ಸುದ್ದಿವಿಜಯ, ಜಗಳೂರು : ತಾಲ್ಲೂಕಿನ ಅಣಬೂರು ಗ್ರಾಮ ಪಂಚಾಯತಿ ವ್ಯಾಪ್ತಿಯ ದೊಡ್ಡ ಬೊಮ್ಮನಹಳ್ಳಿ ಗ್ರಾಮದ ಎರಡು ಗ್ರಾಮ ಪಂಚಾಯತಿ ಸದಸ್ಯರ ಸ್ಥಾನಕ್ಕೆ ನೆಡೆದ ಉಪ ಚುನಾವಣೆಯಲ್ಲಿ ಮಹಿಳಾ ಸದಸ್ಯೆ ವನಜಾಕ್ಷಮ್ಮ ಹಾಗೂ ಪುರುಷ ಸದಸ್ಯರಾದ ಬೋರಪ್ಪ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾ ಅಧಿಕಾರಿ ರಜಾಕ್ ಅವರು ತಿಳಿಸಿದ್ದಾರೆ
ಅಣಬೂರು ಗ್ರಾಮ ಪಂಚಾಯತಿ ವ್ಯಾಪ್ತಿ ದೊಡ್ಡ ಬೊಮ್ಮನಹಳ್ಳಿ ಗ್ರಾಮ ಪಂಚಾಯಿತಿ ಸದಸ್ಯರ ಸ್ಥಾನಕ್ಕೆ ಈ ಹಿಂದೆಯೂ ಸಹ ತಲಾ ಎರಡು ವರೆ ವರ್ಷದ ಅವದಿಗೆ ಸದಸ್ಯರ ಎಂಬಂತೆ ಒಡಂಬಡಿಕೆ ನೆಡೆದು ಅವರೋಧವಾಗಿ ಶ್ರೀ ಮತಿ ಶಾರದಮ್ಮ ಹಾಗೂ ನಾಗೇಂದ್ರಪ್ಪ ಆಯ್ಕೆಯಾಗಿದ್ದರು.
ಅವರ ಅವದಿ ಮುಗಿದ ನಂತರ ಸದಸ್ಯರು ರಾಜೀನಾಮೆ ನೀಡಿದ್ದರಿಂದ ತೆರವಾದ ಸ್ಥಾನಕ್ಕೆ ಬುದುವಾರ ಚುನಾವಣೆ ನಿಗದಿಯಾಗಿತ್ತು ಎರಡು ಸ್ಥಾನಕ್ಕೆ ಅದೇ ಗ್ರಾಮದ ವನಜಾಕ್ಷಮ್ಮ ಮತ್ತು ಎಂ.ಬೋರಪ್ಪ ಎಂಬುವರು ನಾಮಪತ್ರ ಸಲ್ಲಿಸಿದರು.
ಅವರು ಹೊರತು ಯಾರು ನಾಮಪತ್ರ ಸಲ್ಲಿದೆ ಇರುವುದರಿಂದ ಚುನಾವಣಾ ಅಧಿಕಾರಿಗಳು ವನಜಾಕ್ಷಮ್ಮ ಹಾಗು ಎಂ.ಬೋರಪ್ಪ ಅವರನ್ನ ಗ್ರಾಮ ಪಂಚಾಯತಿ ಸದಸ್ಯರು ಎಂದು ಘೋಷಣೆ ಮಾಡಿದರು
ಅಣಬೂರು ಜಿಲ್ಲಾ ಪಂಚಾಯಿತಿ ವ್ಯಾಪ್ತಿಯ ಕಾಂಗ್ರೆಸ್ ಮುಖಂಡರಾದ ಕಾನನಕಟ್ಟೆ ಕೆ.ಎಸ್.ಪ್ರಭುಗೌಡ್ರು ಅವರ ಸಹಕಾರದಿಂದ ಅವಿರೋಧ ಆಯ್ಕೆ ಫಲಪ್ರದವಾಗಿದೆ.
ಈ ವೇಳೆ ಪತ್ರಕರ್ತರ ಜೊತೆ ಮಾತನಾಡಿದ ಅವರು, ಉಳಿದ ಮುವತ್ತು ತಿಂಗಳ ಅವದಿಗೆ ಚುನಾವಣೆ ನೆಡೆಯಬೇಕಿತ್ತು ಆದರೆ ಅನಗತ್ಯ ಖರ್ಚು ವೆಚ್ಚಗಳ ನಿಯಂತ್ರಣ ಮತ್ತು ಆರೋಗ್ಯರ ಸಮಾಜ ಗ್ರಾಮದ ಅಬಿವೃದ್ದಿ ದೃಷ್ಟಿಯಿಂದ ಹಿರಿಯರು ಸಮ್ಮುಖದಲ್ಲಿ ಅವಿರೋಧ ಆಯ್ಕೆ ಮಾಡಿದ್ದೇವೆ.
ನೂತನ ಸದಸ್ಯರು ಇರುವ ಅವದಿಯಲ್ಲಿ ಗ್ರಾಮದ ಅಭಿವೃದ್ಧಿಗೆ ಶ್ರಮಿಸಿ ಎಂದು ಸಲಹೆ ನೀಡಿದರು
ಈ ಸಂದರ್ಭದಲ್ಲಿ ಗ್ರಾ.ಪಂ ಶಿವಲಿಂಗಪ್ಪ ಸೇರಿದಂತೆ ದೊಡ್ಡ ಬೊಮ್ಮನಹಳ್ಳಿ ಗ್ರಾಮದ ಹಿರಿಯ ಮುಖಂಡರು ಕಾರ್ಯಕರ್ತರು ಗ್ರಾಮಸ್ಥರು ಅಣಬೂರು ಗ್ರಾ.ಪಂ.ಸಿಬ್ಬಂದ್ದಿಗಳು ಇದ್ದರು