ಸುದ್ದಿವಿಜಯ, ಜಗಳೂರು: ತಾಲೂಕಿನ ಅತ್ಯಂತ ಮೂರು ದೊಡ್ಡ ಕೆರೆಗಳಲ್ಲಿ ಒಂದಾಗಿರುವ ಗಡಿಮಾಕುಂಟೆ ಕೆರೆ ಏರಿಯಲ್ಲಿ ಬಿರುಕು ಕಾಣಿಸಿಕೊಂಡಿದ್ದು ಶಾಸಕ ಬಿ.ದೇವೇಂದ್ರಪ್ಪ ಭಾನುವಾರ ಪರಿಶೀಲನೆ ನಡೆಸಿದರು.
ಜೆ.ಎಂ.ಇಮಾಂ ಸಾಹೇಬರ ಕಾಲದಲ್ಲಿ ನಿರ್ಮಾಣವಾದ ತುಪ್ಪದಹಳ್ಳಿ, ಸಂಗೇನಹಳ್ಳಿ ಮತ್ತು ಗಡಿಮಾಕುಂಟೆ ಕೆರೆ ಅತ್ಯಂತ ವಿಸ್ತಾರವಾದ ಕೆರೆಗಳಾಗಿವೆ. ಕೊಟ್ಟೂರು, ಜಗಳೂರು ರಸ್ತೆಯ ಪಕ್ಕದಲೇ ಇರುವ ಈ ಕೆರೆ ಬೃಹತ್ ಕೆರೆಯಾಗಿದ್ದು 57 ಕೆರೆ ತುಂಬಿಸುವ ಯೋಜನೆಯಲ್ಲಿ ಸೇರ್ಪಡೆಯಾಗಿದೆ.ಜಗಳೂರು ತಾಲೂಕಿನ ರಡಿಮಾಕುಂಟೆ ಗ್ರಾಮದ ಕೆರೆ ಏರಿಯಲ್ಲಿ ಬಿರುಕು ಕಾಣಿಸಿಕೊಂಡಿದ್ದು ಶಾಸಕ ಬಿ.ದೇವೇಂದ್ರಪ್ಪ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಇನ್ನೇನು ಮಳೆಗಾಲ ಆರಂಭವಾಗುವ ಲಕ್ಷಣಗಳಿದ್ದು ಜೂನ್ ತಿಂಗಳಲ್ಲಿ ಉತ್ತಮ ಮಳೆಯಾದರೆ ತುಂಗಭದ್ರಾ ನದಿಯಿಂದ ಏತ ಯೋಜನೆ ಮೂಲಕ ಈ ಕೆರೆಗೂ ನೀರು ಹರಿಯಲಿದೆ.
ಈ ಕೆರೆಗೆ ನೀರು ಹರಿದರೆ ಸೊಕ್ಕೆ ಹೋಬಳಿಯ ಸಾವಿರಾರು ಹೆಕ್ಟೇರ್ ಭೂ ಪ್ರದೇಶಕ್ಕೆ ಅಂತರ್ಜಲ ವೃದ್ಧಿಯಾಗಲಿದೆ. ಹೀಗಾಗಿ ಕರೆಯ ಸುಸ್ಥಿತಿ ಮುಖ್ಯವಾಗಿದ್ದು ಕೆರೆಯ ಏರಿ ಮೇಲೆ ಬಿರುಕು ಉಂಟಾಗಿದ್ದು ಅದನ್ನು ಶಾಸಕ ದೇವೇಂದ್ರಪ್ಪ ವೀಕ್ಷಣೆ ಮಾಡಿ ಸಂಬಂಧ ಪಟ್ಟ ಸಣ್ಣ ನೀರಾವರಿ ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಿ ಆದಷ್ಟು ಬೇಗ ದುರಸ್ತಿ ಮಾಡಿಸಬೇಕು.
ಮತ್ತು ಕೆರೆ ಏರಿಯ ಮೇಲೆ ಜಾಲಿ ಮತ್ತು ಮುಳ್ಳಿನ ಗಿಡ, ಲಂಟನಾ ಬೆಳೆದಿದ್ದು ಸ್ವಚ್ಛಗೊಳಸಲು ಅಧಿಕಾರಿಗಳಿಗೆ ಆದೇಶಿಸಿದರು.
ಇದೇ ವೇಳೆ ರೈತ ಮುಖಂಡರಾದ ಗಡಿಮಾಕುಂಟೆ ಬಸವರಾಜಪ್ಪ, ಯು.ಜಿ.ಶಿವಕುಮಾರ್ ಸೇರಿದಂತೆ ಅನೇಕ ರೈತರು ಇದ್ದರು.