ಸುದ್ದಿವಿಜಯ, ಜಗಳೂರು: ಸಾಹಿತಿ, ಸಾಮಾಜಿಕ ಚಿಂತಕ, ಇತ್ತೀಚೆಗೆ ಬಿಡುಗಡೆಯಾದ ‘ಜಗಲೂರು ಸೀಮೆಯ ಜಾತ್ರೆಗಳು ಪುಸ್ತಕ ಕರ್ತೃ’ ಡಾ.ಸಂಗೇನಹಳ್ಳಿ ಅಶೋಕ್ ಕುಮಾರ್ ಅವರ ತಾಯಿ ಕೆ.ಎಸ್.ಹನುಮಕ್ಕ(88) ವಿಧಿವಶರಾಗಿದ್ದಾರೆ.
ಕಳೆದ ಕೆಲ ದಿನಗಳ ಹಿಂದೆ ಪಾರ್ಶ್ವವಾಯುವಿನಿಂದ ಬೆಂಗಳೂರಿನ ಬಸವೇಶ್ವರ ಆಸ್ಪತ್ರೆಗೆ ಅವರನ್ನು ದಾಖಲಿಸಲಾಗಿತ್ತು.
ಆದರೆ ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಚೇತರಿಕೆ ಕಂಡಿರಲಿಲ್ಲ. ಏ.18 ಶನಿವಾರ (ಇಂದು)ಬೆಳಿಗ್ಗೆ ವಿಧಿವಶರಾಗಿದ್ದಾರೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.ಮೂಲತಃ ಜಗಳೂರು ತಾಲೂಕಿನ ಸಂಗೇನಹಳ್ಳಿ ಗ್ರಾಮದವರಾಗಿದ್ದರೂ ಚಿತ್ರದುರ್ಗದಲ್ಲಿ ಪತ್ರನೊಂದಿಗೆ ನೆಲೆಸಿದ್ದರು. ಶನಿವಾರ ಮಧ್ಯಾಹ್ನ 3.30ಕ್ಕೆ ಚಿತ್ರದುರ್ಗದ ಕಬೀರಾನಂದ ಮಠದ ಸಮೀಪ ಇರುವ ಮುಕ್ತಿಧಾಮದಲ್ಲಿ ಅಂತ್ಯಕ್ರಿಯೆ ನೆರವೇರಲಿದೆ ಎಂದು ತಿಳಿದು ಬಂದಿದೆ.
ಕಳೆದ ಮೂರು ತಿಂಗಳ ಹಿಂದಷ್ಟೇ ಅವರ ಪುತ್ರ ಡಾ.ಸಂಗೇನಹಳ್ಳಿ ಅಶೋಕ್‍ಕುಮಾರ್ ಬರೆದಿದ್ದ ‘ಜಗಲೂರು ಸೀಮೆಯ ಜಾತ್ರೆಗಳು’ ಪುಸ್ತಕವನ್ನು ಕೆ.ಎಸ್.ಹನುಮಕ್ಕ ಲೋಕಾರ್ಪಣೆಗೊಳಿಸಿದ್ದರು. ಅವರ ಅಗಲಿಕೆಯಿಂದ ಪುತ್ರ ಡಾ.ಸಂಗೇನಹಳ್ಳಿ ಅಶೋಕ್‍ಕುಮಾರ್ ಮತ್ತು ಬಂಧುಗಳು ಅತೀವ ದುಃಖ ವ್ಯಕ್ತಪಡಿಸಿದ್ದಾರೆ.
ಸಾವಿನಲ್ಲೂ ಸಾರ್ಥಕತೆ:
ದೈವಾಧೀನರಾದ ಹನುಮಕ್ಕ ಸಾವಿನಲ್ಲೂ ಸಾರ್ಥಕತೆ ಮೆರೆದಿದ್ದಾರೆ. ಅವರ ಮರಣದ ನಂತರ ಅವರ ಕೊನೆಯ ಆಸೆಯಂತೆ ಅವರ ಕಣ್ಣುಗಳನ್ನು ದಾನಮಾಡಲಾಗಿದೆ ಎಂದು ಪುತ್ರ ಡಾ.ಸಂಗೇನಹಳ್ಳಿ ಅಶೋಕ್‍ಕುಮಾರ್ ಮತ್ತು ಹಿರಿಯ ಸಾಹಿತಿ ಯಾದವರೆಡ್ಡಿ ತಿಳಿಸಿದರು.