ಸುದ್ದಿವಿಜಯ, ಜಗಳೂರು: ಪ್ರಸ್ತುತ 2023ನೇ ವರ್ಷವನ್ನು ಪ್ರಧಾನಿ ನರೇಂದ್ರ ಮೋದಿ ಅವರ ಕೇಂದ್ರ ಸರಕಾರ ಅಂತರ್ ರಾಷ್ಟ್ರೀಯ ರಾಗಿ ವರ್ಷ ಎಂದು ಘೋಷಣೆ ಮಾಡಲಾಗಿದ್ದು ರಾಗಿ ಬೆಳೆಗೆ ವಿದೇಶಗಳಲ್ಲಿ ಭಾರಿ ಬೇಡಿಕೆ ಸೃಷ್ಟಿಯಾಗಲಿದೆ ಎಂದು ಕೆವಿಕೆ ಬೇಸಾಯ ತಜ್ಞ ಬಿ.ಓ.ಮಲ್ಲಿಕಾರ್ಜುನ ಹೇಳಿದರು.
ತಾಲೂಕಿನ ಹಿರೇಅರಕೆರೆ ಗ್ರಾಮದಲ್ಲಿ ಬುಧವಾರ ಐಸಿಎಆರ್ ತರಳಬಾಳು ಕೃಷಿ ವಿಜ್ಞಾನ ಕೇಂದ್ರ ಹಾಗೂ ಬಿದರಕೆರೆ ಎಫ್‍ಪಿಓ ಸಂಯುಕ್ತ ಆಶ್ರಯದಲ್ಲಿ ರಾಗಿ ಸಮಗ್ರ ಬೆಳೆ ನಿರ್ವಹಣೆ ಕುರಿತು ಪ್ರತ್ಯೇಕ್ಷಿಕೆಯಲ್ಲಿ ಅವರು ಮಾತನಾಡಿದರು.
ಇತ್ತೀಚಿನ ದಿನಗಳಲ್ಲಿ ಹರಳು ರೂಪದ ಯೂರಿಯವನ್ನು ಮೇಲು ಗೊಬ್ಬರವಾಗಿ ರಾಗಿಗೆ ಕೊಡುವ ಬದಲು ನ್ಯಾನೋ ಯೂರಿಯ 500mಟ ಎಕರೆಗೆ ಬಳಸಬೇಕು. 4 mಟ/ ಲೀಟರ್ ನೀರಿನಲ್ಲಿ ಮಿಶ್ರಣ ಮಾಡಿ ಸಿಂಪರಣೆ ಇಳುವರಿ ನೆಚ್ಚಿಸಿಕೊಳ್ಳಬಹುದು ಎಂದರು.

ಕಾಂಡ ಕೊರಕದ ಲಕ್ಷಣಗಳು ಕಂಡು ಬಂದಲ್ಲಿ ಕ್ಲೋರೋಫೈರಿಪಾಸ್ ಎರಡು ಎಂ ಎಲ್ ಪ್ರತಿ ಲೀಟರ್ ನೀರಿನಲ್ಲಿ ಮಿಶ್ರಣ ಮಾಡಿ ಸಿಂಪರಣೆ ಮಾಡಬೇಕು. ಈ ಸಮಯದಲ್ಲಿ ನೀರಿನ ನಿರ್ವಹಣೆ ಕಡೆ ಗಮನ ಹರಿಸಬೇಕೆಂದು ಎಂದು ಅವರು ಅಭಿಪ್ರಾಯ ಪಟ್ಟರು.
ತರಳಬಾಳು ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥರಾದ ಡಾ. ದೇವರಾಜ್ ಅವರ ಮಾರ್ಗದರ್ಶನದಲ್ಲಿ ರೈತರನ್ನು ಆಯ್ಕೆ ಮಾಡಿ 50ಕ್ಕೂ ಹೆಚ್ಚು ರೈತರಿಗೆ ಉಚಿತವಾಗಿ ನ್ಯಾನೋ ಯೂರಿಯಾ ನೀಡುವ ಮೂಲಕ ಅದನ್ನು ಬಳಸುವ ವಿಧಾನದ ಬಗ್ಗೆ ತಿಳಿಸಲಾಯಿತು.
ಬಿದರಿಕೆರೆ ತರಳಬಾಳು ರೈತ ಉತ್ಪಾದಕ ಅಧ್ಯಕ್ಷರಾದ ಮಂಜುನಾಥ, ಹಿರೇ ಅರಕೆರೆ ಗ್ರಾಮದ ಪ್ರಗತಿಪರ ರೈತರು ಭಾಗವಹಿಸಿದ್ದರು.