ಸುದ್ದಿವಿಜಯ, ಜಗಳೂರು: ಗಣಪತಿನಿಗೆ ಅನೇಕ ಹೆಸರುಗಳು. ಭಕ್ತರ ಇಷ್ಟಾರ್ಥಗಳನ್ನು ಸುಲಭದಲ್ಲಿ ಈಡೇರಿಸುವ ದೇವರು ಎಂದರೆ ಅದುವೇ ವಿಘ್ನೇಶ್ವರ. ಜಗಳೂರು ಪಟ್ಟಣದಲ್ಲಿ ಪ್ರತಿಷ್ಠಾಪಿಸಿರುವ ಗಣಪತಿ ಮೂರ್ತಿಗಳಲ್ಲಿ ತುಮಾಟಿ ಲೇಔಟ್ ಕ್ಷೇಮಾಭಿವೃದ್ಧಿ ಸಂಘದವತಿಯಿಂದ ಪ್ರತಿಷ್ಠಾಪಿಸಲಾಗಿರುವ ಗಣಪನೇ ಅತ್ಯಂತ ಹಿರಿಯ!
ಜಗಳೂರು ಪಟ್ಟಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅಂದಾಜು 70ಕ್ಕೂ ಹೆಚ್ಚು ಮೂರ್ತಿಗಳನ್ನು ಪ್ರತಿಷ್ಠಾಪಿಸಲು ಕಾನೂನು ರೀತಿ ಪರವಾನಿಗೆ ನೀಡಲಾಗಿದೆ. ಬಿಳಿಚೋಡು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ 40ಕ್ಕೂ ಹೆಚ್ಚು ಮೂರ್ತಿಗಳ ಪ್ರತಿಷ್ಠಾಪನೆಗೆ ಪರ್ಮಿಷನ್ ಪಡೆದುಕೊಂಡು ಪ್ರತಿಷ್ಠಾಪಿಸಲಾಗಿದೆ.ಜಗಳೂರು ಪಟ್ಟಣದ ತುಮಾಟಿ ಲೇಔಟ್‍ನಲ್ಲಿ ಪ್ರತಿಷ್ಠಾಪಿಸಲಾಗಿರುವ ಬಾಲ್ಯಗಣಪತಿ ಮೂರ್ತಿ
ಈ ಗಣೇಶ ಮೂರ್ತಿಗಳಲ್ಲಿ ಮೈಮನ ಸೆಳೆಯುವ ವಿನಾಯಕನೆಂದರೆ ತುಮಾಟಿ ಲೇಔಟ್‍ನಲ್ಲಿರುವ ಬಾಲ್ಯ ಗಣಪತಿ ಮೂರ್ತಿ. ಆಕರ್ಷಕ ಮೂರ್ತಿಯನ್ನು ನೋಡಲು ಭಕ್ತರು ಬಂದು ಪೂಜೆ ಸಲ್ಲಿಸುತ್ತಾರೆ.
ಒಂಭತ್ತು ದಿನಗಳ ಕಾಲ ಪ್ರತಿಷ್ಠಾಪಿಸಿ ನಂತರ ವಿಸರ್ಜನೆ ಮಾಡುವುದು ಸಂಪ್ರದಾಯ ಎಂದು ತುಮಾಟಿ ಲೇಔಟ್ ಕ್ಷೇಮಾಭಿವೃದ್ಧಿ ಸಂಘದ ಪ್ರೊ.ಕುಮಾರಗೌಡ್ರು ಪ್ರತಿಕ್ರಿಯೆ ನೀಡಿದರು.ಜಗಳೂರು ಪಟ್ಟಣದ ಹೊರಕೆರೆಯ ಈಶ್ವರ ದೇವಸ್ಥಾನದಲ್ಲಿ ಪ್ರತಿಷ್ಠಾಪಿಸಾಗಿರುವ ಗಣೇಶ ಮೂರ್ತಿ
ಇನ್ನು ಹೊರಕೆರೆಯ ಈಶ್ವರ ದೇವಸ್ಥಾನ ಅಭಿವೃದ್ಧಿ ಸಮಿತಿ ಕಳೆದ 72 ವರ್ಷಗಳಿಂದ ನಿರಂತರವಾಗಿ ಗಣಪತಿ ಪ್ರತಿಷ್ಠಾಪನೆ ಮಾಡಿಕೊಂಡು ಬರುತ್ತಿದ್ದು. ಈ ವರ್ಷವೂ ದೇವಸ್ಥಾನದಲ್ಲಿ ಅದ್ಧೂರಿಯಾಗಿ ಪೂಜೆ ನೆರವೇರಿಸಿದ್ದಾರೆ.
ಜಗಳೂರು ಗೊಲ್ಲರಹಟ್ಟಿ ಗ್ರಾಮದಲ್ಲೂ ಅಂದಾಜು 25 ಅಡಿ ಎತ್ತರ ಗಣೇಶ ಮೂರ್ತಿ ಹೃನ್ಮನ ಸೆಳೆಯುತ್ತದೆ. ಗಂಗಾಂಭಿಕಾ ಬಡಾವಣೆಯ ಅಕುರಥಾ ಗಣೇಶ ಸೇವಾ ಸಮಿತಿ ವತಿಯಿಂದ ಮೂರ್ತಿ ಪ್ರತಿಷ್ಠಾಪಿಸಲಾಗಿದ್ದು ಪ್ರತಿದಿನವೂ ಪ್ರಸಾದ ವ್ಯವಸ್ಥೆಯನ್ನು ಭಕ್ತರು ಮಾಡುತ್ತಿದ್ದಾರೆ.