ಸುದ್ದಿವಿಜಯ, ಜಗಳೂರು: ತಾಲೂಕಿನ 57 ಕೆರೆಗಳಿಗೆ ನೀರು ಹರಿಸುವ ತುಂಗಭದ್ರಾ ಏತ ನೀರಾವರಿ ಯೋಜನೆಯ ಮೊದಲ ಭಾಗವಾಗಿ ಸೋಮವಾರ 11 ಕೆರೆಗಳಿಗೆ ನೀರು ಬಿಡಲಾಗಿದೆ ಎಂದು ಕರ್ನಾಟಕ ನೀರಾವರಿ ನಿಗಮದ ಎಇ ಕೆ.ಎಂ.ಮನೋಜ್ ಮತ್ತು ಎಇಇ ಶ್ರೀಧರ್ ಮಾಹಿತಿ ನೀಡಿದರು.
ಸರಕಾರದ ಮಹಾತ್ವದ ಯೋಜನೆಗಳಲ್ಲಿ ಒಂದಾದ ಹರಿಹರದ ದೀಟೂರಿನ ಜಗಳೂರು ಏತ ನೀರಾವರಿ ಪ್ರಾಜೆಕ್ಟ್ 665 ಕೋಟಿ ರೂ ವೆಚ್ಚದಲ್ಲಿ 2018ರಲ್ಲಿ ಆರಂಭವಾಗಿತ್ತು.
ಕಳೆದ ಐದು ವರ್ಷಗಳಿಂದ ಕೋವಿಡ್ ಮತ್ತು ಬೇರೆ ಬೇರೆ ಕಾರಣದಿಂದ ಎರಡು ವರ್ಷಗಳ ಕಾಲ ಕಾಮಗಾರಿ ವಿಳಂವಾಗಿತ್ತು.
ಕಳೆದ ವರ್ಷ 2022 ರಂದು ಪ್ರಾಯೋಗಿಕವಾಗಿ ತುಪ್ಪದಹಳ್ಳಿ ಕೆರೆಗೆ ನೀರು ಹರಿದು ರೈತರಲ್ಲಿ ಭರವಸೆ ಇಮ್ಮಡಿಕೊಳಿಸಿತ್ತು. ಆದರೆ ಈ ಬಾರಿ ಮಳೆಗಾಲ ವಿಳಂಬವಾಗಿದ್ದರಿಂದ ತುಂಗಭದ್ರಾ ನದಿಯಲ್ಲಿ ನೀರಿನ ಹರಿವು ಇಲ್ಲದ ಕಾರಣ ಕೆರೆಗಳಿಗೆ ನೀರು ಹರಿಯುವುದು ಡೌಟು ಎಂದು ಹೇಳಲಾಗಿತ್ತು.
ಆದರೆ ಕಳೆದ ಒಂದು ವಾರದಿಂದ ತುಂಗಭದ್ರಾ ನದಿ ಪಾತ್ರದ ವ್ಯಾಪ್ತಿಯಲ್ಲಿ ಉತ್ತಮ ಮಳೆಯಾಗುತ್ತಿರುವ ಕಾರಣ ನೀರಿನ ಮಟ್ಟ ಹೆಚ್ಚಾಗಿದ್ದರಿಂದ ಜಗಳೂರು ತಾಲೂಕಿನ 11 ಕೆರೆಗಳಿಗೆ ನೀರು ಹರಿಸಲು ಕರ್ನಾಟಕ ನೀರಾವರಿ ನಿಗಮದ ಅಧಿಕಾರಿಗಳು ಪ್ರಾಯೋಗಿಕವಾಗಿ ಮೂರು ಮೋಟರ್‍ಗಳನ್ನು ಆನ್ ಮಾಡಿದ್ದಾರೆ.
ಯಾವ ಕೆರೆಗಳಿಗೆ ನೀರು:
ತಾಲೂಕಿನ ತುಪ್ಪದಹಳ್ಳಿ, ಅಸಗೋಡು, ಕಾಟೇನಹಳ್ಳಿ, ಮಾದನಹಳ್ಳಿ, ಮರಿಕುಂಟೆ, ಗೋಡೆ, ತಾರೆಹಳ್ಳಿ, ಉರಲ್ಲಕಟ್ಟೆ, ಬಿಳಿಚೋಡು, ಹಾಲೇಕಲ್ಲು ಮತ್ತು ಚದರಗೊಳ್ಳಿ ಗ್ರಾಮಗಳ ಕೆರೆಗಳಿಗೆ ಚಟ್ನಳ್ಳಿ ಗುಡ್ಡದಿಂದ ಗುರುತ್ವಾಕ್ರ್ಷಣೆ ಮೂಲಕ ಮಂಗಳವಾರ ಬೆಳಿಗ್ಗೆ ನೀರು ಹರಿದು ಬರುವ ಸಾಧ್ಯತೆಯಿದೆ ಎಂದು ಎಇ ಮನೋಜ್ ಮಾಹಿತಿ ನೀಡಿದ್ದಾರೆ.
ಕೆರೆಗಳಿಗೆ ನೀರು ಹರಿಯುತ್ತಿರುವುದು ಸಂತೋಷ:
ಈಗಾಗಲೇ ತುಪ್ಪದಹಳ್ಳಿ ಕೆರೆಯಿಂದ ಅಸಗೋಡು ಸೇರಿದಂತೆ ಅನೇಕ ಕೆರೆಗಳಿಗೆ ನೀರು ಹರಿಯುತ್ತಿರುವ ಮಾಹಿತಿ ಬಂದಿದೆ. ಬಹಳ ಸಂತೋಷದ ವಿಷಯ. ತರಳಬಾಳು ಶ್ರೀಗಳ ದೂರದೃಷ್ಟಿಯ ಫಲವಾಗಿ ಯೋಜನೆ ಆರಂಭವಾಯಿತು. ಕೆರೆಗಳಿಗೆ ನೀರು ಹರಿಯುತ್ತಿರುವುದು ಸಂತೋಷ ತಂದಿದೆ. ‘
-ಬಿ.ದೇವೇಂದ್ರಪ್ಪ, ಶಾಸಕರು, ಜಗಳೂರು