ಸುದ್ದಿವಿಜಯ, ಜಗಳೂರು: ಮಳೆ ಕೈಕೊಟ್ಟಿದ್ದು ಜಮೀನಿಗೆ ಹಾಕಿದ ಬಂಡವಾಳ ಬಾರದ ಹಿನ್ನೆಲೆ ಸಾಲಗಾರರ ಕಿರುಕುಳಕ್ಕೆ ಬೇಸತ್ತು ತಾಲೂಕಿನ ವೆಂಕಟೇಶಪುರ ತಾಂಡದ ರೈತ ಜೀವನಾಯ್ಕ್ (52) ಅಡಕೆ ತೋಟದಲ್ಲಿ ವಿಷ ಸೇವಿಸಿ ಮೃತಪಟ್ಟಿರುವ ಘಟನೆ ಮಂಗಳವಾರ ನಡೆದಿದೆ.
ಮೃತ ರೈತ ಜೀವನಾಯ್ಕ್ ಅವರಿಗೆ ನಾಲ್ಕು ಎಕರೆ ಜಮೀನು ಇದ್ದು ಅಡಕೆ ತೋಟ ಉಳಿಸಿಕೊಳ್ಳುವ ಸಲುವಾಗಿ ಬೋರ್‍ವೆಲ್ ಕೊರೆಸಲು ಐದು ಲಕ್ಷ ರೂ ಖಾಸಗಿಯಾಗಿ ಮತ್ತು ಬ್ಯಾಂಕ್‍ಗಳಲ್ಲಿ ಸಾಲ ಮಾಡಿದ್ದರು.ಆದರೂ ಕೊಳವೆಬಾವಿಯಲ್ಲಿ ನೀರು ಕಡಿಮೆ ಪ್ರಮಾಣದಲ್ಲಿ ಬರುತ್ತಿತ್ತು. ಪದೇ ಪದೇ ಬೊರ್‍ವೆಲ್ ರಿಪೇರಿಯಿಂದ ಬೇಸತ್ತು ಹೋಗಿದ್ದ ರೈತ, ತೋಟ ಒಣಗುತ್ತಿದ್ದುದ್ದನ್ನು ನೋಡಲಾಗದೆ ಸಾಲ ಕೊಟ್ಟವರ ಕಿರುಕುಳಕ್ಕೆ ಬೇಸತ್ತು ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ಮೃತ ಜೀವನಾಯ್ಕ್ ಪುತ್ರ ಸುಂದರೇಶ್‍ನಾಯ್ಕ್ ಪ್ರಕರಣ ಸಂಬಂಧ ಬಿಳಿಚೋಡು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.