suddivijayanews20/07/2024
ಸುದ್ದಿವಿಜಯ, ಜಗಳೂರು: ಬದಲಾಗುತ್ತಿರುವ ಜೀವನ ಶೈಲಿ, ಆಹಾರ ಕ್ರಮ ಮತ್ತು ಒತ್ತಡಗಳಿಂದ ಇತ್ತೀಚಿನ ದಿನಗಳಲ್ಲಿ ಪತ್ರಕರ್ತರು, ಪೌರಕಾರ್ಮಿಕರು ಮತ್ತು ಯುವಕರು ಸೇರಿದಂತೆ ಎಲ್ಲಾ ವಯೋಮಾನದವರಲ್ಲಿ ಹೃದಯ ಸಂಬಂಧಿ ಕಾಯಿಲೆಗಳು ಉಲ್ಬಣವಾಗುತ್ತಿವೆ.
ಇದಕ್ಕೆಲ್ಲಾ ಪರಿಹಾರ ನಿಯಮಿತ ವ್ಯಾಯಾಮ ಮತ್ತು ಒತ್ತಡ ರಹಿತ ಜೀವನ ಅತ್ಯಗತ್ಯ ಎಂದು ದಾವಣಗೆರೆಯ ಎಸ್‍ಎಸ್ ನಾರಾಯಣ ಸೂಪರ್ ಸ್ಪೆಷಾಲಿಟಿ ಸೆಂಟರ್ ಹೃದಯ ರೋಗ ತಜ್ಞ ಡಾ. ಗುರುರಾಜ್ ಹೇಳಿದರು.
ಪಟ್ಟಣದ ಸರಕಾರಿ ಆಸ್ಪತ್ರೆಯಲ್ಲಿ ಕಾರ್ಯನಿರತ ಪತ್ರಕರ್ತರ ಸಂಘ ಮತ್ತು ಎಸ್‍ಎಸ್ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಸಹಯೋಗದಲ್ಲಿ ಶನಿವಾರ ಪತ್ರಕರ್ತರಿಗೆ ಮತ್ತು ಪೌರಕಾರ್ಮಿಕರಿಗೆ ಉಚಿತ ಹೃದಯ ರೋಗ ತಪಾಸಣಾ ಶಿಬಿರ ಉದ್ಘಾಟಿಸಿ ಮಾತನಾಡಿದರು.ನಗರ ಸೇರಿದಂತೆ ಹಳ್ಳಿಗಳಲ್ಲೂ ಹೃದಯ ರೋಗಿಗಳು ಹೆಚ್ಚಾಗುತ್ತಿದ್ದಾರೆ. ಪ್ರಾಥಮಿಕ ಹಂತದಲ್ಲೇ ತಪಾಸಣೆ ಮಾಡಿಸಿಕೊಳ್ಳಬೇಕು. ಸಕ್ಕೆರೆ ಕಾಯಿಲೆ, ಬಿಪಿ ಇರುವ ರೋಗಿಗಳು ನಿತ್ಯ ವ್ಯಾಯಾಮ, ಯೋಗ ಮಾಡಬೇಕು. ಕೊಬ್ಬಿನ ಅಂಶ ಇರುವ ಜನರಿಗೆ ಹೃದಯ ಸಂಬಂಧಿ ಕಾಯಿಲೆಗಳು ಹತ್ತಿರವಾಗುತ್ತವೆ.
ಗ್ಯಾಸ್ಟ್ರಿಕ್ ಎಂದು ನಿರ್ಲಕ್ಷ್ಯ ಮಾಡಬೇಡಿ. ಎಕೋ, ಇಸಿಜಿ ಮಾಡಿಸಿಕೊಂಡು ಸೂಕ್ತ ಚಿಕಿತ್ಸೆ ಪಡೆಯಿತಿ. ಪತ್ರಕರ್ತರ ಜೀವನ ಹೆಚ್ಚು ಒತ್ತಡದಿಂದ ಕೂಡಿರುತ್ತದೆ.
ಅದರಂತೆ ಪೌರಕಾರ್ಮಿಕರು ಸಹ ಬೆಳಗ್ಗೆ ಎದ್ದು ನಿತ್ಯ ಕಾಯಕದಲ್ಲಿ ತೊಡಗುತ್ತಾರೆ. ಹೃದಯಾಘಾತ ಹೆಚ್ಚು ಸಂಭವಿಸುವುದು ಬೆಳಗಿನ ಜಾವದಲ್ಲಿ ಹೀಗಾಗಿ ಜಾಗೃತಿಯಿಂದ ಕಾರ್ಯನಿರ್ವಹಿಸಿ ಎಂದರು.
ಆಯುಶ್ ವೈದ್ಯಾಧಕಾರಿ ಡಾ. ಶ್ವೇತಾ, ಇತ್ತೀಚಿನ ದಿನಗಳಲ್ಲಿ ಒತ್ತಡದ ಬದುಕಿನಲ್ಲಿ ಆರೋಗ್ಯದ ಬಗ್ಗೆ ಗಮನ ಹರಿಸಲಾಗುತ್ತಿಲ್ಲ. ಎಲ್ಲರೂ ಬ್ಯೂಸಿ ಎನ್ನುತ್ತಾರೆ. ಯೋಗ, ವ್ಯಾಯಾಮದ ಜೊತೆಗೆ ಡಯಟೆ ಫಾಲೋ ಮಾಡಿ ಎಂದು ಸಲಹೆ ನೀಡಿದರು.
ಪತ್ರಕರ್ತರ ಸಂಘದ ತಾಲೂಕು ಅಧ್ಯಕ್ಷ ಜಿ.ಎಸ್.ಚಿದಾನಂದ ಮಾತನಾಡಿ, ಹೃದಯ ಕಾಯಿಲೆ ಎಂಬುದು ಇತ್ತೀಚಿನ ದಿನಗಳಲ್ಲಿ ಸಾಮಾನ್ಯವಾಗಿದೆ.
ಬಿಪಿ, ಶುಗರ್ ಬಂದ ನಂತರ ಎಲ್ಲರೂ ಮಿತ ಹಾಗೂ ಗುಣಮಟ್ಟದ ಆಹಾರ ಸೇವಿಸಬೇಕು. ಪತ್ರಕರ್ತರು ಮತ್ತು ಕಾರ್ಮಿಕರ ಜೀವನ ಒತ್ತಡದಲ್ಲಿರುವ ಕಾರಣ ಉಚಿತ ಹೃದಯ ತಪಾಸಣೆ ಶಿಬಿರ ಆಯೋಜಿಸಲಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಪಪಂ ಚೀಫ್ ಆಫೀಸರ್ ಲೋಕ್ಯಾನಾಯ್ಕ್, ಆರೋಗ್ಯಾಧಿಕಾರಿ ಪ್ರಶಾಂತ್, ಟಿಎಚ್‍ಒ ಡಾ.ವಿಶ್ವನಾಥ್, ಪೌರಕಾರ್ಮಿಕ ಸಂಘದ ಅಧ್ಯಕ್ಷ ಚಿನ್ನಪ್ಪ,
ಗ್ರಾಪಂ ಉಪಾಧ್ಯಕ್ಷ ಹಾಗೂ ಸಮಾಜ ಸೇವಕ ನಜೀರ್ ಅಹಮದ್, ಕಾರ್ಯದರ್ಶಿ ಲೋಕೇಶ್ ಎಂ.ಐಹೋಳೆ, ಪತ್ರಕರ್ತರಾದ ಎಸ್.ಎಂ.ಸೋಮನಗೌಡ,
ಬಸವರಾಜ್, ಜಗದೀಶ್, ರವಿಕುಮಾರ್, ಧನ್ಯಕುಮಾರ್, ಮಹಾಂತೇಶ್ ಬ್ರಹ್ಮ, ವಾಸೀಂ ಸೇರಿದಂತೆ ನೂರಾರು ಸಾರ್ವಜನಿಕರು ಹೃದಯ ತಪಾಸಣಾ ಶಿಬಿರದಲ್ಲಿ ಭಾಗಿಯಾಗಿದ್ದರು.