ಸುದ್ದಿವಿಜಯ, ಜಗಳೂರು: ನಿಗದಿಯಾದಂತೆ ನಾಳೆ ಅಂದರೆ ಗುರುವಾರ ಜಗಳೂರು ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಚಿಕ್ಕಮ್ಮನಹಟ್ಟಿ ದೇವೇಂದ್ರಪ್ಪ ತಮ್ಮ ಉಮೇದುವಾರಿಕೆ ಸಲ್ಲಿಸಲಿದ್ದಾರೆ.
ಈಗಾಗಲೇ ಸಾಂಕೇತಿಕವಾಗಿ ನಾಮಪತ್ರ ಸಲ್ಲಿಸಿರುವ ಅವರು ನಾಳೆ ಪಕ್ಷದ ಕಾರ್ಯಕರ್ತು, ಮುಖಂಡರು, ಬೆಂಬಲಿಗರೊಂದಿಗೆ ಬೃಹತ್ ಸಂಖ್ಯೆಯಲ್ಲಿ ಆಗಮಿಸಿ ನಾಮಪತ್ರ ಸಲ್ಲಿಸಲಿದ್ದಾರೆ.
ಭಾರಿ ಜನ ಸೇರುವ ನಿರೀಕ್ಷೆ:
ಕಾಂಗ್ರೆಸ್ ಅಧಿಕೃತ ಅಭ್ಯರ್ಥಿಯಾಗಿರುವ ಚಿಕ್ಕಮ್ಮನಹಟ್ಟಿ ದೇವೇಂದ್ರಪ್ಪ ಅವರು ನಾಳೆ ಪಕ್ಷದ ಬಿ ಫಾರ್ಮ್ ಸಲ್ಲಿಸಿ ತಮ್ಮ ಉಮೇದುವಾರಿಕೆ ಸಲ್ಲಿಸಲಿದ್ದಾರೆ.
ನಾಳೆ ನಾಮಿಷನೇಷನ್ ಪ್ರಕ್ರಿಯೆಗೆ ಕೊನೆಯ ದಿನವಾಗಿದ್ದು ಶಕ್ತಿ ಪ್ರದರ್ಶನಕ್ಕೆ ಕಾಂಗ್ರೆಸ್ ಸಿದ್ಧವಾಗಿದೆ.
ಕ್ಷೇತ್ರದ 170 ಹಳ್ಳಿಗಳಿಂದ ಅಪಾರ ಕಾಂಗ್ರೆಸ್ ಅಭಿಮಾನಿಗಳು, ಕಾರ್ಯಕರ್ತರು ಭಾಗವಹಿಸಿಲಿದ್ದಾರೆ ಎಂದು ಕಾಂಗ್ರೆಸ್ ಮೂಲಗಳು ತಿಳಿಸಿವೆ. ಟ್ರಾಕ್ಟರ್, ಬಸ್, ಮಿನಿ ಟೆಂಪೋ, ಆಟೋಗಳ ಮೂಲಕ ಜನ ಆಗಮಿಸುವ ನಿರೀಕ್ಷೆಯಲ್ಲಿದ್ದಾರೆ.
ಶಕ್ತಿ ಪ್ರದರ್ಶನಕ್ಕೆ ಸಿದ್ದವಾಯ್ತಾ ಕಾಂಗ್ರೆಸ್:
ಈಗಾಗಲೇ ಬಿಜೆಪಿ ಅಭ್ಯರ್ಥಿ ಎಸ್.ವಿ.ರಾಮಚಂದ್ರ ಸಾಕಷ್ಟು ಜನರೊಂದಿಗೆ ಆಗಮಿಸಿ ಉಮೇದುವಾರಿಕೆ ಸಲ್ಲಿಸಿದ್ದಾರೆ. ಕಾಂಗ್ರೆಸ್ ಟಿಕೆಟ್ ವಂಚಿತ ಪಕ್ಷೇತರ ಅಭ್ಯರ್ಥಿ ಎಚ್.ಪಿ.ರಾಜೇಶ್ 15 ಸಾವಿರಕ್ಕೂ ಹೆಚ್ಚು ಬೆಂಬಲಿಗರೊಂದಿಗೆ ಬುಧವಾರ ನಾಮಪತ್ರ ಸಲ್ಲಿಸಿದರು.
ಇಬ್ಬರು ಅಭ್ಯರ್ಥಿಗಳಿಗಿಂತ ಒಂದು ʼಕೈʼ ಮೇಲೆ ಎಂಬಂತೆ ಕಾಂಗ್ರೆಸ್‌ನ 20 ಸಾವರಿಕ್ಕೂ ಹೆಚ್ಚು ಕಾರ್ಯಕರ್ತರು ಅಭಿಮಾನಿಗಳು ಮೆರವಣಿಗೆಯಲ್ಲಿ ಭಾಗವಹಿಸಲಿದ್ದಾರೆ. ಜಾನಪದ ಕಲಾ ಪ್ರಕಾರಗಳಾದ ಡ್ರಮ್‌ಸೆಟ್, ಡೊಳ್ಳುಕುಣಿತ ಸೇರಿದಂತೆ ಅನೇಕ ಬಗೆಯ ಕಲಾವಿಧರು ಮೆರವಣಿಗೆಯಲ್ಲಿ ಭಾಗಹಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.