ಜಗಳೂರಿನಲ್ಲಿ ಅದ್ದೂರಿ ಗಿರಿಜನ ಉತ್ಸವಕ್ಕೆ ಚಾಲನೆ

Suddivijaya
Suddivijaya December 26, 2023
Updated 2023/12/26 at 2:40 PM

ಸುದ್ದಿವಿಜಯ, ಜಗಳೂರು: ಜಿಲ್ಲಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ತಾಪಂ, ಪಪಂ, ಪರಿಶಿಷ್ಟ ಪಂಗಡಗಳ ಇಲಾಖೆ, ಸಮಾಜ ಕಲ್ಯಾಣ ಇಲಾಖೆ,  ತಾಲೂಕು ಕನ್ನಡ ಸಾಹಿತ್ಯ ಪರಿಷತ್, ತಾ.ಶರಣ ಸಾಹಿತ್ಯ ಪರಿಷತ್ ಸಮುಕ್ತ ಆಶ್ರಯದಲ್ಲಿ  ‘ಗಿರಿಜನ ಉತ್ಸವ’ ಮಂಗಳವಾರ ಡಾ.ಬಿ.ಆರ್.ಅಂಬೇಡ್ಕರ್ ವೃತ್ತದಲ್ಲಿ ಶಾಸಕ ಬಿ.ದೇವೇಂದ್ರಪ್ಪ ಚಾಲನೆ ನೀಡಿದರು.

ಪಟ್ಟಣದ ಡಾ.ಬಿ.ಆರ್ ಅಂಬೇಡ್ಕರ್ ವೃತ್ತದಿಂದ  ಮಂಗಳವಾರ ಆರಂಭವಾದ  ಮೆರವಣಿಗೆಯಲ್ಲಿ ವಿವಿಧ ಜಿಲ್ಲೆಗಳಿಂದ ಡೊಳ್ಳುಕುಣಿತ,  ಬೇಡರ ಪಡೆ, ವೀರಗಾಸೆ, ವಾದ್ಯ ಸಂಗೀತ, ಗಾರಡಿಗೊಂಬೆ, ಕೋಲು ಕುಣಿತ, ಸುಗಮ ಸಂಗೀತ,  ಕಲಾ ತಂಡಗಳ ಕುಣಿತಕ್ಕೆ ಜನರ ಗಮನ ಸೆಳೆದವು.

ಹೊಸ ಬಸ್ ನಿಲ್ದಾಣ, ಡಾ. ರಾಜ್‌ಕುಮಾರ್ ರಸ್ತೆ, ಹಳೆ ಮಹಾತ್ಮಗಾಂಧಿ ವೃತ್ತ, ಪ್ರವಾಸ ಮಂದಿರದ ರಸ್ತೆಯ ಮೂಲಕ ಬಯಲು ರಂಗ ಮಂದಿರದ ಆವರಣದ ವೇದಿಕೆ ತೆರಳಿತು.

ಕಾರ್ಯಕ್ರಮ ಉದ್ಘಾಟಿಸಿ ನಂತರ ಮಾತನಾಡಿದ
ಶಾಸಕ ಚಿಕ್ಕಮ್ಮನಹಟ್ಟಿ ಬಿ. ದೇವೇಂದ್ರಪ್ಪ,  ಆಧುನಿಕ ಜೀವನ ಶೈಲಿಯ ಬದಲಾವಣೆಯ ಗಾಳಿಯಿಂದಾಗಿ ಇಂದು ನಮ್ಮ ಗ್ರಾಮೀಣ ಜಾನಪದ  ಸತ್ವ ಸೊರಗುತ್ತಿದೆ.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ  ಗಿರಿಜನೋತ್ಸವ ಮೂಲಕ  ಹಳ್ಳಿ ಹಳ್ಳಿಗಳಲ್ಲಿನ ಯುವಕರಲ್ಲಿಯ  ಕಲೆಯನ್ನು ಗುರುತಿಸಿ ಪ್ರೋತ್ಸಹ ನೀಡುತ್ತಿರುವುದು ಶ್ಲಾಘನೀಯ.

ಗಿರಿಜನ ಉತ್ಸವಗಳು ಎಂದರೆ ಪರಿಶುದ್ದ ನೀರಿನಕೊಳ, ಹರಿಯುವ ಶುದ್ದ ನದಿಯ ನೀರಿನಂತೆ.

ನಮ್ಮ ಜೀವನಕ್ಕೆ ಅಗತ್ಯವಾಗಿ ಸಂಸ್ಕಾರ, ಸಂಸ್ಕೃತಿ ಬೇಕು. ನಮ್ಮ ಹಕ್ಕು ಪಡೆಯುವುದು ಪ್ರಜಾ ಪ್ರಭುತ್ವದ ಆದ್ಯ ಕರ್ತವ್ಯ. ಐಎಎಸ್, ಕೆಎಎಸ್ ಪರೀಕ್ಷೆಗಳಲ್ಲಿ ಉತ್ತರಿಸಬೇಕಾದರೆ ಜಾನಪದ, ಸಂಸ್ಕೃತಿ ಓದುವ, ಪರಂಪರೆ ಬಗ್ಗೆ ತಿಳಿದುಕೊಂಡಾಗ ಮಾತ್ರ ಸಾಧ್ಯ.

ನಮ್ಮ ದೇಶದ ಮೂಲ ನಾಗರೀಕತೆ ಆರ್ಯರು, ದ್ರಾವಿಡರಿಂದ ಬಂದುದು. ಜಾನಪದ ಸಂಸ್ಕೃತಿ ನಮ್ಮದು. ಈಗಿನ ದ್ವೇಷ, ರಾಗ ಆಗ ಇರಲಿಲ್ಲ. ಬೇಕು ಎನ್ನುವವನು ಬಡವ.

ಸಾಮರಸ್ಯ ಬದುಕು ಮರೆಯಾಗಲು ಕಾರಣ ಆಧುನಿಕ ಶೈಲಿ. ನಮ್ಮ ಮೂಲ ಸಂಸ್ಕೃತಿ ಉಳಿಯಬೇಕಾದರೆ  ಉತ್ಸವಗಳು ಬೇಕು.

ಕೌಶಲಗಳು ಹೊರ ತೆಗೆಯಲು ಉತ್ಸವಗಳು ಬೇಕು.‌ ಮೊಬೈಲ್ ಬಳಕೆ ಕಡಿಮೆ ಮಾಡಿ ಎಂದು ವಿದ್ಯಾರ್ಥಿಗಳಿ ತಿಳಿ ಹೇಳಿದರು.

ಕನ್ನಡ ಮತ್ತು ಸಂಸ್ಕತಿ ಇಲಾಖೆ ಸಹಾಯಕ ನಿರ್ದೇಶಕ ರವಿಚಂದ್ರ ಮಾತನಾಡಿ, ನಮ್ಮ ಸರಕಾರ ಬುಡಕಟ್ಟು ಸಂಸ್ಕೃತಿಯನ್ನು ಉಳಿಸಲು ಪ್ರೊತ್ಸಾಹಿಸುತ್ತಿದೆ.

ನಮ್ಮ ನಾಡಿನ ಮೂಲ ಸಂಸ್ಕೃತಿ  ಇರುವುದು ಬುಡುಕಟ್ಟು ಸಂಸ್ಕೃತಿಯಲ್ಲಿ, ಶಾಸಕ ಬಿ.ದೇವೇಂದ್ರಪ್ಪ ಸಂಪೂರ್ಣ ಸಹಕಾರ ನೀಡಿದರು.

ನಮ್ಮ ಇಲಾಖೆಯು ಜಿಲ್ಲೆಯ ವಿವಿಧೆಡೆ, ಸಂಗೀತ, ಕಲೆ, ಕುಣಿತ, ಹಾಡುಗಾರರು ಹೊಂದಿರುವ ಕಲೆಯುಳ್ಳ ಪ್ರತಿಭೆಗಳಿಗೆ ವೇದಿಕೆಯನ್ನು ನೀಡುವ ಮೂಲಕ ಕಲೆ ಹಾಗೂ  ಸಂಸ್ಕೃತಿಯನ್ನು ಸಂರಕ್ಷಿಸಲಾಗುತ್ತಿದೆ.

ಕಲೆಯನ್ನು ಪೋಷಿಸುವ ನಿರಂತರ ಪ್ರಯತ್ನ ಇಲಾಖೆ ಮಾಡುತ್ತಿದೆ. ಅಂತವರನ್ನು ಗುರುತಿಸಿ ಅವರಿಗೆ ಪ್ರೋತ್ಸಾಕರ  ಸೌಲಭ್ಯಗಳನ್ನು ನೀಡಲಾಗುತ್ತಿದೆ ಎಂದರು.

ರಾಜ್ಯ ಎಸ್ಟಿ ಘಟಕದ ರಾಜ್ಯಾಧ್ಯಕ್ಷ ಕೆ.ಪಿ.ಪಾಲಯ್ಯ ಮಾತನಾಡಿ, ಸಿದ್ದರಾಮಯ್ಯ ನೇತೃತ್ವದ ನಮ್ಮ ಸರಕಾರ ಬುಡಕಟ್ಟು ಸಂಸ್ಕೃತಿ, ಪರಂಪರೆ ಉಳಿಸಲು ಸಾಕಷ್ಟು ಅನುದಾನ ನೀಡುತ್ತಿದೆ.

ನಮ್ಮ ಕ್ಷೇತ್ರದಲ್ಲಿ ಬುಡಕಟ್ಟು ಜನರೇ ಹೆಚ್ಷಿದ್ದಾರೆ. ನಮ್ಮ ಮುಂದಿನ ಪೀಳಿಗೆಗೆ ಜಾಗೃತಿ ಮಾಡಿಸಲು ಇಂತಹ ಉತ್ಸವಗಳು ಅಗತ್ಯವಿದೆ ಎಂದರು.

ಕೆಪಿಸಿಸಿ ಸದಸ್ಯ ಕಲ್ಲೇಶ್ ರಾಜ್ ಪಟೇಲ್ ಮಾತನಾಡಿ, ಗಿರಿಜನರ ವಾಸ, ಉಡುಗೆ ತೊಡುಗೆ ವಿಭಿನ್ನವಾಗಿ ಕಾಣುತ್ತೇವೆ. ಜಾನಪದ ದೇವರುಗಳ ಪೂಜೆ ಅವರ ಆರಾಧ್ಯ ದೈವ.

ಸರಕಾರ ಬುಡಕಟ್ಟು ಸಂಸ್ಕೃತಿ, ಸಂಸ್ಕಾರ ಅವರನ್ನು ಮುನ್ನಲೆಗೆ ತರುವ ಕೆಲಸ ಮಾಡುತ್ತಿದೆ. ಬುಡಕಟ್ಟುಸಂಸ್ಕೃತಿಯು ಮುಂದಿನ ಪೀಳಿಗೆ ಜಾನಪದ ಭಾಗವಾಗಬೇಕು ಎಂದರು.

ಈ ಸಂದರ್ಭದಲ್ಲಿ ಕೆಪಿಸಿಸಿ ಎಸ್ಟಿ ಘಟಕದ  ಅಧ್ಯಕ್ಷ  ಕೆ.ಪಿ ಪಾಲಯ್ಯ, ತಾಪಂ ಇಒ ಕೆ.ಟಿ.ಕರಿಬಸಪ್ಪ, ಸಾಹಿತಿ ಎನ್.ಟಿ ಎರ‍್ರಿಸ್ವಾಮಿ, ಬಿಇಒ ಹಾಲುಮೂರ್ತಿ,

ಕೆಪಿಸಿಸಿ ಸದಸ್ಯ ಕಲ್ಲೇಶ್ ರಾಜ್ ಪಟೇಲ್, ಸಮಾಜ ಕಲ್ಯಾಣ ಇಲಾಖೆಯ ನಿವೃತ್ತ ಅಧಿಕಾರಿ ಬಿ. ಮಹೇಶ್ವರ್, ಜಿ.ಪಂ ಎಇಇ ಶಿವಮೂರ್ತಿ,

 ದೈಹಿಕ  ನಿರ್ದೇಶಕ ಸುರೇಶ್‌ರೆಡ್ಡಿ, ಜಿಲ್ಲಾ ಕಾಂಗ್ರೆಸ್ ಕಾರ್ಯದರ್ಶಿ ಶೇಖರಪ್ಪ ಪಲ್ಲಾಗಟ್ಟೆ, ಪ.ಪಂ ಸದಸ್ಯ ಸಣ್ಣ ತಾನಾಜಿ ಗೋಸಾಯಿ, ಮುಖಂಡರಾದ  ಕಾನನಕಟ್ಟೆ ಪ್ರಭು, ಮಾಳಮ್ಮನಹಳ್ಳಿ ವೆಂಕಟೇಶ್ , ಕಸಾಪ ಅಧ್ಯಕ್ಷೆ ಸುಜಾತಮ್ಮ ರಾಜು, ಕಾನಕಟ್ಟೆ ಪ್ರಭು, ಬಾಬು ರೆಡ್ಡಿ, ಅನೂಪ್ ರೆಡ್ಡಿ  ಸೇರಿದಂತೆ ಮತ್ತಿತರರಿದ್ದರು.

Share this Article
Leave a comment

Leave a Reply

Your email address will not be published. Required fields are marked *

error: Content is protected !!