ಸುದ್ದಿವಿಜಯ, ಜಗಳೂರು: ಕಾಂಗ್ರೆಸ್ ಪಕ್ಷ ತಾಯಿ ಇದ್ದಂತೆ. ಕೆಲ ಕಾರ್ಯಕರ್ತರು, ಮುಖಂಡರು ಚುನಾವಣೆ ವೇಳೆ ಬೆನ್ನಿಗೆ ಚೂರಿ ಹಾಕುವ ಕೆಲಸ ಮಾಡಿದ್ದಾರೆ. ಅಂತಹವರನ್ನು ನಾವು ಎಂದಿಗೂ ಕ್ಷಮಿಸುವುದಿಲ್ಲ ಎಂದು ಶಾಸಕ ಬಿ.ದೇವೇಂದ್ರಪ್ಪ ಹೇಳಿದರು.
ಅರಸಿಕೆರೆ ಗ್ರಾಮದ ಕೋಲಶಾಂತೇಶ್ವರ ಮಠದ ಆವರಣದಲ್ಲಿ ಮಂಗಳವಾರ ಕಾರ್ಯಕರ್ತರು, ಮತದಾರರಿಗೆ ಹಮ್ಮಿಕೊಳ್ಳಲಾಗಿದ್ದ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದ ಅವರು, ಏಳು ಗ್ರಾಪಂ ಒಳ ಪಡುವ ಗ್ರಾಮಗಳು ಕಾಂಗ್ರೆಸ್ ಭದ್ರ ಬುನಾದಿ ಅಂದು ಕೊಂಡಿದ್ದೆ.ಆದರೆ ಇಲ್ಲಿ ಒಡೆದಾಳುವ ಅನೇಕ ಮಂದಿ ಇದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಹೇಡಿಗಳು ದಿನಾ ಸಾಯುತ್ತಾರೆ, ಶೂರ ಒಂದೇ ದಿನ ಸಾಯುತ್ತಾನೆ. ನಾನು ಹೇಡಿಯಲ್ಲ ಶೂರನಾಗಿಯೇ ಸಾಯುತ್ತೇನೆ. ನನ್ನಿಂದ ಕ್ಷೇತ್ರದ ಅಭಿವೃದ್ಧಿಯಾಗದೇ ಇದ್ದರೆ ರಾಜೀನಾಮೆ ಕೊಡಲು ಸಿದ್ದನಿದ್ದೇನೆ. ಕಾಂಗ್ರೆಸ್ ಸಮುದ್ರವಿದ್ದಂತೆ. ಪಕ್ಷದಲ್ಲೇ ಇದ್ದು ಪಕ್ಷಕ್ಕೆ ದ್ರೊಹ ಮಾಡುವವರನ್ನು ನಾವು ಎಂದೂ ಸಹಿಸುವುದಿಲ್ಲ ಎಂದು ಕುಟುಕಿದರು.