ಮನೆ ಮನೆಯಲ್ಲಿ ‘ತೆಂಗಿನ ತೋಟದ’ ಕೀರ್ತಿ, ಸದ್ದಿಲ್ಲದೇ ಮತಬುಟ್ಟಿಗೆ ‘ಕೈ’ ಹಾಕಿದ ಜೋಡೆತ್ತುಗಳು!

Suddivijaya
Suddivijaya April 26, 2023
Updated 2023/04/26 at 11:24 PM

suddivijaya/kannada news/27/04/2023

ಸುದ್ದಿವಿಜಯ, ಜಗಳೂರು: ಸಧ್ಯ ಜಗಳೂರು ಕ್ಷೇತ್ರದಲ್ಲಿ ಚುನಾವಣಾ ಬಿಸಿ, ಬಿಸಿಲಿನಂತೆ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. ಅಬ್ಬರದ ಪ್ರಚಾರವಿಲ್ಲದೇ ಗ್ರಾಮೀಣ ಜನರ ಕಟ್ಟಕಡೆಯ ವ್ಯಕ್ತಿಯ ಮನಮುಟ್ಟಲು ಮುಂಚೂಣೆಯಲ್ಲಿರುವ ಕಾಂಗ್ರೆಸ್ ಮತ್ತು ಪಕ್ಷೇತರ ಅಭ್ಯರ್ಥಿಗಳು ಸದ್ದು ಗದ್ದಲವಿಲ್ಲದೇ ಮತಬೇಟೆಯಾಡುತ್ತಿದ್ದಾರೆ ಎಂಬುದು ಮತದಾರರ ಅಭಿಪ್ರಾಯವಾಗಿದೆ.

ಆಡಳಿತ ಪಕ್ಷವಾದ ಬಿಜೆಪಿಯ 40 ಪರ್ಸೆಂಟ್ ಭ್ರಷ್ಟಾಚಾರವನ್ನೇ ಮುಂದಿಟ್ಟುಕೊಂಡು ಕ್ಷೇತ್ರದಲ್ಲಿ ಮತದಾರರ ಮನ ಮುಟ್ಟುವಂತೆ ಪಕ್ಷೇತರ ಅಭ್ಯರ್ಥಿ ಎಚ್.ಪಿ.ರಾಜೇಶ್ ಮತ್ತು ಕೈ ಅಭ್ಯರ್ಥಿ ಚಿಕ್ಕಮ್ಮನಹಟ್ಟಿ ದೇವೇಂದ್ರಪ್ಪ, ಕೆಪಿ ಪಾಲಯ್ಯ ಅವರು ಜೋಡೆತ್ತುಗಳಾಗಿ ಪ್ರಚಾರದಲ್ಲಿ ತೊಡಗಿದ್ದಾರೆ. ಗ್ರಾಮೀಣ ಜನರಿಗೆ ಸರಕಾರದ ಲೋಪಗಳನ್ನು ಬಿಚ್ಚಿಡುತ್ತಾ ಮತದಾರರನ್ನು ಆಕರ್ಷಿಸುತ್ತಿದ್ದಾರೆ ಎಂಬುದು ಕಾಂಗ್ರೆಸ್ ಮತ್ತು ಪಕ್ಷೇತರ ಅಭ್ಯರ್ಥಿಗಳ ಕಾರ್ಯಕರ್ತರ ಮಾತಾಗಿದೆ.

ಗ್ರಾಮ ಪಂಚಾಯಿತಿಗಳನ್ನೇ ಕೇಂದ್ರೀಕರಿಸಿಕೊಂಡು ಸುತ್ತಮುತ್ತಲ ಹಳ್ಳಗಳನ್ನು ಸೈನಿಕರಂತೆ ಮುತ್ತಿಗೆ ಹಾಕಿರುವ ಕಾರ್ಯಕರ್ತರು ಮತ ಪ್ರಚಾರದಲ್ಲಿ ತೊಡಗಿಕೊಂಡಿದ್ದಾರೆ.
ಕ್ಷೇತ್ರದ 22 ಗ್ರಾಪಂಗಳು ಸೇರಿದಂತೆ ಅರಸಿಕೆರೆ ಹೋಬಳಿಯ 7 ಒಟ್ಟು 29 ಗ್ರಾಮ ಪಂಚಾಯಿತಿಗಳನ್ನು ಸುತ್ತುವರಿದು ಮತಪ್ರಚಾರದಲ್ಲಿ ಇಬ್ಬರು ಅಭ್ಯರ್ಥಿಗಳು ಬ್ಯುಸಿಯಾಗಿದ್ದಾರೆ.

ಕಾಂಗ್ರೆಸ್ ಅಭ್ಯರ್ಥಿ ಚಿಕ್ಕಮ್ಮನಹಟ್ಟಿ ದೇವೇಂದ್ರಪ್ಪ ಅವರು  ಹಾಲೇಕಲ್ಲು ಗ್ರಾಮ ಪಂಚಾಯಿತಿ, ತೌಡೂರು ಗ್ರಾಪಂ, ಅರಸಿಕೆರೆ ಗ್ರಾಮಪಂ ಒಳಪಡುವ ಯರಬಳ್ಳಿ, ಯರಬಳ್ಳಿ ತಾಂಡ, ಜಿದ್ದಿನಕಟ್ಟೆ, ಬಾಲೆನಹಳ್ಳಿ, ಅರಸಪುರ, ಕ್ಯಾರಕಟ್ಟೆ, ಜಿದ್ದಿನಕಟ್ಟೆ, ಕ್ಯಾರಕಟ್ಟೆ ಸೇರಿದಂತೆ ಅನೇಕ ಗ್ರಾಮಗಳಲ್ಲಿ ಪ್ರಚಾರ ಮಾಡಿದರು.

ಇತ್ತ ಪಕ್ಷೇತರ ಅಭ್ಯರ್ಥಿ ಎಚ್.ಪಿ.ರಾಜೇಶ್ ಅವರು ತಮಗಾದ ಅನ್ಯಾಯವನ್ನು ಜನರ ಮುಂದಿಟ್ಟು ಮತ ಭಿಕ್ಷೆ ಕೇಳಿದರು. ನಾನು ಈ ಕ್ಷೇತ್ರದ ಶಾಸಕನಾಗಿದ್ದಾಗ ಮಾಡಿದ ಅಭಿವೃದ್ಧಿ ಕಾರ್ಯಗಳನ್ನು ಜನರು ಮರೆತಿಲ್ಲ ಎನ್ನುತ್ತಲೇ ಮತಯಾಚನೆ ಮಾಡಿದರು. ತಾಯಿಟೋಣಿ, ಕ್ಯಾಸೇನಹಳ್ಳಿ, ಕಾನನಕಟ್ಟೆ ಸೇರಿದಂತೆ ಮತ ಪ್ರಚಾರದಲ್ಲಿ ತೊಡಗಿ ಮತಯಾಚನೆ ಮಾಡಿದರು.

ಒಟ್ಟಿನಲ್ಲಿ ಸದ್ದಿಲ್ಲದೇ ಮತ ಬೇಟೆ ಮಾಡುತ್ತಿರುವ ಕಾಂಗ್ರೆಸ್ ಮತ್ತು ಪಕ್ಷೇತರ ಅಭ್ಯರ್ಥಿಗಳ ಹವಾ ಕ್ಷೇತ್ರದಲ್ಲಿ ಜೋರಾಗಿದ್ದು ಜನರನ್ನು ಆಕರ್ಷಿಸಲು ಶಾಸಕ ಎಸ್.ವಿ.ರಾಮಚಂದ್ರ ವಿರುದ್ಧ ವಾಗ್ದಾಳಿ ನಡೆಸಿ, ಕಾಂಗ್ರೆಸ್ ಸರಕಾರ ಇದ್ದಾಗ ಮಾಡಿದ ಅಭಿವೃದ್ಧಿ ಕಾರ್ಯಗಳ ಆಧಾರದ ಮೇಲೆ ಮತಯಾಚನೆ ಮಾಡುತ್ತಿದ್ದಾರೆ.

Share this Article
Leave a comment

Leave a Reply

Your email address will not be published. Required fields are marked *

error: Content is protected !!