ಸುದ್ದಿವಿಜಯ, ಜಗಳೂರು: ಕಳೆದ ಐದು ವರ್ಷಗಳಿಂದ ಬಿಜೆಪಿ ಪಕ್ಷದಲ್ಲಿ ಗುರುತಿಸಿಕೊಂಡಿದ್ದ ಬಿಜೆಪಿ ಮುಖಂಡ ಕಾನನಕಟ್ಟೆ ಪ್ರಭು ಚುನಾವಣೆ ಕೇವಲ ಐದು ದಿನ ಇರುವಾಗಲೇ ಶುಕ್ರವಾರ ಕಾಂಗ್ರೆಸ್ ಸೇರ್ಪಡೆಯಾಗಿ ಅಭ್ಯರ್ಥಿ ಚಿಕ್ಕಮ್ಮನಹಟ್ಟಿ ದೇವೇಂದ್ರಪ್ಪ ಅವರಿಗೆ ಬೆಂಬಲ ಸೂಚಿಸಿದ್ದಾರೆ.
ಈ ವೇಳೆ ಮಾತನಾಡಿದ ಅವರು, ನಾನು ಮೊದಲಿನಿಂದಲೂ ಎಡಪಂಥೀಯ ನಾನು ಮೊದಲು ಜೆಡಿಎಸ್ ಕ್ಷದಲ್ಲಿ ಬೆಳೆದವನು. 2008ರಲ್ಲಿ ರಾಜೇಶ್ ಅವರಿಗೆ ಬೆಂಬಲ ಸೂಚಿಸಿದೆ. ರಾಜೇಶ್ ಅವರ ಅಭಿಮಾನ ಬಳಗ ಕಟ್ಟಿದವನು ನಾನು. ನಾನು ರಾಮಚಂದ್ರಪ್ಪ ಪರವಾಗಿ ಎಂದೂ ಇಲ್ಲ ಎಂದು ಮಾರ್ಮಿಕವಾಗಿ ನುಡಿದರು.
ನಾನು ಎಸ್‍ವಿಆರ್‍ಗೆ ಎಂದೂ ವೋಟ್ ಹಾಕಿಲ್ಲ:
ನಾನು ಬಿಜೆಪಿಯಲ್ಲಿ ಇದ್ದರೂ ಎಂದೂ ಸಹ ಶಾಸಕ ಎಸ್‍ವಿ ರಾಮಚಂದ್ರಗೆ ವೋಟ್ ಹಾಕಿಲ್ಲ. ನಾಯಕ ಸಮುದಾಯವನ್ನು ಒಗ್ಗೂಡಿಸುವ ಕೆಲಸ ಮಾಡಿದ್ದೇನೆ ವಿನಃ ಮತ ಹಾಕಿ ಎಂದು ಹೇಳಿಲ್ಲ. ಸಿದ್ದರಾಮಯ್ಯ ಬಂದು ಹೋದ ಮೇಲೆ ನಾನೊಬ್ಬನೇ ಬದಲಾಗಿಲ್ಲ.
ಪ್ರತಿಯೊಬ್ಬ ಮತದಾರರನೂ ಬದಲಾಗಿದ್ದಾನೆ. ಈ ಬಾರಿ ಕಾಂಗ್ರೆಸ್ ಗೆಲ್ಲುವುದು ನಿಶ್ಚಿತ. ರಾಜೇಶ್ ಅವರನ್ನು ನಂಬಿಕೊಂಡು ಅವರ ಹಿಂದೆ ಹೋದವರು ಅವರು ಗೆದ್ದರೆ ಮತ್ತೆ ಕಾಂಗ್ರೆಸ್‍ಗೆ ಬರುತ್ತೇವೆ ಎಂಬ ದೃಢವಾಗಿದ್ದಾರೆ. ಎರವಲು ಬಂದವರನ್ನು ನಾವು ತೆರವುಗೊಳಿಸಬೇಕಿದೆ ಎಂದು ಕಾಂಗ್ರೆಸ್ ಬಿಟ್ಟು ಹೋದವರ ವಿರುದ್ಧ ಹರಿಹಾಯ್ದರು.
ಬಿಜೆಪಿ ಪಕ್ಷ ಕ್ಷೇತ್ರದಲ್ಲಿ ಸತ್ತು ಹೋಗಿದೆ. ಕಾಂಗ್ರೆಸ್ ಅಲೆಯಲ್ಲಿ ಪಕ್ಷೇತರ ಅಭ್ಯರ್ಥಿ ಕೊಚ್ಚಿ ಹೋಗುತ್ತಾರೆ. ಎರಡೂ ಅಭ್ಯರ್ಥಿಗಳು ಅಧಿಕಾರ ಅನುಭವಿಸಿ ಹೋಗಿದ್ದಾರೆ. ಹೊಸ ಮುಖಕ್ಕೆ ಅವಕಾಶ ಕೊಡಲು ಜನರು ನಿರ್ಧಾರ ಮಾಡಿದ್ದಾರೆ. ನನ್ನದೇ ಆದ ವೋಟರ್ಸ್ ಇದ್ದಾರೆ ಅವರು ಎಲ್ಲೂ ಹೋಗಲ್ಲ.
20 ವರ್ಷಗಳ ಕಾಲ ನಾವು ಜನರ ಸೇವೆ ಮಾಡಿದ್ದೇನೆ. ಕಷ್ಟ ಸುಖಕ್ಕೆ ನಾನು ಸ್ಪಂದಿಸುತ್ತಿದ್ದೇನೆ. ರಾಮಚಂದ್ರ, ರಾಜೇಶ್ ಇಬ್ಬರೂ ಸ್ಪಂದಿಸಿಲ್ಲ. ಈಬಾರಿ 30 ಸಾವಿರ ಅಂತರಗಳಿಂದ ಕಾಂಗ್ರೆಸ್ ಅಭ್ಯರ್ಥಿ ಬಿ.ದೇವೇಂದ್ರಪ್ಪ ಗೆಲ್ಲುತ್ತಾರೆ ಎಂದು ಕಾನನಕಟ್ಟೆ ಪ್ರಭು ಭವಿಷ್ಯ ನುಡಿದರು. ಈವೇಳೆ ಕಾಂಗ್ರೆಸ್ ಬ್ಲಾಕ್ ಅಧ್ಯಕ್ಷ ಷಂಷೀರ್ ಅಹ್ಮದ್, ಕೆ.ಪಿ.ಪಾಲಯ್ಯ, ಸುರೇಶ್ ಗೌಡ್ರು, ಸಿ.ತಿಪ್ಪೇಸ್ವಾಮಿ, ಪ್ರಕಾಶ್‍ರೆಡ್ಡಿ, ಡಿ.ಆರ್.ಹನುಮಂತಪ್ಪ, ಆದರ್ಶ, ದೇವಿಕೆರೆ ಗುರುಸ್ವಾಮಿ ಇದ್ದರು.