ಜಗಳೂರು:ಇವಿಎಂ ಜೊತೆ ಚುನಾವಣಾ ಕರ್ತವ್ಯಕ್ಕೆ ತೆರಳಿದ ಸಿಬ್ಬಂದಿ

Suddivijaya
Suddivijaya May 9, 2023
Updated 2023/05/09 at 1:25 PM

ಸುದ್ದಿವಿಜಯ, ಜಗಳೂರು: ಮೇ.10ರಂದು(ನಾಳೆ) ನಡೆಯಲಿರುವ ಮತದಾನ ಪ್ರಕ್ರಿಯೆಗೆ ಚುನಾವಣಾ ಆಯೋಗ ಸಕಲ ಸಿದ್ಧತೆ ಮಾಡಿಕೊಂಡಿದ್ದು ಪಟ್ಟಣದ ಸರಕಾರಿ ಪದವಿಪೂರ್ವ ಕಾಲೇಜು ಆವರಣದಲ್ಲಿ ಮಂಗಳವಾರ ಇವಿಎಂ ಮತ ಯಂತ್ರ ಮತ್ತು ಚುನಾವಣೆ ಪರಿಕರಗಳೊಂದಿಗೆ ತಮಗೆ ನಿಯೋಜನೆ ಮಾಡಿರುವ ಸ್ಥಳಗಳಿಗೆ ಸಿಬ್ಬಂದಿ ತೆರಳುವ ದೃಶ್ಯ ಕಂಡು ಬಂತು.

 ಜಗಳೂರು ಪಟ್ಟಣದ ಸರಕಾರಿ ಪದವಿಪೂರ್ವ ಕಾಲೇಜಿನಿಂದ ಇವಿಎಂ ಯಂತ್ರದೊಂದಿಗೆ ಸಿಬ್ಬಂದಿ ತೆರಳುತ್ತಿರುವ ಚಿತ್ರ
 ಜಗಳೂರು ಪಟ್ಟಣದ ಸರಕಾರಿ ಪದವಿಪೂರ್ವ ಕಾಲೇಜಿನಿಂದ ಇವಿಎಂ ಯಂತ್ರದೊಂದಿಗೆ ಸಿಬ್ಬಂದಿ ತೆರಳುತ್ತಿರುವ ಚಿತ್ರ

ಕ್ಷೇತ್ರದ 29 ಗ್ರಾಪಂ 1 ಪಟ್ಟಣ ಪಂಚಾಯಿತಿ ವ್ಯಾಪ್ತಿ 192958 ಮತದಾರರಿದ್ದು, ಒಟ್ಟು 262 ಬೂತ್‍ಗಳಿಗೆ ಸಿಬ್ಬಂದಿಯನ್ನು ನಿಯೋಜನೆ ಮಾಡಲಾಗಿತ್ತು. 563ಪೋಲಿಸ್  ಸಿಬ್ಬಂದಿ 1200 ಮತಗಟ್ಟೆ ಅಧಿಕಾರಿಗಳನ್ನು 1ಡಿವೈಎಸ್, ಪಿಐ4 ಪಿಎಸ್‍ಐ7, ಎಎಸ್48, ಎಚ್‍ಸಿ/ಪಿಸಿ192, ಎಚ್‍ಜಿ94, ಸೇರಿದಂಎ 346 ಜನ ಪೋಲಿಸ್ ಸಿಬ್ಬಂದಿಗಳು, 18 ಆರ್‍ಪಿಎಫ್, 18 ಕೇರಳ ಪೋಲಿಸ್ ಒಳಗೊಂಡಂತೆ 54 ಸಿಬ್ಬಂದಿಗಳನ್ನು ಚುನಾವಣೆ ಕರ್ತವ್ಯಕ್ಕೆ ನಿಯೋಜಿಸಲಾಗಿದೆ.128 ಮತಗಟ್ಟೆಗಳಲ್ಲಿ ವೆಬ್ ಕ್ಯಾಮೆರಾ ಅಳವಡಿಸಲಾಗಿದೆ ಎಂದು ಚುನಾವಣಾಧಿಕಾರಿ ಎಸ್.ರವಿ ತಿಳಿಸಿದ್ದಾರೆ.

ಚುನಾವಣಾ ಸಿಬ್ಬಂದಿಗಳಿಗೆ ಅವ್ಯವಸ್ಥೆ:
ತಾಲೂಕಿನ ಹನುಮಂತಾಪುರ ಗೊಲ್ಲರಹಟ್ಟಿ ಗ್ರಾಮದಲ್ಲಿ ಚುನಾವಣಾ ಸಿಬ್ಬಂದಿಗೆ ಟಾಯ್ಲೆಟ್ ಇಲ್ಲದೇ ನರಕ ಯಾತನೆ ಅನುಭವಿಸುವ ಸ್ಥಿತಿ ನಿರ್ಮಾಣವಾಗಿದೆ. ಕಟ್ಟಿಕೊಂಡ ಟಾಯ್ಲೆಟ್‍ನಲ್ಲಿ ನೀರಿಲ್ಲದೇ ಬಹಿರ್ದೆಸೆಗೆ ಹೋಗುವ ಪರಿಸ್ಥಿತಿ ನಿರ್ಮಾಣವಾಗಿದ್ದು ನಮ್ಮ ಗೋಳು ಕೇಳುವವರಿಲ್ಲ ಎಂದು ಪತ್ರಕರ್ತರಿಗೆ ಗೋಳು ತೋಡಿಕೊಂಡರು. ಉಳಿದಂತೆ ಅನೇಕ ಕಡೆಗಳಲ್ಲಿ ಮೂಲ ಸೌಕರ್ಯಗಳ ಕೊರತೆಯಿಂದ ಸಿಬ್ಬಂದಿ ಪರಿತಪಿಸುವ ಸ್ಥಿತಿ ನಿರ್ಮಾಣವಾಗಿತ್ತು.

 

 

Share this Article
Leave a comment

Leave a Reply

Your email address will not be published. Required fields are marked *

error: Content is protected !!