ಸುದ್ದಿವಿಜಯ, ಜಗಳೂರು: ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದ ಡಾ.ಪ್ರಭಾ ಮಲ್ಲಿಕಾರ್ಜುನ್ ಗೆಲುವು ಸಾಧಿಸುತ್ತಿದ್ದಂತೆ ಪಟ್ಟಣದ ಮಹಾತ್ಮಾಗಾಂಧಿ ವೃತ್ತದಲ್ಲಿ ಮಂಗಳವಾರ ಕಾಂಗ್ರೆಸ್ ಕಾರ್ಯಕರ್ತರು ಪಟಾಕಿ ಸಿಡಿಸಿ ಸಂಭ್ರಮಿಸಿದರು.
ಕಾಂಗ್ರೆಸ್ ಅಭ್ಯರ್ಥಿ ಪ್ರಭಾ ಮಲ್ಲಿಕಾರ್ಜುನ್ ಚುನಾವಣೆಗೆ ಸ್ಪರ್ಧಿಸಿದ ನಂತರ ಕ್ಷೇತ್ರದ ಈಶಾನ್ಯ ದಿಕ್ಕಾದ ಚಿಕ್ಕ ಉಜ್ಜಿನಿ ಗ್ರಾಮದಿಂದ ಮೊದಲ ಬಾರಿಗೆ ತಮ್ಮ ಪ್ರಚಾರ ಕಾರ್ಯ ಆರಂಭಿಸಿದ್ದರು. ಹೀಗಾಗಿ ಜಗಳೂರು ಕ್ಷೇತ್ರದಲ್ಲಿ ಕಾರ್ಯಕರ್ತರು ಡಾ.ಪ್ರಭಾ ಮಲ್ಲಿಕಾರ್ಜುನ್ ಗೆಲುವು ಸಾಧಿಸುತ್ತಿದ್ದಂತೆ ಪಟಾಕಿ ಸಿಡಿಸಿ, ಸಿಹಿ ಹಂಚಿ ಜಯ ಘೋಷ ಕೂಗಿ ಸಂಭ್ರಮಿಸಿದರು.ಜಗಳೂರು ತಾಲೂಕಿನ ಮಹಾತ್ಮಾಗಾಂಧಿ ವೃತ್ತದಲ್ಲಿ ಕಾಂಗ್ರೆಸ್ ಮುಖಂಡರು ಪಟಾಕಿ ಸಿಡಿಸಿ ಸಂಭ್ರಮಿಸಿದರು.
ಈ ಸಂದರ್ಭದಲ್ಲಿ ಮುಸ್ಲಿಂ ಸಮಾಜದ ಮುಖಂಡರಾದ ಇಕ್ಬಾಲ್ ಅಹ್ಮದ್ ಖಾನ್, ಯುವ ಮುಖಂಡ ಎಚ್.ಬಿ.ಬರ್ಕತ್ ಅಲಿ ಪಪಂ ಸದ್ಯಸ ಶಕೀಲ್ ಅಹ್ಮದ್, ಯುವ ಕಾಂಗ್ರೆಸ್ ಉಪಾಧ್ಯಕ್ಷರಾದ ಮೊಹಮ್ಮದ್, ಜಮೀಲ್ ಗೌಸ್ ಮೋಹದ್ದಿನ್, ನಾಗರಾಜ್, ಸಾದಿಕ್, ಕಟ್ಟಪ ಗಿರಿ, ಅನ್ವರ್ ಸೇರಿದಂತೆ ಅನೇಕರು ಇದ್ದರು.
ಕ್ಷೇತ್ರದಲ್ಲಿ ತ್ರಿಬಲ್ ಎಂಜಿನ್ ಬಲ:
ಡಾ.ಪ್ರಭಾ ಮಲ್ಲಿಕಾರ್ಜುನ್ ವಿಜಯ ಐತಿಹಾಸಿಕ ಗೆಲುವಾಗಿದೆ. ಪ್ರಜ್ಞಾವಂತ, ವಿದ್ಯಾವಂತರಾದ ಡಾ.ಪ್ರಭಾ ಮಲ್ಲಿಕಾರ್ಜುನ್ ಗೆಲುವಿನಿಂದ ದಾವಣಗೆರೆ ಕ್ಷೇತ್ರವೂ ಸೇರಿದಂತೆ ಜಗಳೂರು ವಿಧಾನಸಭಾ ಕ್ಷೇತ್ರ ಸಾಕಷ್ಟು ಅಭಿವೃದ್ಧಿಯಾಗುತ್ತದೆ.
ಹಿಂದುಳಿದ ಜಗಳೂರು ಕ್ಷೇತ್ರದಲ್ಲಿ ನವೋದ್ಯಮ, ಕೃಷಿಗೆ ಬೇಕಾಗುವ ನೀರು, ಮಹಿಳೆಯರಿಗೆ ಗಾರ್ಮೆಂಟ್ಸ್, ಆರೋಗ್ಯ ಕ್ಷೇತ್ರದ ಅಭಿವೃದ್ಧಿಗೆ ಸಾಕಷ್ಟು ಶ್ರಮಿಸಲಿದ್ದಾರೆ. ಈಗ ತ್ರಿಬಲ್ ಎಂಜಿನ್ ಶಕ್ತಿ ಬಂದಂತಾಗಿದೆ ಎಂದು ಶಾಸಕ ಬಿ.ದೇವೇಂದ್ರಪ್ಪ ಪ್ರತಿಕ್ರಿಯೆ ನೀಡಿದರು.