಾರಿ ಮುಂದುವರೆಸಿದ್ದಾರೆ ಎಂದು ರೈತರು ಆರೋಪಿಸಿದ್ದಾರೆ.
ಹಿರೇಮಲ್ಲನಹೊಳೆ ಪಿಡಿಒ ಡಿ.ಎನ್.ಅರವಿಂದ್ ಗುರುವಾರ ಮಧ್ಯಾಹ್ನ ಭೇಟಿ ನೀಡಿ ಸ್ಥಾವರಕ್ಕೆ ನೋಟಿಸ್ ಅಂಟಿಸಿ ಕಾಮಗಾರಿ ಸ್ಥಗಿತಗೊಳಿಸಿ ಎಂದು ಸೂಚನೆ ನೀಡಿದ್ದರು.
ಅಷ್ಟೇ ಅಲ್ಲ ತಹಶೀಲ್ದಾರ್ ಚಂದ್ರಶೇಖರ್ ನಾಯ್ಕ್ ಮತ್ತು ಕಂದಾಯಾಧಿಕಾರಿ ಧನಂಜಯ ಭೇಟಿ ನೀಡಿ ಪರವಾನಿಗೆ ಇಲ್ಲದೇ ಕಾಮಗಾರಿ ಮಾಡುವಂತಿಲ್ಲ. ತಕ್ಷಣವೇ ಕಾರ್ಯ ಸ್ಥಗಿತಗೊಳಿಸಿ ಎಂದು ಸೂಚನೆ ನೀಡಿದ್ದರು.
ಆದರೂ ತಹಶೀಲ್ದಾರ್ ಮತ್ತು ಸ್ಥಳೀಯ ಆಡಳಿತದ ನೋಟಿಸ್‍ಗೆ ಬಗ್ಗದೇ ಗುರುವಾರ ರಾತ್ರಿ ಇಡೀ ಕಾಮಗಾರಿಯನ್ನು ಕ್ಲೀನ್ ಮ್ಯಾಕ್ಸ್ ಕಂಪನಿ ಮುಂದುವರಿಸಿದೆ. ಅವರು ಕಾನೂನನ್ನು ಮೀರಿ ಹೊರಟಿದ್ದಾರೆ ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.