ಸುದ್ದಿವಿಜಯ, ಜಗಳೂರು: ಕಳೆದ ವರ್ಷ ತಾಲೂಕಿನ ಹೊಸಕೆರೆ ಗಾಮದ ಮಾಯಮ್ಮ ಡಾಬಾದಲ್ಲಿ ಗೌರಿಪುರ ಗ್ರಾಮದ ರಾಮಕೃಷ್ಣ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೊಲೆ ಆರೋಪಿ ಧನ್ಯಕುಮಾರ್ ಗೆ ಜಾಮೀನಿಗೆ ಸಹಕಾರ ನೀಡುತ್ತಿದ್ದೀರಿ ಎಂದು ಅನುಮಾನಿಸಿ ಕೊಲೆ ಆದ ರಾಮಕೃಷ್ಣ ಸಹೋದರ ಹಾಲಸ್ವಾಮಿ ಅದೇ ಗ್ರಾಮದ ಧನ್ಯಕುಮಾರ್ ಸಂಬಂಧಿ ಚಂದ್ರಪ್ಪ ಮತ್ತು ಅವರ ಪುತ್ರ ಹೇಮಂತ್ ಅವರಿಗೆ ಚಾಕುವಿನಿಂದ ಇರಿದ ಘಟನೆ ಮಂಗಳವಾರ ಬೆಳಿಗ್ಗೆ ನಡೆದಿದೆ.
ಘಟನೆ ವಿವರ:
ಕಳೆದ ವರ್ಷ ಕ್ಯಾಸೆನಹಳ್ಳಿ ಗ್ರಾಪಂನಲ್ಲಿ ನರೇಗಾ ಕಾಮಗಾರಿಯಲ್ಲಿ ನಡೆದ ಹಗರಣಕ್ಕೆ ಸಂಬಂಧಿಸಿದಂತೆ ಹೊಸಕೆರೆ ಗ್ರಾಮದ ಮಾಯಮ್ಮ ಡಾಬಾದಲ್ಲಿ ರಾಮಕೃಷ್ಣ ಎಂಬ ಯುವಕನ ಕೊಲೆಯಾಗಿತ್ತು.
ಪ್ರಕರಣದ ಆರೋಪಿಗಳಾದ ಪಿಡಿಒ ಎ.ಟಿ.ನಾಗರಾಜ್ ಹಾಗೂ ಅವರ ಸಹೋದರ ಎ.ಟಿ.ಪ್ರಭು ಮತ್ತು ಧನ್ಯಕುಮಾರ್ ಸೇರಿ ಅನೇಕರ ಮೇಲೆ ಕೇಸ್ ದಾಖಲಿಸಲಾಗಿತ್ತು.ಕೊಲೆ ಪ್ರಕರಣ ಆರೋಪ ಹೊತ್ತಿರುವ ಧನ್ಯಕುಮಾರ್ ಗೆ ಜಮೀನು ನೀಡಲು ಸಹಕಾರ ನೀಡುತ್ತಿದ್ದೀರಿ ಎಂದು ಅನುಮಾಸಿ ಕೊಲೆಯಾದ ರಾಮಕೃಷ್ಣ ಸಹೋದರ ಹಾಲಸ್ವಾಮಿ ಡಿ.18ರ ಸೋಮವಾರ ರಾತ್ರಿ ಚಂದ್ರಪ್ಪ ಮತ್ತು ಅವರ ಪುತ್ರ ಹೇಮಂತ್ ಜೊತೆ ಜಗಳ ತೆಗೆದಿದ್ದಾನೆ.
ಅಷ್ಟೇ ಅಲ್ಲ ಮಂಗಳವಾರ ಬೆಳಿಗ್ಗೆ ಚಂದ್ರಪ್ಪ ಅವರ ಮನೆ ಬಳಿ ಬಂದು ಚಾಕುವಿನಿಂದ ತಂದೆ ಮತ್ತು ಮಗನ ಬೆನ್ನು ಮತ್ತು ಎದೆಗೆ ಇರಿದಿದ್ದಾನೆ.ಜಗಳೂರು ತಾಲೂಕಿನ ಗೌರಿಪುರ ಗ್ರಾಮದಲ್ಲಿ ಬಿಗಿ ಪೊಲೀಸ್ ಬಂದೂಬಸ್ತ್ ನಿಯೋಜನೆ
ಆಗ ತಮ್ಮನ್ನು ರಕ್ಷಣೆ ಮಾಡಿಕೊಳ್ಳಲು ಬಡಿಗೆಗಳನ್ನು ಹಿಡಿದು ಬೆನ್ನು ಹತ್ತಿದ ಚಂದ್ರಪ್ಪ ಮತ್ತು ಹೇಮಂತ್, ಅವರಿಂದ ತಪ್ಪಿಸಿಕೊಳ್ಳಲು ಹೋದ ಹಾಲಸ್ವಾಮಿ ನಿಂದಿದ್ದ ಟ್ರ್ಯಾಕ್ಟರ್ ಅಡಿ ನುಗ್ಗುವಾಗ ಕಬ್ಬಿಣ ತಲೆಗೆ ಬಡಿದು ಬಲವಾದ ಪೆಟ್ಟು ಬಿದ್ದಿದ್ದು ದಾವಣಗೆರೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.
ಇತ್ತ ಹಾಲಸ್ವಾಮಿಯಿಂದ ಚಾಕು ಇರಿತಕ್ಕೆ ಒಳಗಾದ ಚಂದ್ರಪ್ಪ ಮತ್ತು ಹೇಮಂತ್‍ಗೆ ಎದೆ ಮತ್ತು ಬೆನ್ನಿಗೆ ಬಲವಾದ ಇರಿತಗಳಾಗಿದ್ದು ದಾವಣಗೆರೆಯ ಎಸ್‍ಎಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಪ್ರಕರಣ ಸಂಬಂಧ ಜಗಳೂರು ಪಟ್ಟಣದ ಪೊಲೀಸ್ ಠಾಣೆಯಲ್ಲಿ ಪರಸ್ಪರ ದೂರು ದಾಖಲಾಗಿವೆ.
ಇನ್‍ಸ್ಪೆಕ್ಟರ್ ಎಂ.ಶ್ರೀನಿವಾಸ್‍ರಾವ್ ಮತ್ತು ಪಿಎಸ್‍ಐ ಎಸ್.ಡಿ.ಸಾಗರ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಪ್ರಕರಣ ಸಂಬಂಧ ಗ್ರಾಮದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದ್ದು, ಗೌರಿಪುರ ಗ್ರಾಮದಲ್ಲಿ ರಿಸರ್ವ್ ಪೊಲೀಸರನ್ನು ನಿಯೋಜನೆ ಮಾಡಲಾಗಿದೆ.