ಜಗಳೂರು:ಕಾಂಗ್ರೆಸ್ ಅಭ್ಯರ್ಥಿ ಬಿ.ದೇವೇಂದ್ರಪ್ಪಗೆ ಸಾರಥಿಯಾದ ಕೆ.ಪಿ.ಪಾಲಯ್ಯ!

Suddivijaya
Suddivijaya April 25, 2023
Updated 2023/04/25 at 2:27 PM

ಸುದ್ದಿವಿಜಯ ವಿಶೇಷ,ಜಗಳೂರು: ಮಹಾಭಾರತದ ಯುದ್ಧ 18 ದಿನಗಳ ಕಾಲ ಕಲಿಯುಗ ಆರಂಭವಾಗುವ ಆರು ತಿಂಗಳು ಮುನ್ನವೇ ನಡೆಯಿತು ಎಂದು ಮಹಾಭಾರತ ಬಲ್ಲ ಪಂಡಿತರು ಹೇಳುತ್ತಾರೆ.

ಅರ್ಜುನನು ಮಹಾಭಾರತದ ಯುದ್ಧದಲ್ಲಿ ಹೋರಾಡುತ್ತಿದ್ದ. ರಥ ಶ್ರೀ ಕೃಷ್ಣ, ಹನುಮಂತ ಮತ್ತು ಶೇಷನಾಗ ಕೂಡ ಅದರಲ್ಲಿದ್ದರು.

ಶ್ರೀ ಕೃಷ್ಣನ ಆಜ್ಞೆಯ ಮೇರೆಗೆ, ಅರ್ಜುನನು ಹನುಮಂತನನ್ನು ಯುದ್ಧಭೂಮಿಗೆ ಆಹ್ವಾನಿಸಿದನು ಮತ್ತು ರಥದ ಧ್ವಜದ ಮೇಲೆ ಕುಳಿತುಕೊಳ್ಳುವಂತೆ ಒತ್ತಾಯಿಸಿದನು.

ಕೃಷ್ಣನ ಆಜ್ಞೆಯ ಮೇರೆಗೆ ಶೇಷನಾಗನು ಅರ್ಜುನನ ರಥದ ಚಕ್ರವನ್ನು ಹಿಡಿದನು.

ಇದರಿಂದ ಶಕ್ತಿಯುತವಾದ ಆಯುಧಗಳನ್ನು ಸಹ ಸಾಗಿಸಬಹುದಾದ ಸಾಮರ್ಥ್ಯವನ್ನು ರಥವು ಪಡೆದುಕೊಂಡಿತು. ಅರ್ಜುನನು ಧರ್ಮಕ್ಕಾಗಿ ಹೋರಾಡುತ್ತಾನೆ.

ಎನ್ನುವ ಕಾರಣಕ್ಕೆ ಶ್ರೀಕೃಷ್ಣನು ರಥದಲ್ಲಿ ಈ ಎಲ್ಲ ವ್ಯವಸ್ಥೆ ಮಾಡುತ್ತಾನೆ. ಅರ್ಜುನನ್ನು ಗೆಲ್ಲಿಸುತ್ತಾನೆ. ಇದು ಮಹಾಭಾರತದ ಯುದ್ಧ ಪ್ರಸಂಗ

ಅದು ಮಹಾಭಾರತ ಯುದ್ಧ. ಈಗ ಕೇವಲ 15 ದಿನಗಳು ಮಾತ್ರ ವಿಧಾನಸಭಾ ಚುನಾವಣಾ ಯುದ್ಧಕ್ಕೆ ಸಮಯವಿದೆ.

ಕಣದಲ್ಲಿ ಬಿಜೆಪಿ ಅಭ್ಯರ್ಥಿ ಎಸ್.ವಿ.ರಾಮಚಂದ್ರ, ಪಕ್ಷೇತರ ಅಭ್ಯರ್ಥಿ ಎಚ್.ಪಿ.ರಾಜೇಶ್ ವಿರುದ್ಧ ಕಾಂಗ್ರೆಸ್ ಅಭ್ಯರ್ಥಿ ಚಿಕ್ಕಮ್ಮನಹಟ್ಟಿ ದೇವೇಂದ್ರಪ್ಪ ಕಣಕ್ಕಿಳಿದಿದ್ದಾರೆ.

ಆದರೆ ಅನುಭವಿ ರಾಜಕಾರಣಿ ಕಾಂಗ್ರೆಸ್ ಪಕ್ಷ ನಿಷ್ಠ ಕೆ.ಪಿ.ಪಾಲಯ್ಯ ಕೃಷ್ಣನಂತೆ ಸಾರಥಿಯಾಗಿ ದೇವೇಂದ್ರಪ್ಪ ಅವರಿಗೆ ಸಾಥ್ ನೀಡುತ್ತಿದ್ದಾರೆ.

ಚುನಾವಣಾ ಪ್ರಚಾರದಲ್ಲಿ ಅನುಭವಿಯಾಗಿರುವ ಪಾಲಯ್ಯ ಅವರಿಗೆ ಜಿಲ್ಲಾಪಂಚಾಯಿತಿ ಚುನಾವಣೆ, ವಿಧಾನಸಭೆ ಚುನಾವಣೆಗಳನ್ನು ಎದುರಿಸಿದ ಅನುಭವಿ.

ಜೊತೆಗೆ ಕಾಂಗ್ರೆಸ್‍ನಲ್ಲಿ ಸುಧೀರ್ಘ 25 ವರ್ಷಗಳ ಕಾಲ ಅನುಭವ ಮತ್ತು ವರ್ಚಸ್ಸಿನ ನಾಯಕ. ಎಲ್ಲ ಸಮುದಾಯಗಳ ವಿಶ್ವಾಸಕ್ಕೆ ತೆಗೆದುಕೊಳ್ಳುವ ಸಾಮರ್ಥ್ಯ ಇರುವ ಪಾಲಯ್ಯ ಅವರಿಗೆ ಕಾಂಗ್ರೆಸ್ ಪಕ್ಷದ ಮುಖಂಡರ, ವರಿಷ್ಠರ ಸಂಪೂರ್ಣ ಬೆಂಬಲವಿದೆ.

ದಶದಿಕ್ಕುಗಳಲ್ಲಿ ಮತಗಳ ಕ್ರೂಢೀಕರಣದ ಬಗ್ಗೆ ಸಾಕಷ್ಟು ಪಳಗಿರುವ ಅವರಿಗೆ ಚುನಾವಣೆ ಹೊಸದಲ್ಲ.

ಪ್ರತಿ ಚುನಾವಣೆಗಳಲ್ಲಿ ಸಾಕಷ್ಟು ಅನುಭವ ಪಡೆಯುತ್ತಲ್ಲೇ ರಾಜಕೀಯ ಪಟ್ಟುಗಳನ್ನು ಹಾಕುತ್ತಾ ಎದುರಾಳಿಗಳನ್ನು ಮಣಿಸುವ ಸಾಮರ್ಥ್ಯ ಅವರಲ್ಲಿದೆ ಎಂಬುದು ರಾಜಕೀಯ ವಿಶ್ಲೇಷಕರ ಅಭಿಪ್ರಾಯ.

ಹಾಗಾಗಿ 2023ರ ಚುನಾವಣೆಯಲ್ಲಿ ಕಾಂಗ್ರೆಸ್ ಎಂಬ ರಥದಲ್ಲಿ ಕುಳಿತಿರುವ ದೇವೇಂದ್ರಪ್ಪ ಅವರಿಗೆ ಕೆ.ಪಿ.ಪಾಲಯ್ಯ ಸಾರಥಿಯಾಗಿ ಚುನಾವಣಾ ರಣಕಹಳೆ ಮೊಳಗಿಸಲು ಸಿದ್ದರಾಗಿ ಮುಂದುವರೆಯುತ್ತಿದ್ದಾರೆ.

ಪಕ್ಷದಲ್ಲಿರುವ ಅನೇಕ ಪಕ್ಷ ನಿಷ್ಠರಾದ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಅಸಗೋಡು ಜಯಸಿಂಹ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಷಂಷೀರ್ ಅಹ್ಮದ್, ಎಸ್.ಮಂಜುನಾಥ್, ಕೆಪಿಸಿಸಿ ತಾಲೂಕು ಉಸ್ತುವಾರಿ ಕಲ್ಲೇಶ್‍ರಾಜ್ ಪಟೇಲ್,

ಮಾಜಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಸೇರಿದಂತೆ ಎಲ್ಲರೂ ಯುದ್ಧದಲ್ಲಿ ಗೆಲ್ಲಲು ದೇವೇಂದ್ರಪ್ಪ ಮತ್ತು ಪಾಲಯ್ಯ ಅವರಿಗೆ ಬಂಬಲವಾಗಿ ನಿಂತಿದ್ದಾರೆ. ಹೀಗಾಗಿ ಮತ ಬೇಟೆಯಲ್ಲಿ ನಿಪುಣರಾಗಿರುವ ಪಾಲಯ್ಯ ಅವರನ್ನು ಕ್ಷೇತ್ರದ ಚುನಾವಣಾ ಸಾರಥಿ ಎಂದೇ ಬಿಂಬಿತರಾಗಿದ್ದಾರೆ.

Share this Article
Leave a comment

Leave a Reply

Your email address will not be published. Required fields are marked *

error: Content is protected !!