ಸುದ್ದಿವಿಜಯ, ಜಗಳೂರು: ಪಟ್ಟಣದ ಬಿಲಾಲ್ ಮಸೀದಿ ಆವರಣದಲ್ಲಿ ಮುಸ್ಲಿಂ ಸಮುದಾಯದ ಮುಖಂಡರು ಸಸಿ ನೆಟ್ಟು ನಂತರ ಸಾರ್ವಜನಿಕ ಆಸ್ಪತ್ರೆಯಲ್ಲಿ ರೋಗಿಗಳಿಗೆ ಹಣ್ಣು, ಹಂಪಲು ವಿತರಿಸಿ ವಿಶಿಷ್ಠವಾಗಿ ಗುರುವಾರ ಈದ್ ಮಿಲಾದ್ ಆಚರಿಸಿದರು.
ಇದೇ ವೇಳೆ ಮುಖಂಡ ಬಂಗಲೆ ಪರ್ವೀಜ್ ಮಾತನಾಡಿ, ಪ್ರವಾದಿ ಮುಹಮ್ಮದ್ ಅವರ ಜನ್ಮದಿನದ ಅಂಗವಾಗಿ ಈ ಸೇವಾ ಕಾರ್ಯಕ್ರಮ ಹಮ್ಮಿಕೊಂಡಿದ್ದು ಪರಿಸರ ಸಂರಕ್ಷಣೆಗೆ ಸಸಿ ನೆಡುವ ಮೂಲಕ ಪರಿಸರ ಸಂರಕ್ಷಿಸ ಬೇಕು ಇಂದಿನ ಯುವಕರು ಸೇವಾ ಮನೊಭಾವನೆಯನ್ನು ಹೊಂದಬೇಕು ಎಂದು ಕರೆ ನೀಡಿದರು.ಜಗಳೂರು ಪಟ್ಟಣದ ಬಿಲಾಲ್ ಮಸೀದಿ ಆವರಣದಲ್ಲಿ ಮುಸ್ಲಿಂ ಮುಖಂಡರು ಈದ್‍ಮಿಲಾದ್ ಅಂಗವಾಗಿ ಗಿಡನೆಟ್ಟು ಹಬ್ಬ ಆಚರಿಸಿದರು.
ಈ ವೇಳೆ ಆಸ್ಪತ್ರೆ ಆಡಳಿತ ವೈದ್ಯಧಿಕಾರಿ ಡಾ. ಷಣ್ಮುಖಪ್ಪ ಬಿಲಾಲ್ ಮಸೀದಿ ಅಧ್ಯಕ್ಷ ಇಮಾಂ ಅಲಿ, ಕಾರ್ಯದರ್ಶಿ ಶಂಶುದ್ಧಿನ್, ಮೌಲಾನಾ ಖಾಸೀಂ, ಮೌಲಾನಾ ಅಹಮದ್, ಮುಖಂಡರಾದ ಮುನ್ನ, ಖಮರ್ ಉಲ್ಲಾ, ಎಂ.ಡಿ. ಅಬ್ದುಲ್ ರಖೀಬ್, ಮೊಹರಮ್ ಗೌಸ್, ದಾದಪೀರ್, ಅಕ್ಬರ್, ಶರೀಫ್, ಅಂಜುಮ್, ಶಾರೂಕ್, ಶಗಿರ್, ರಹಮತ್,ಇಮ್ರಾನ್, ನವಾಜ್ ಸೇರಿದಂತೆ ಮತ್ತಿತರರಿದ್ದರು.