ಸುದ್ದಿವಿಜಯ, ದಾವಣಗೆರೆ: ಬಿಜೆಪಿಯಿಂದ ಜಗಳೂರು ಮಾಜಿ ಶಾಸಕ ಟಿ.ಗುರುಸಿದ್ದನಗೌಡ ಮತ್ತು ಅವರ ಪುತ್ರರನ್ನು ಉಚ್ಛಾಟನೆ ಮಾಡಿದ ಬೆನ್ನಲ್ಲೆ ಬಿಜೆಪಿ ನಾಯಕ, ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಅವರನ್ನು ಗುರುವಾರ ಚಿಕ್ಕಮಗಳೂರಿನ ನಿವಾಸದಲ್ಲಿ ಮಾಜಿ ಶಾಸಕ ಟಿ.ಜಿ.ಗುರುಸಿದ್ದನಗೌಡ ಮತ್ತು ದಾವಣಗೆರೆ ಆರೈಕೆ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಮುಖ್ಯಸ್ಥ ಡಾ. ಟಿ.ಜಿ.ರವಿಕುಮಾರ್ ಭೇಟಿ ಮಾಡಿ ಚರ್ಚಿಸಿದರು.
ಭಾರತದ ಉಳುವಿಗಾಗಿ ನರೇಂದ್ರ ಮೋದಿಯವರನ್ನು ಮತ್ತೊಮ್ಮೆ ಪ್ರಧಾನಿ ಆಗಲೇಬೇಕಿದೆ. ಹೀಗಾಗಿ ಬಿಜೆಪಿ ಪಕ್ಷದ ಸಂಘಟನೆಯನ್ನು ಎಲ್ಲರೂ ಒಗ್ಗಟ್ಟಾಗಿ ದುಡಿಯೋಣ ಎಂದು ಸಂಕಲ್ಪ ಮಾಡಲಾಯಿತು.ದಾವಣಗೆರೆ ಬಿಜೆಪಿಯ ಜಿಲ್ಲಾ ಮಟ್ಟದಲ್ಲಿ ಕೆಲವರ ಸ್ವಹಿತಾಸಕ್ತಿಗಳ ಬಗ್ಗೆಯೂ ಚರ್ಚೆ ನಡೆಯಿತು. ಪಕ್ಷದ ರಾಷ್ಟ್ರೀಯ ನಾಯಕರು ರಾಜ್ಯ ಮತ್ತು ಜಿಲ್ಲೆಯ ವಿದ್ಯಮಾನ್ಯಗಳ ಬಗ್ಗೆ ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ, ಪಕ್ಷ ಸಂಘಟನೆ ಮುಂದುವರಿಸಿ ಎಂದು ಸಿ.ಟಿ.ರವಿ ಅಭಯ ನೀಡಿದರು.
ಬಿಜೆಪಿ ಹಿರಿಯ ನಾಯಕರು, ಜಗಳೂರು ಮಾಜಿ ಶಾಸಕರಾದ ಗುರುಸಿದ್ದನಗೌಡ, ತಾಲೂಕು ಪಂಚಾಯಿತಿ ಸದಸ್ಯರಾದ ಪಿ.ಎಂ.ಶಿವಣ್ಣ ಗೌರಿಪುರ, ಮಲ್ಲಿಕಾರ್ಜುನ ಬಾಬು, ನಾಗರಾಜಸ್ವಾಮಿ ಸೇರಿದಂತೆ ಹಲವು ಮುಖಂಡರು ಉಪಸ್ಥಿತರಿದ್ದರು.