ಸುದ್ದಿವಿಜಯ, ಜಗಳೂರು: ಪಟ್ಟಣದ ಇಂದಿರಾ ಬಡಾವಣೆ ಜಟ್‍ಪಟ್ ನಗರದಲ್ಲಿ ಗುರುವಾರ ಕಾಳಾಚಾರಿ ಅವರ ಪುತ್ರ ಎ.ಶ್ರೀನಿವಾಸ್(35) ಅಲಿಯಾಸ್ ಬಂಗಾರದ ಅಂಗಡಿ ಸೀನ ಆತ್ಮಹತ್ಯೆಗೆ ಶರಣಾಗಿದ್ದಾರೆ.
ಮೃತ ಶ್ರೀನಿವಾಸ್ ಅವರಿಗೆ ಹೆಂಡತಿ, ಒಂದು ಗಂಡು, ಒಂದು ಹೆಣ್ಣು ಮಗುವಿದೆ. ಈ ಹಿಂದೆ ಸ್ವಂತ ಬಂಗಾರದ ಅಂಗಡಿ ಮಾಲೀಕನಾಗಿದ್ದ ಶ್ರೀನಿವಾಸ್ ಪ್ರಸ್ತುತ ಹೂವಿನ ಅಂಗಡಿ ನಡೆಸುತ್ತಿದ್ದರು.
ಕ್ರಿಕೆಟ್ ಬೆಟ್ಟಿಂಗ್ ಮತ್ತು ಖಾಸಗಿ ಸಾಲಗಾರರ ಕಾಟಕ್ಕೆ ನಲುಗಿ ಹೋಗಿದ್ದರು. ಜತೆಗೆ ಕುಡಿತದ ಚಟಕ್ಕೆ ಬಿದ್ದಿದ್ದ ಅವರು ಮಾನಸಿಕ ಖಿನ್ನತೆ ಅನುಭವಿಸುತ್ತಿದ್ದರು.
ಮನೆಯಲ್ಲಿ ಏಕಾಂಗಿಯಾಗಿದ್ದ ಶ್ರೀನಿವಾಸ್ ಮನೆಯ ಕೊಠಡಿಯಲ್ಲಿರುವ ಫ್ಯಾನ್‍ಗೆ ನೇಣು ಹಾಕಿಕೊಂಡು ಅವರು ಆತ್ಮಹತ್ಯೆಗೆ ಶರಣಾಗಿದ್ದಾರೆ.
ಗುರುವಾರ ಬೆಳಿಗ್ಗೆ ಪ್ರಕರಣ ಬೆಳಕಿಗೆ ಬಂದಿದ್ದು ಜಗಳೂರು ಪಟ್ಟಣದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸಾರ್ವಜನಿಕ ಆಸ್ಪತ್ರೆಯ ಶವಾಗಾರದಲ್ಲಿ ಮರಣೋತ್ತರ ಪರೀಕ್ಷೆಯ ನಂತರ ಜಗಳೂರು ಪಟ್ಟಣದ ರುದ್ರಭೂಮಿಯಲ್ಲಿ ಅಂತ್ಯಕ್ರಿಯೆ ನೆರವೇರಿತು.