ಸುದ್ದಿವಿಜಯ, ಜಗಳೂರು: ಅತ್ಯಂತ ಹಿಂದುಳಿದ ಸಮುದಾಯಗಳಲ್ಲಿ ಒಂದಾದ ಮಾದಿಗ ಸಮುದಾಯಕ್ಕೆ ಕಾಂಗ್ರೆಸ್ ಕೊಡುಗೆ ಅನನ್ಯ ಎಂದು ರಾಜ್ಯ ಸಭಾ ಸದಸ್ಯ ಡಾ.ಎಲ್.ಹನುಮಂತಯ್ಯ ಹೇಳಿದರು.
ಪಟ್ಟಣದ ಕಾಂಗ್ರೆಸ್ ಅಭ್ಯರ್ಥಿ ಬಿ.ದೇವೇಂದ್ರಪ್ಪ ಅವರ ನಿವಾಸದ ಆವರಣದಲ್ಲಿ ಶನಿವಾರ ನಡೆದ ಮಾದಿಗ ಸಮಾಜದ ಕಾರ್ಯಕರ್ತರ ಸಭೆಯಲ್ಲಿ ಅವರು ಮಾತನಾಡಿದರು.
ಬಡವರ್ಗದ ಸಮುದಾಯವನ್ನು ಗುರುತಿಸಿ ಮುಖ್ಯವಾಹಿನಿಗೆ ತರುವ ಹೃದಯ ವೈಶಾಲ್ಯತೆಯ ಜನನಾಯಕರ ಅಗತ್ಯವಿದೆ.ಪ್ರಜ್ಞಾವಂತ ದಲಿತ ಸಮುದಾಯಗಳು ಒಗ್ಗಟ್ಟು ಪ್ರದರ್ಶಿಸಿದರೆ ರಾಜ್ಯದಲ್ಲಿ 120ಕ್ಕೂ ಅಧಿಕಸ್ಥಾನಗಳನ್ನು ಗೆಲ್ಲಿಸುವುದು ಖಚಿತ. ಆದರೆ ಮಾದಿಗ ಸಮುದಾಯ ಒಗ್ಗಟ್ಟಾಗಬೇಕು. ಗೆಲ್ಲುವ ಅಭ್ಯರ್ಥಿಗೆ ಮತಹಾಕಬೇಕು ಎಂದು ಮನವಿ ಮಾಡಿದರು.
ಕಾಂಗ್ರೆಸ್ ಪಕ್ಷದ ಮಾಜಿ ಪ್ರಧಾನಿ ಇಂದಿರಾಗಾಂಧಿ ಅವರು ತುರ್ತುಪರಿಸ್ಥಿತಿಯಲ್ಲಿ ಬಡವರಿಗೆ ಹಸಿವು ನೀಗಿಸಿದರು.ಬಡವರಿಗೆ ಭೂ ಸುಧಾರಣೆ ಕಾಯ್ದೆ ಜಾರಿಗೊಳಿಸಿ ಭೂ ಮಾಲಿಕರಿಂದ 32ಲಕ್ಷ ಎಕರೆ ಜಮೀನು ನೀಡಿದರು.
ಬ್ಯಾಂಕ್ ಗಳ ರಾಷ್ಟ್ರೀಕರಣಗೊಳಿಸಿದರು. ಅಲ್ಲದೆ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ 73000 ಕೋಟಿ ರೂ ರೈತರ ಸಾಲ ಮನ್ನಾ ಮಾಡಿದ್ದರು.
ರಾಜ್ಯದಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ನವರು ಬಡವರ 4000 ಕೋಟಿ ಸಾಲಮನ್ನಾ ಮಾಡಿದ ಇತಿಹಾಸವಿದೆ. ಇದೀಗ ಪ್ರಣಾಳಿಕೆಗಳು ಎಲ್ಲಾವರ್ಗದ ಬಡವರಿಗೆ ವರದಾನವಾಗಲಿವೆ ಎಂದು ತಿಳಿಸಿದರು.
ಮನದ ಮಾತಿನಲ್ಲಿ ಸುಳ್ಳು ಬಿತ್ತರ:
ಬಿಜೆಪಿ ನೇತೃತ್ವದ ಪ್ರಧಾನಿ ನರೇಂದ್ರ ಮೋದಿ ಮನ್ ಕಿ ಬಾತ್ ನಲ್ಲಿ ಒಂದು ಬಾರಿಯೂ ಬಡವರ ಧ್ವನಿಯಾಗಿಲ್ಲ. ಪೆಟ್ರೋಲ್,ಡಿಸೇಲ್, ಸಿಲಿಂಡರ್ ಸೇರಿದಂತೆ ಅಗತ್ಯ ವಸ್ತುಗಳ ದರ ಏರಿಕೆ. ಕೋವಿಡ್ ವೇಳೆ ಸಾವಿನ ಮೇಲೆ ಹಣ ಲೂಟಿ ಹೊಡೆದರು. ರಾಜ್ಯದಲ್ಲಿ ಗುತ್ತಿಗೆದಾರರಿಂದ ಹೆಚ್ಚು ಪರ್ಸೆಂಟೇಜ್ ಬೇಡಿಕೆ ಕುರಿತು ಗುತ್ತಿಗೆದಾರರ ಸಂಘ ದೂರು ಸಲ್ಲಿಸಿದರೂ ಕ್ರಮಕೈಗೊಂಡಿಲ್ಲ.
ಬಂಡವಾಳ ಶಾಹಿ ಪರ ಆಡಳಿತ ನಡೆಸುತ್ತಾ ರೋಡ್ ಶೋ ಗಳ ಮೂಲಕ ವೇದಿಕೆಗಳಲ್ಲಿ ಸುಳ್ಳು ಹೇಳುವ ನಿಪುಣರು ಬಿಜೆಪಿ ಸರಕಾರದವರು ಎಂದು ಆರೋಪಿಸಿದರು.
ಎಐಸಿಸಿ ಪ್ರಧಾನಕಾರ್ಯದರ್ಶಿ ಅವಿನಾಶ್ ಪಾಂಡೆ ಮಾತನಾಡಿ,ದೇಶದಲ್ಲಿ ಬಿಜೆಪಿ ಆಡಳಿತಕ್ಕೆ ಬೇಸತ್ತು ಕಾಂಗ್ರೆಸ್ ಪಕ್ಷದ ಆಡಳಿತವನ್ನು ಜನತೆ ಬಯಸುತ್ತಿದ್ದಾರೆ. ಗ್ಯಾರಂಟಿ ಕಾರ್ಡ್ ಪ್ರಣಾಳಿಕೆಗಳು ಜನಪರವಾಗಿದ್ದು.ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರಬೇಕಿದೆ. 40 ಪರ್ಸೆಂಟೇಜ್ ಡಬಲ್ ಇಂಜಿನ್ ಸರಕಾರಕ್ಕೆ ಮುಕ್ತಿನೀಡಬೇಕು ಎಂದು ಮನವಿ ಮಾಡಿದರು.
ಕಾಂಗ್ರೆಸ್ ಅಭ್ಯರ್ಥಿ ಬಿ.ದೆವೇಂದ್ರಪ್ಪ ಮಾತನಾಡಿ, ಸ್ವಯಂ ಪ್ರೇರಿತವಾಗಿ ಆಗಮಿಸಿ ಮಾದಿಗ ಸಮಾಜದಿಂದ ಬೆಂಬಲ ವ್ಯಕ್ತಪಡಿಸಿದ್ದು ಗೆಲುವಿನ ದಿಕ್ಸೂಚಿ ಗೋಚರಿಸುತ್ತದೆ.
ಬಡತನದಲ್ಲಿ ಜನಿಸಿದ ನಾನು ಗ್ರಾಮಪಂಚಾಯಿತಿ ಸದಸ್ಯನಾಗುವ ಕನಸ್ಸನ್ನು ಕಂಡವನಲ್ಲ ಆದರೆ ಇಂದು ನನ್ನನ್ನು ಗುರುತಿಸಿ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿಯನ್ನಾಗಿ ಆಯ್ಕೆಮಾಡಿರುವ ಕಾಂಗ್ರೆಸ್ ಪಕ್ಷಕ್ಕೆ ಋಣಿಯಾಗಿರುವೆ.ಹಸ್ತದ ಗುರುತಿಗೆ ಮತನೀಡಿ ಗೆಲ್ಲಿಸಿ ತಮ್ಮ ಸೇವೆಗೆ ಒಂದು ಅವಕಾಶ ಕೊಡಿ ಎಂದು ಮನವಿ ಮಾಡಿದರು.
ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಅಸಗೋಡು ಜಯಸಿಂಹ ಕೆಪಿಸಿಸಿ ಎಸ್ ಟಿ ಘಟಕದ ರಾಜ್ಯಾಧ್ಯಕ್ಷ ಕೆಪಿ ಪಾಲಯ್ಯ ಮಾತನಾಡಿದರು.
ಸಂದರ್ಭದಲ್ಲಿ ಕೆಪಿಸಿಸಿ ವಕ್ತಾರ ಡಿ.ಬಸವರಾಜ್, ಕೆಪಿಸಿಸಿ ತಾಲೂಕು ಉಸ್ತುವಾರಿ ಕಲ್ಲೇಶ್ ರಾಜ್ ಪಟೇಲ್ ,ಪಲ್ಲಾಗಟ್ಟೆ ಶೇಖರಪ್ಪ,ಸಿ.ತಿಪ್ಪೇಸ್ವಾಮಿ,ಶಂಭುಲಿಂಗಪ್ಪ,ಹನುಮಂತಾಪುರ ಶಿವಕುಮಾರ್,ವಕೀಲ ಪುಣಭಗಟ್ಟಿ ನಿಂಗಪ್ಪ,ಮಹೇಶ್,ವಕೀಲ ಪ್ರಕಾಶ್,ಗೊಣೇಶ್,ಸೇರಿದಂತೆ ಇದ್ದರು.