ದ್ರೌಪದಿ ಮುರ್ಮು ಆಯ್ಕೆಗೆ ಜಗಳೂರಿನಲ್ಲಿ ವಿಜಯೋತ್ಸವ

Suddivijaya
Suddivijaya July 22, 2022
Updated 2022/07/22 at 1:59 AM

ಸುದ್ದಿವಿಜಯ ಜಗಳೂರು:ಎನ್‍ಡಿಎ ರಾಷ್ಟ್ರಪತಿ ಅಭ್ಯರ್ಥಿ ದ್ರೌಪದಿ ಮುರ್ಮು ಗೆಲುವಿನ ಹಿನ್ನೆಲೆಯಲ್ಲಿ ಜಗಳೂರು ಪಟ್ಟಣದ ಗಾಂಧಿ ವೃತ್ತದಲ್ಲಿ ಶಾಸಕ ಎಸ್.ವಿ.ರಾಮಚಂದ್ರ ನೇತೃತ್ವದಲ್ಲಿ ಬಿಜೆಪಿ ಕಾರ್ಯಕರ್ತರು ಗುರುವಾರ ವಿಜಯೋತ್ಸವ ಆಚರಿಸಿದರು.

ಇದೇ ವೇಳೆ ಶಾಸಕ ಎಸ್.ವಿ.ರಾಮಚಂದ್ರ ಮಾತನಾಡಿ, ಬುಡಕಟ್ಟು ಸಮುದಾಯ ಮಹಿಳೆಯನ್ನು ಗುರುತಿಸಿ ಈ ದೇಶದ ಮೊದಲ ಪ್ರಜೆಯನ್ನಾಗಿ ಬಿಜೆಪಿ ನೇತೃತ್ವದ ಎನ್‍ಡಿಕೆ ಮಿತ್ರಪಕ್ಷಗಳ ಮುಖಂಡರು ಆಯ್ಕೆ ಮಾಡಿ ಕಳುಹಿಸಿದ್ದು ತಳ ಸಮುದಾಯದ ಸಬಲೀಕರಣಕ್ಕೆ ಇದು ಮುನ್ನುಡಿಯಾಗಿದೆ.

ಎಲ್ಲಾ ಸಮುದಾಯಗಳಿಗೂ ಬಿಜೆಪಿಯಲ್ಲಿ ಸ್ಥಾನವಿದೆ ಎಂಬುದಕ್ಕೆ ಇದು ನಿದರ್ಶನವಾಗಿದೆ. ಈ ಹಿಂದೆ ಡಾ.ಅಬ್ದುಲ್ ಕಲಾಂ ಅವರನ್ನು ಎನ್‍ಡಿಎ ಪಕ್ಷಗಳು ರಾಷ್ಟ್ರಪತಿಯನ್ನಾಗಿ ಆಯ್ಕೆಮಾಡಿ ಅಲ್ಪಸಂಖ್ಯಾತರಿಗೂ ಅವಕಾಶ ಕಲ್ಪಿಸಿಕೊಡಲಾಗಿತ್ತು. ಇದೇ ಬಿಜೆಪಿ ಪಕ್ಷದ ಬದ್ಧತೆ ಎಂದು ಸಂತಸ ವ್ಯಕ್ತಪಡಿಸಿದರು.
ವಿಜಯೋತ್ಸವದಲ್ಲಿ ನೂರಾರು ಬಿಜೆಪಿ ಕಾರ್ಯಕರ್ತರು ಭಾಗಿಯಾಗಿ ಪಟಾಕಿ ಸಿಡಿಸಿ, ಸಿಹಿ ತಿನಿಸಿ ಸಂಭ್ರಮಿಸಿದರು.

ಈ ವೇಳೆ ಬಿಜೆಪಿ ಮಂಡಲ್ ಅಧ್ಯಕ್ಷ ಎಚ್.ಸಿ.ಮಹೇಶ್, ಬಿಜೆಪಿ ಜಿಲ್ಲಾ ಎಸ್‍ಟಿ ಮೋರ್ಚಾದ ಕಾರ್ಯದರ್ಶಿ ಬಿದರಕೆರೆ ರವಿ, ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸೊಕ್ಕೆ ನಾಗರಾಜ್, ಬಿಜೆಪಿ ಮುಖಂಡರಾದ ಎಸ್.ಕೆ.ಮಂಜುನಾಥ್, ಸಿ.ವಿ. ನಾಗಪ್ಪ, ಶಿವಕುಮಾರ್ ಸ್ವಾಮಿ, ಪಪಂ ಅಧ್ಯಕ್ಷ ರೇವಣಸಿದ್ದಪ್ಪ ಪಪಂ ಸದಸ್ಯರು ಸೇರಿದಂತೆ ನೂರಾರು ಕಾರ್ಯಕರ್ತರು ವಿಜಯೋತ್ಸವ ಆಚರಿಸಿ ಜಯಕಾರ ಹಾಕಿದರು.

Share this Article
Leave a comment

Leave a Reply

Your email address will not be published. Required fields are marked *

error: Content is protected !!