ಸುದ್ದಿವಿಜಯ,ಜಗಳೂರು: ಬೆಂಗಳೂರಿನಲ್ಲಿ ಪಿಯುಸಿ ವಿದ್ಯಾಭ್ಯಾಸ ಮಾಡುತ್ತಿದ್ದ ದಲಿತ ಬಾಲಕೀಯ ಮೇಲೆ ಅತ್ಯಾಚಾರ ಎಸಗಿ ಕೊಲೆ ಮಾಡಿರುವ ಆರೋಪಿಗಳಿಗೆ ಗಲ್ಲು ಶಿಕ್ಷೆ ವಿಧಿಸಬೇಕು ಎಂದು ಒತ್ತಾಯಿಸಿ ಶುಕ್ರವಾರ ದಲಿತ ಸಂಘರ್ಷ ಸಮಿತಿ(ಪ್ರೋ. ಕೃಷ್ಣಪ್ಪ ಬಣ) ವತಿಯಿಂದ ಪ್ರತಿಭಟನೆ ನಡೆಸಿದರು.
ಇಲ್ಲಿನ ಪ್ರವಾಸಿ ಮಂದಿರದಿಂದ ಆರಂಭವಾದ ಪ್ರತಿಭಟನಾ ಮೆರವಣಿಗೆ ಹಳೇ ಮಹಾತ್ಮಗಾಂಧಿ ವೃತ್ತ, ಹೊಸ ಬಸ್ ನಿಲ್ದಾಣ, ಡಾ.ಬಿ.ಆರ್ ಅಂಬೇಡ್ಕರ್ ವೃತ್ತದ ಮೂಲಕ ತಾಲೂಕು ಕಚೇರಿಗೆ ತೆರಳಿ ತಹಸೀಲ್ದಾರ್ ಸಂತೋಷ್ ಕುಮಾರ್ ಅವರಿಗೆ ಮನವಿ ಸಲ್ಲಿಸಿದರು.
ಅಪ್ರಾಪ್ತ ದಲಿತ ಬಾಲಕಿ ಪಲ್ಲವಿ ಶಿವಾನಂದ ಅವರು ಉತ್ತರ ಕರ್ನಾಟಕದ ಮೂಲದವರಾಗಿದ್ದು, ಇವರ ತಂದೆ ಬೆಂಗಳೂರು ನಗರದಲ್ಲಿ ಚಾಲಕರಾಗಿ ಕೆಲಸ ಮಾಡುತ್ತಿದ್ದರು. ಬರುವ ಆದಾಯದಲ್ಲಿಯೇ ತನ್ನ ಮಗಳಿಗೆ ನಗರದ ಕಾಲೇಜ್‌ವೊಂದರಲ್ಲಿ ಸೇರಿಸಿದ್ದರು.
ಪ್ರಥಮ ಪಿಯುಸಿ ವ್ಯಾಸಂಗ ಮಾಡುತ್ಯಿದ್ದ ಪಲ್ಲವಿ ಎಂದಿನಂತೆ ಮಾ.25ರಂದು ಕಾಲೇಜು ಮುಗಿಸಿಕೊಂಡು ಮರಳಿ ಮನೆಗೆ ಬರುತ್ತಿರುವಾಗ ಆಪ್ತ ಸ್ನೇಹಿತರೇ ಆಕೆಯನ್ನು ಎಳೆದೊಯ್ದು ನಿರ್ಜನ ಪ್ರದೇಶದಲ್ಲಿ ಸಾಮೂಹಿಕ ಅತ್ಯಾಚಾರ ಮಾಡಿದಲ್ಲದೆ ಕೊಲೆ ಮಾಡಿದ್ದಾರೆ. ನಂತರ ಮೃತ ದೇಹವನ್ನು ತಾತಾಗುಣಿ ಎಸ್ಟೇಟ್ ಬಳಿ ಕಾಡಿನಲ್ಲಿ ಬಿಸಾಡಿ ಪರಾರಿಯಾಗಿದ್ದಾರೆ.
ಈ ಘಟನೆ ಬಗ್ಗೆ ಸಾಮಾಜಿಕ ಜಾಲ ತಾಣಗಳಲ್ಲಿ ಬಿತ್ತರವಾದ ನಂತರ ಸ್ಥಳೀಯ ಪೊಲೀಸರು ೩-೪ದಿನಗಳ ನಂತರ ಆರೋಪಿಗಳನ್ನು ಪತ್ತೆ ಹಚ್ಚಿ ಯಾವುದೇ ತನಿಖೆಯನ್ನು ಕ್ರಮಬದ್ದವಾಗಿ ನಡೆಸಿಲ್ಲ.
ತನಿಖಾಧಿಕಾರಿಗಳ ಮೇಲೆ ಆರ್ಥಿಕ ಮತ್ತು ರಾಜಕೀಯ ಪ್ರಭಾವವನ್ನು ಬೀರಿರುವುದು ಇವರ ನಡಾವಳಿಕೆಯಿಂದ ಮೇಲ್ನೋಟಕ್ಕೆ ಕಂಡು ಬರುತ್ತಿದೆ. ಇದನ್ನು ನಿರ್ಲಕ್ಷ ಮಾಡಿದರೇ ಮೃತ ಪಲ್ಲವಿ ಕುಟುಂಬಕ್ಕೆ ಅನ್ಯಾಯವಾಗುವುದರಲ್ಲಿ ಯಾವುದೇ ಸಂಶಯವಿಲ್ಲ.
ಆದ್ದರಿಂದ ಅವರಿಗೆ ನ್ಯಾಯ ಸಿಗಬೇಕು ತಪ್ಪಿತಸ್ಥರಿಗೆ ಗಲ್ಲು ಶಿಕ್ಷೆ ವಿಧಿಸಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.
ಅತ್ಯಾಚಾರಕ್ಕೆ ಸಂಬಂಧಿಸಿದಂತೆ ಸರ್ಕಾರ ಅನೇಕ ಕಾನೂನುಗಳನ್ನು ಜಾರಿಗೆ ತಂದರೂ ಪ್ರಕರಣಗಳು ಕಡಿಮೆಯಾಗುತ್ತಿಲ್ಲ. ಬಾಲಕಿಯರು, ಹೆಣ್ಣು ಮಕ್ಕಳು ಒಂಟಿಗರಾಗಿ ಓಡಾಡುವುದು ಕಷ್ಟವಾಗಿದೆ. ಸ್ನೇಹಿತರನ್ನು ನಂಬಿ ಹೋದರೆ ಇಂತಹ ಕೃತ್ಯ ಎಸಗಿರುವುದು ಖಂಡನೀಯ ಎಂದರು.
ಈ ಸಂದರ್ಭದಲ್ಲಿ ದಸಂಸ ತಾಲೂಕು ಸಂಚಾಲಕ ಮಲೇಮಾಚಿಕೆರೆ ಸತೀಶ್, ದೇವಿಕೆರೆ ಮಧು, ತಿಮ್ಮಣ್ಣ, ಮಂಜುನಾಥ್, ಹುಚ್ಚವ್ವನಹಳ್ಳಿ ನಿರಂಜ್, ಕುರಿ ಜಯ್ಯಣ್ಣ, ಬಸವರಾಜ್, ಪರಶುರಾಮ, ತಾನಾಜಿ ಗೋಸಾಯಿ ಸೇರಿದಂತೆ ಮತ್ತಿತರಿದ್ದರು.