ಸುದ್ದಿವಿಜಯ, ಜಗಳೂರು: ಹಿಂದುಳಿದ ಜಗಳೂರು ತಾಲೂಕಿನಲ್ಲಿ ನೀರಾವರಿ ಸೌಲಭ್ಯ ಕಲ್ಪಿಸಿ, ಆರೋಗ್ಯ, ಶಿಕ್ಷಣದ ಸಾರಿಗೆ ಸೇರಿದಂತೆ ಮೂಲಭೂತ ಸೌಕರ್ಯಗಳಿಗೆ ಒತ್ತು ನೀಡಲಾಗುವುದು ಎಂದು ಶಾಸಕ ಚಿಕ್ಕಮ್ಮನಹಟ್ಟಿ ಬಿ. ದೇವೇಂದ್ರಪ್ಪ ಹೇಳಿದರು.
ಪಟ್ಟಣದ ತರಳಬಾಳು ಕೇಂದ್ರದಲ್ಲಿ ಶನಿವಾರ ಬ್ಲಾಕ್ ಕಾಂಗ್ರೆಸ್ ವತಿಯಿಂದ ಜಗಳೂರು ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯ ಮತದಾರರಿ ಹಮ್ಮಿಕೊಂಡಿದ್ದ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದರು.
ಸಿ.ಎಂ ಸಿದ್ದರಾಮಯ್ಯ ಯಾವುದೇ ಷರತ್ತುಗಳಿಲ್ಲದೆ ಐದು ಗ್ಯಾರಂಟಿಗಳನ್ನು ಅನುಷ್ಠಾನಗೊಳಿಸಿ ಕೊಟ್ಟು ಮಾತನ್ನು ಉಳಿಸಿಕೊಂಡಿದ್ದಾರೆ. ಆದರೆ ಬಿಜೆಪಿ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಪ್ರತಿ ಶೂನ್ಯ ಖಾತೆದಾರ ಫಲಾನುಭವಿಗಳಿಗೆ 15 ಲಕ್ಷ ಜಮಾ ಮಾಡುತ್ತೆವೆಂದು ಹೇಳಿ ಎಂಟು ವರ್ಷಗಳಾದರೂ ಈಡೇರಿಲ್ಲ.
ಆಗಾದರೇ ಯಾರು ಸುಳ್ಳುಗಾರರು ಎಂದು ಒಮ್ಮೆ ಎಲ್ಲರು ಆಲೋಚನೆ ಮಾಡಬೇಕು. ದೇಶದಲ್ಲಿ ಸಂವಿಧಾನ ಉಳಿಯಬೇಕು, ಎಲ್ಲಾ ಧರ್ಮದವರು ಶಾಂತಿ ಸೌಹಾರ್ಧತೆಯಿಂದ ಬದುಕು ರೂಪಿಸಿಕೊಳ್ಳಬೇಕಾದರೆ ಕೇಂದ್ರದಲ್ಲಿ ಬಿಜೆಪಿ ಪಕ್ಷವನ್ನು ಸಂಪೂರ್ಣವಾಗಿ ಸೋಲಿಸಿ, ಕಾಂಗ್ರೆಸ್ ಅಧಿಕಾರಕ್ಕೆ ತರಬೇಕು ಎಂದರು.
ಬರೀ ಮಾತನಾಡುವ ಶಾಸಕನಾಗದೇ ಕ್ಷೇತ್ರದ ಅಭಿವೃದ್ದಿ ಪಡಿಸಿ ಜನರ ಸೇವೆ ಮಾಡುವ ಸೇವಕನಾಗುತ್ತೇನೆ. ಪಕ್ಷ ಬಿಟ್ಟು ಹೋದ ಕೆಲ ಕಾಂಗ್ರೆಸ್‍ನ ಮುಖಂಡರು, ಕಾರ್ಯಕರ್ತರು ಸಮ್ಮನೆ ಹೋಗಿದ್ದೇವಿ ಪುನಃ ಪಕ್ಷಕ್ಕೆ ಬರುತ್ತಿವಿ ಎಂದು ಹೇಳುತ್ತಿದ್ದಾರೆ, ಹೋಗುವುದು, ಬರುವುದು ನಿಮ್ಮಿಷ್ಟ, ಹಾಗೆಯೇ ಪಕ್ಷಕ್ಕೆ ಬಿಟ್ಟುಕೊಳ್ಳುವುದೂ ನಮ್ಮಿಷ್ಟ.
ಸ್ವಾಭಿಮಾನ ಪಾತಿವ್ರತೆ ಧರ್ಮವಿದ್ದರೆ, ಪಾವಿತ್ರತೆ ಉಳಿಯಬೇಕಾದರೆ ತಮ್ಮ ಆತ್ಮಾವಲೋಕನ ಮಾಡಿಕೊಂಡು ಬರಲಿ ನಿಮಗೆ ಕೆಂಪು ಹಾಸಿಗೆಯ ಸಿಂಹಾಸನದ ಮೇಲೆ ಕೂರಿಸಿ ನಾವು ಕೆಳಗೆ ಕೂರುತ್ತೇವೆ ಎನ್ನುತ್ತಿದ್ದಂತೆ ನೆರದಿದ್ದ ಸಾವಿರಾರು ಕಾರ್ಯಕರ್ತರು ಶಿಳ್ಳೆ ಹೊಡೆದು, ದೊಡ್ಡ ಧ್ವನಿಯಲ್ಲಿ ಕೇಕೆ ಹಾಕಿದರು.
ಕೆಪಿಸಿಸಿ ಎಸ್ಟಿ ಘಟಕ ಅಧ್ಯಕ್ಷ ಕೆ.ಪಿ ಪಾಲಯ್ಯ ಮಾತನಾಡಿ, ನಮ್ಮ ಮುಂದೆ ಸಾಕಷ್ಟು ಸವಾಲುಗಳಿವೆ, ನೂರಾರು ವರ್ಷಗಳ ಇತಿಹಾಸವಿರುವ ಕಾಂಗ್ರೆಸ್ ಪಕ್ಷದಲ್ಲಿ ಅಧಿಕಾರ ಅನುಭವಿಸಿ ಮಾಜಿ ಶಾಸಕರು, ಮುಖಂಡರು ಪಕ್ಷ ತೊರೆದು ಹೋದ ಮೇಲೆ ಎರಡನೇ ಹಂತದ ಮುಖಂಡರು ಪಕ್ಷವನ್ನು ಕಷ್ಟ ಕಾಲದಲ್ಲಿ ಕೈ ಹಿಡಿದು ಅಭ್ಯರ್ಥಿಯನ್ನು ಗೆಲ್ಲಿಸಿ ಅಧಿಕಾರಕ್ಕೆ ತಂದಿರುವ ಮತದಾರರ ಋಣ ತೀರಿಸುತ್ತೇವೆ ಎಂದರು.
ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ತರವುದು ಎಲ್ಲರ ಜವಾಬ್ದಾರಿ ಮುಂದಿನ ಲೋಕ ಸಭಾ ಚುನಾವಣೆಯಲ್ಲಿ ಗೆಲುವ ಪಡೆದು ಬಿಜೆಪಿಯನ್ನು ಕಿತ್ತು ಹಾಕಬೇಕು. ಕೇಂದ್ರದಲ್ಲಿ ಅಧಿಕಾರಕ್ಕೆ ತರಬೇಕು ಎಂದರು.
ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಅಸಗೋಡು ಜಯಸಿಂಹ ಮಾತನಾಡಿ, ಇಮಾಂ ಸಾಹೇಬರು, ಹಾಲಸ್ವಾಮೀ, ಕೃಷ್ಣಸಿಂಗ್, ಅಶ್ವತ್ ರೆಡ್ಡಿ, ಚನ್ನಯ್ಯ ಒಡೆಯರ್ ಈ ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸಿದರು. ದುಷ್ಟರು ಇರುವ ಕಡೆ ಧೈವ ಇರುತ್ತದೆ.
ರಾಜ್ಯದಲ್ಲಿದ್ದ ದುಷ್ಟತನವನ್ನು ತೊಲಗಿಸಿ ಧರ್ಮವನ್ನು ಜನರು ಎತ್ತಿ ಹಿಡಿದಿದ್ದಾರೆ. ಸರ್ಮಧರ್ಮವನ್ನು ಸಮಾನತೆಯಿಂದ ಕೊಂಡೊಯ್ಯುವ ಪಕ್ಷ ಕಾಂಗ್ರೆಸ್ ಆಗಿದೆ. ಸಿ.ಎಂ ಸಿದ್ದರಾಮಯ್ಯ ಸರ್ವ ಜನಾಂಗದ ನಾಯಕರಾಗಿದ್ದಾರೆ ಎಂದರು.
ಡಾ.ಉದಯ ಶಂಕರ್ ಒಡೆಯರ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಶಂಷೀರ್ ಅಹಮದ್, ಕ್ಷೇತ್ರ ಉಸ್ತುವಾರಿ ಕಲ್ಲೇಶ್ ರಾಜ್ ಪಟೇಲ್, ನಿವೃತ್ತ ಅಧಿಕಾರಿ ಸಿ. ತಿಪ್ಪೇಸ್ವಾಮಿ ಮಾತನಾಡಿದರು.
ಈ ಸಂದರ್ಭದಲ್ಲಿ ಕಾಂಗ್ರೆಸ್ ಜಿಲ್ಲಾ ಕಾರ್ಯದರ್ಶಿ ಪ.ಶೇಖರಪ್ಪ, ಸಿ.ತಿಪ್ಪೇಸ್ವಾಮಿ, ಕಮ್ಮತ್ತಳ್ಳಿ ಮಂಜುನಾಥ್, ಯರಬಳ್ಳಿ ಉಮಾಪತಿ, ಜಯದೇವನಾಯ್ಕ, ತಿಮ್ಮಾರೆಡ್ಡಿ, ಅಲ್ಪ ಸಂಖ್ಯಾತ ವರ್ಗದ ಅಧ್ಯಕ್ಷ ಅಹಮದ್ ಅಲಿ, ಮಹಿಳಾ ಘಟಕದ ಉಪಾಧ್ಯಕ್ಷ ಸಾವಿತ್ರಮ್ಮ ಸೇರಿದಂತೆ ಮತ್ತಿತರರು ಇದ್ದರು.