Suddivijaya/ Kannada news -9-4-2023
ಸುದ್ದಿವಿಜಯ,ಜಗಳೂರು: ಜಗಳೂರು ಕಾಂಗ್ರೆಸ್ ಟಿಕೆಟ್ ಪಟ್ಟಿಯನ್ನು ಕಾಂಗ್ರೆಸ್ ವರಿಷ್ಠರು ಇನ್ನು ಬಿಡುಗಡೆ ಮಾಡಿಲ್ಲ.
ಮೂರನೇ ಪಟ್ಟಿಯಲ್ಲಿ ಜಗಳೂರು ಕ್ಷೇತ್ರದ ಕೈ ಅಭ್ಯರ್ಥಿ ಯಾರು ಎನ್ನುವ ಕುತೂಹಲ್ಲಕ್ಕೆ ತೆರೆ ಬೀಳಲಿದೆ ಎನ್ನುವ ಮಾತುಗಳು ಕೇಳಿಬರುತ್ತಿವೆ.
ಹಾಗಾದ್ರೆ ಕೈ ಟಿಕೆಟ್ ಯಾರಿಗೆ?: ಟಿಕೆಟ್ ರೇಸ್‍ನಲ್ಲಿ ಕೇಂದ್ರದ ವರಿಷ್ಠರಿಗೆ ಎರಡು ಹೆಸರುಗಳು ತಲುಪಿವೆ ಎಂಬುದು ಗುಟ್ಟಾಗಿ ಉಳಿದಿಲ್ಲ.
ರೇಸ್‍ನಲ್ಲಿರುವ ಮಾಜಿ ಶಾಸಕ ಎಚ್.ಪಿ.ರಾಜೇಶ್, ಚಿಕ್ಕಮ್ಮನಹಟ್ಟಿ ದೇವೇಂದ್ರಪ್ಪ ಮತ್ತು ಕೆ.ಪಿ.ಪಾಲಯ್ಯ ಅವರ ಹೆಸರುಗಳು ಕೇಳಿ ಬರುತ್ತಿವೆ.
ಆದರೆ ವರಿಷ್ಠರಿಗೆ ತಲುಪಿರುವ ಎರಡು ಹೆಸರುಗಳಲ್ಲಿ ಇರುವ ಕೈಟಿಕೆಟ್ ಆಕಾಂಕ್ಷಿಗಳು ಯಾರು? ಎಂಬುದು ಮಾತ್ರ ಇನ್ನೂ ಕುತೂಹಲ ಮೂಡಿಸಿದೆ.
ನಾಳೆ ಕೈ ಅಭ್ಯರ್ಥಿಗಳ ಮೂರನೇ ಪಟ್ಟಿ?
ಬಲ್ಲ ಮೂಲಗಳ ಪ್ರಕಾರ ಕಾಂಗ್ರೆಸ್ ಕೈ ಟಿಕೆಟ್ ಮೂರನೇ ಪಟ್ಟಿ ಮಧ್ಯಾಹ್ನದ ಒಳಗೆ ಬಿಡುಗಡೆಯಾಗುವ ಸಾಧ್ಯತೆ ದಟ್ಟವಾಗಿದೆ.
ಚುನಾವಣೆಯಲ್ಲಿ ಗೊಂದಲಗಳು ಮೂಡದೇ ಇರಲಿ ಎನ್ನುವ ಕಾರಣಕ್ಕೆ ಟಿಕೆಟ್ ಮೂರನೇ ಪಟ್ಟಿಯನ್ನು ಬಿಡುಗಡೆಗೊಳಿಸಿ ಚುನಾವಣೆಗೆ ಹಣಿಯಾಗಲು ಕೈ ನಾಯಕರು ಒಟ್ಟಟ್ಟು ಪ್ರದರ್ಶಿಸಲು ನಿರ್ಧರಿಸಿದ್ದಾರೆ ಎನ್ನಲಾಗಿದೆ.
ದೇವೇಂದ್ರಪ್ಪ, ಜಯಸಿಂಹ ಭೇಟಿಯ ರಹಸ್ಯವೇನು?
ಕಾಂಗ್ರೆಸ್‍ನಲ್ಲಿ ಪ್ರಭಾವಿ ನಾಯಕ ಕೆಪಿಸಿಸಿ ಕಾರ್ಯದರ್ಶಿಗಳಾಗಿರುವ ಅಸಗೋಡು ಜಯಸಿಂಹ ಅವರನ್ನು ಭಾನುವಾರ ಚಿಕ್ಕಮ್ಮನಹಟ್ಟಿ ದೇವೇಂದ್ರಪ್ಪ ಮತ್ತು ಕೆ.ಪಿ.ಪಾಲಯ್ಯ ಅವರು ಅಸಗೋಡು ಗ್ರಾಮದಲ್ಲಿ ಶ್ರೀ ಶಂಬುಲಿಂಗೇಶ್ವರ ಸ್ವಾಮಿ ಹಾಗೂ ಆಂಜನೇಯ ಸ್ವಾಮಿ ರಥೋತ್ಸವ ಕಾರ್ಯಕ್ರಮದಲ್ಲಿ ಭೇಟಿಯಾಗಿದ್ದಾರೆ.
ಜೊತೆಗೆ ಕಾಂಗ್ರೆಸ್‍ನ ಅನೇಕ ನಾಯಕರು ಭೇಟಿ ಮಾಡಿರುವುದು ಕುತೂಹಲಕ್ಕೆ ಎಡೆ ಮಾಡಿಕೊಟ್ಟಿದೆ.
ಟಿಕೆಟ್ ಸಿಕ್ಕೇ ಸಿಗುತ್ತದೆ ಎನ್ನುವ ಭರವಸೆಯಲ್ಲಿರುವ ಟಿಕೆಟ್ ಆಕಾಂಕ್ಷಿಗಳಾದ ದೇವೇಂದ್ರಪ್ಪ ಮತ್ತು ಕೆ.ಪಿ.ಪಾಲಯ್ಯ ಅವರು ಜಯಸಿಂಹ ಅವರನ್ನು ಭೇಟಿ ಮಾಡಿ ಟಿಕೆಟ್ ರಾಜಕೀಯ ವಿದ್ಯಮಾನಗಳ ಬಗ್ಗೆ ಕೆಲ ಹೊತ್ತು ಚರ್ಚಿಸಿದರು ಎನ್ನಲಾಗಿದೆ.
ಈ ಸಂದರ್ಭದಲ್ಲಿ ಜಗಳೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಶಂಶೀರ್ ಅಹ್ಮದ್, ಮಾಜಿ ತಾಲೂಕ ಪಂಚಾಯತಿ ಅಧ್ಯಕ್ಷರಾದ ಸಣ್ಣ ಸೂರಯ್ಯ, ಪ್ರಕಾಶ್ ರೆಡ್ಡಿ, ಬಿಳಿಚೋಡು ಓಮಣ್ಣ, ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡರು, ಕಾರ್ಯಕರ್ತರು ಉಪಸ್ಥಿತರಿದ್ದರು.