ಏ.13 ರಿಂದ ನಾಪ ಪತ್ರ ಸಲ್ಲಿಕೆಗೆ ಚುನಾವಣಾ ಆಯೋಗ ಸೂಚನೆ

Suddivijaya
Suddivijaya April 10, 2023
Updated 2023/04/10 at 1:45 PM

ಸುದ್ದಿವಿಜಯ, ಜಗಳೂರು: ಚುನಾವಣೆಗೆ ಸ್ಪರ್ಥಿಸಲಿರುವ ಅಭ್ಯರ್ಥಿಗಳಿಗೆ ಏ.13ರಿಂದ ನಾಮಪತ್ರ ಸಲ್ಲಿಕೆಗೆ ಅವಕಾಶ ನೀಡಲಾಗಿದೆ ಎಂದು ಚುನಾವಣಾಧಿಕಾರಿ ಎಸ್.ರವಿ ಹೇಳಿದರು.

ತಾಲೂಕು ಕಚೇರಿಯಲ್ಲಿ ವಿವಿಧ ಪಕ್ಷಗಳ ಮುಖಂಡರ ಜೊತೆ ಸೋಮವಾರ ಸಭೆ ನಡೆಸಿದ ನಂತರ ಮಾಹಿತಿ ನೀಡಿದರು. ಏ.13 ರಿಂದ ಏ.20 ರವರೆಗೆ ಸಾರ್ವತ್ರಿಕ ರಜೆಗಳನ್ನು ಹೊರತುಪಿಡಿಸಿ ಬೆಳಿಗ್ಗೆ 11 ಗಂಟೆಯಿಂದ ಮಧ್ಯಾಹ್ನ 3 ಗಂಟೆಯವರೆಗೆ ನಾಮಪತ್ರ ಸ್ವೀಕರಿಸಲಾಗುವುದು.

ನಾಮಪತ್ರ ಸಲ್ಲಿಸಲು ಅಭ್ಯರ್ಥಿಗಳು ನಮೂನೆ 2ಬಿ, ಚುನಾವಣಾ ಆಯೋಗ ನಿಗದಿಪಡಿಸಿರುವ ನಮೂನೆ 26 ರಲ್ಲಿ ಪ್ರಮಾಣ ಪತ್ರ ರಾಜಕೀಯ ಪಕ್ಷಗಳ ವತಿಯಿಂದ ಸ್ಪರ್ಧಿಸುವ ಅಭ್ಯರ್ಥಿಗಳು ನಮೂನೆ ಎ ಮತ್ತು ನಮೂನೆ ಬಿ ಮೂಲ ಪ್ರತಿ ಮತ್ತು ತಹಶೀಲ್ದಾರ್ ಅವರಿಂದ ಪಡೆದ ಜಾತಿ ಪ್ರಮಾಣ ಪತ್ರ ಸಲ್ಲಿಸಬೇಕು.

ಪಟ್ಟಣದ ತಹಶೀಲ್ದಾರ್ ಕಚೇರಿಯಲ್ಲಿ ಚುನಾವಣಾಧಿಕಾರಿ ಎಸ್.ರವಿ ನೇತೃತ್ವದಲ್ಲಿ ವಿವಿಧ ರಾಜಕೀಯ ಪಕ್ಷಗಳ ಮುಖಂಡರಿಗೆ ನೀತಿ ಸಂಹಿತೆ ನಿಯಮಗಳ ಬಗ್ಗೆ ತಿಳಿಸಲಾಯಿತು. ತಹಶೀಲ್ದಾರ್ ಸೇರಿದಂತೆ ಅನೇಕರು ಇದ್ದರು.
ಪಟ್ಟಣದ ತಹಶೀಲ್ದಾರ್ ಕಚೇರಿಯಲ್ಲಿ ಚುನಾವಣಾಧಿಕಾರಿ ಎಸ್.ರವಿ ನೇತೃತ್ವದಲ್ಲಿ ವಿವಿಧ ರಾಜಕೀಯ ಪಕ್ಷಗಳ ಮುಖಂಡರಿಗೆ ನೀತಿ ಸಂಹಿತೆ ನಿಯಮಗಳ ಬಗ್ಗೆ ತಿಳಿಸಲಾಯಿತು. ತಹಶೀಲ್ದಾರ್ ಸೇರಿದಂತೆ ಅನೇಕರು ಇದ್ದರು.

10 ಜನ ಸೂಚಕರು ನಾಮಪತ್ರ ಸಲ್ಲಿಕೆಗೆ ಸಹಿ ಮಾಡುವ ಮೂಲಕ ನಾಮ ನಿರ್ದೇಶನ ಮಾಡಬೇಕು.

ನಾಮಪತ್ರ ಸಲ್ಲಿಸುವಾಗ ಅಭ್ಯರ್ಥಿ ಒಳಗೊಂಡಂತೆ 5 ಜನರಿಗೆ ಮಾತ್ರ ಚುನಾವಣಾಧಿಕಾರಿಗಳ ಕೊಠಡಿಗೆ ಪ್ರವೇಶ ಕಲ್ಪಿಸಲಾಗಿದೆ.

ಚುನಾವಣಾ ವೆಚ್ಚಗಳ ಲೆಕ್ಕ ಪತ್ರ ನಿರ್ವಹಣೆ ಮಾಡುವುದು ಕಡ್ಡಾಯವಾಗಿರುತ್ತದೆ. ಪ್ರತ್ಯಕೇ ಬ್ಯಾಂಕ್ ಖಾತೆ ವಿವರಗಳನ್ನು ನೀಡಲು ತಿಳಿಸಲಾಗಿದೆ.

ನಾಮಪತ್ರ ಸಲ್ಲಿಸುವ ಅವಧಿಯಲ್ಲಿ ಚುನಾವಣಾಧಿಕಾರಿಗಳ ಕಚೇರಿಯ 100 ಮೀ. ಸತ್ತ ಅಭ್ಯರ್ಥಿ ಅಥವಾ ಅವರ ಸಂಗಡಿಗರಿಗೆ ಸೇರಿದ ಕೇವಲ ಮೂರು ವಾಹನಗಳಿಗೆ ಮಾತ್ರ ಪ್ರವೇಶ ಕಲ್ಪಿಸಲಾಗಿದೆ.

ನಾಮಪತ್ರ ಸಲ್ಲಿಸಲು ಬರುವ ಅಭ್ಯರ್ಥಿ ಮೆರವಣಿಗೆ ನಡೆಸುವುದಾದಲ್ಲಿ ವಾಹನಗಳು ಸೇರಿದಂತೆ ಕಡ್ಡಾಯವಾಗಿ ಚುನಾವಣಾಧಿಕಾರಿಗಳಿಂದ ಅನುಮತಿಯನ್ನು ಪಡೆಯಬೇಕು. ಪ್ರಚಾರ ಸಭೆ, ರ್ಯಾಲಿ ಮೆರವಣಿಗೆ, ಧ್ವನಿವರ್ಧಕ ಬಳಕೆ, ವಾಹನಗಳ ಪರವಾನಿಗೆ, ಮನೆ ಮನೆ ಪ್ರಚಾರ, ತಾತ್ಕಾಲಿಕ ಪಕ್ಷದ ಕಚೇರಿ ಇತ್ಯಾದಿ ಅನುಮತಿಗೆ ರಾಜಕೀಯ ಪಕ್ಷಗಳು ಆಯೋಜಿಸುವ ಕಾರ್ಯಕ್ರಮದ 48 ಗಂಟೆ ಮುಂಚೆ ಅನುಮತಿಯನ್ನು ಅಂತರ್‍ಜಾಲ ವಿಳಾಸದಲ್ಲಿ ಅರ್ಜಿಹಾಕಿ ಪಡೆದುಕೊಳ್ಳಬೇಕು.

ವಾಹನಗಳ ಪರವಾನಿಗೆ ಹಾಗೂ ರಾಜಕೀಯ ಸಭೆ ಸಮಾರಂಭಗಳಿಗೆ ಅನುಮತಿಯನ್ನು 24 ಗಂಟೆಯೊಳಗೆ ನೀಡಲು ವಿವಿಧ ಇಲಾಖೆಗಳ ನಿರಾಕ್ಷೇಪಣಾ ಪತ್ರ ಪಡೆಯಲು ಅನುವಾಗುವಂತೆ ವ್ಯವಸ್ಥೆ ಮಾಡಲಾಗಿದೆ. ಕಡ್ಡಾಯವಾಗಿ ಅಭ್ಯರ್ಥಿಗಳು ನೀತಿ ಸಂಹಿತೆಯನ್ನು ಪಾಲಿಸಬೇಕು ಎಂದರು.

ಕ್ಷೇತ್ರದಲ್ಲಿ 5 ಚಕ್‍ಪೋಸ್ಟ್‍ಗಳನ್ನು ತೆರೆಯಲಾಗಿದೆ. ಮೂರು ತಂಡಗಳನ್ನು ರಚಿಸಿ ವಿಡಿಯೋ ಮಾಡಲು ಅನುಮತಿ ನೀಡಲಾಗಿದೆ. ಮೂರು ಫ್ಲೈಯಿಂಗ್ ಸ್ಕ್ವಾಡ್‍ಗಳನ್ನು ರಚಿಸಲಾಗಿದೆ. ಹಬ್ಬ ಹರಿದಿನಗಳಲ್ಲಿ ನಾಟ, ಬಯಲಾಟ ಮತ್ತಿತರ ಕಾರ್ಯಕ್ರಮಗಳನ್ನು ಅನುಮತಿ ಪಡೆದು ನಡೆಸಲು ಅವಕಾಶ ನೀಡಲಾಗಿದೆ ಎಂದರು.

ಸಭೆಯಲ್ಲಿ ತಹಶೀಲ್ದಾರ್ ಜಿ.ಸಂತೋಷ್‍ಕುಮಾರ್ ಸೇರಿದಂತೆ ವಿವಿಧ ರಾಜಕೀಯ ಪಕ್ಷಗಳ ಮುಖಂಡರು ಸಭೆಯಲ್ಲಿ ಹಾಜರಿದ್ದರು.

Share this Article
Leave a comment

Leave a Reply

Your email address will not be published. Required fields are marked *

error: Content is protected !!