suddivijayanews28/05/2024
ಸುದ್ದಿವಿಜಯ,ವಿಶೇಷ
ಜಗಳೂರು: ಬರಪೀಡಿತ ಜಿಲ್ಲೆಗಳಲ್ಲಿ ಬೇಸಿಗೆ ದಿನಗಳಲ್ಲಿ ಸರಕಾರಿ ಶಾಲೆಗಳಲ್ಲಿ ಮಕ್ಕಳಿಗೆ ಬಿಸಿಯೂಟ ವ್ಯವಸ್ಥೆ ಮಾಡಿತ್ತು.
ಆದರೆ ತಾಲೂಕಿನ ಗೋಗುದ್ದು ಗ್ರಾಮದಲ್ಲಿರುವ ಸರಕಾರಿ ಪ್ರಾಥಮಿಕ ಶಾಲೆ ಮಕ್ಕಳಿಗೆ ಗ್ರಾಮದ ವಿದ್ಯಾವಂತ ಯುವಕರು ಕನ್ನಡ, ಇಂಗ್ಲಿಷ್ ವ್ಯಾಕರಣ, ಗಣಿತ ಜೊತೆಗೆ ಕೌಶಲ ತರಬೇತಿ ನೀಡುವ ಮೂಲಕ ಮಕ್ಕಳ ಬೌದ್ಧಿಕತೆ ವೃದ್ಧಿಗೆ ಸಹಕಾರಿಯಾಗಿದ್ದಾರೆ.
ಹೌದು, ಬರಪೀಡಿತ ಜಿಲ್ಲೆಗಳನ್ನು ಗುರುತಿಸಿ ಸರಕಾರ ಆಯಾ ಜಿಲ್ಲೆಗಳಲ್ಲಿ ಸರಕಾರಿ ಶಾಲೆಗಳಲ್ಲಿರುವ ಮಕ್ಕಳಿಗೆ 40 ದಿನಗಳ ಕಾಲ ಬಿಸಿಯೂಟ ವ್ಯವಸ್ಥೆ ಮಾಡಿತ್ತು. ಮೇ.28ರವರೆ ಬೇಸಿಗೆ ಮಧ್ಯಾಹ್ನದ ಬಿಸಿಯೂಟ ಯೋಜನೆ ಮುಕ್ತಾಯವಾಯಿತು.ಜಗಳೂರು ತಾಲೂಕಿನ ಗೋಗುದ್ದು ಸರಕಾರಿ ಶಾಲೆಯಲ್ಲಿ ಮಕ್ಕಳಿಗೆ ಬೇಸಿಗೆ ಬಿಸಿಯೂಟದ ಜೊತೆಗೆ ಕೌಶಲ ತರಬೇತಿ ನೀಡಿದ ಯುವಕರು.
ಆದರೆ ತಾಲೂಕಿನ ಗೋಗುದ್ದು ಸರಕಾರಿ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳಿಗೆ ಬಿಸಿಯೂಟದ ಜೊತೆಗೆ ಗ್ರಾಮದ ವಿದ್ಯಾವಂತ ಯುವಕರು ಮಕ್ಕಳಿಗೆ ಬೇಸಿಗೆ ರಜೆಯಲ್ಲಿ ಕೌಶಲ ಆಧಾರಿತ ಶಿಕ್ಷಣ ನೀಡುವ ಮೂಲಕ ಮಕ್ಕಳಲ್ಲಿ ಭೌದ್ಧಿಕ ವಿಕಸನಕ್ಕೆ ನೆರವಾಗಿದ್ದಾರೆ.
ಬೇಸಿಗೆ ರಜೆಯ 40 ದಿನಗಳಲ್ಲಿ ಶಾಲೆಗೆ ಬರುವ 60 ವಿದ್ಯಾರ್ಥಿಗಳಿಗೆ ಬೆಳಿಗ್ಗೆ 10 ರಿಂದ 2 ಗಂಟೆವರೆಗೆ ಯುವಕರಾದ ಮಮತಾ ಮತ್ತು ಆರ್.ಸಾಹಿಲ್ ಇಂಗ್ಲಿಷ್, ಹಿಂದಿ ಮತ್ತು ಕನ್ನಡ ವ್ಯಾಕರಣದ ಜೊತೆಗೆ ಗಣಿತ ವಿಷಯಗಳನ್ನು ಬೋಧಿಸುವ ಮೂಲಕ ಮಕ್ಕಳಲ್ಲಿ ಭಾಷಾ ಕೌಶಲಗಳನ್ನು ವೃದ್ಧಿಸಲು ಸಹಕಾರಿಯಾಗಿದ್ದಾರೆ.
ಅಷ್ಟೇ ಅಲ್ಲ ಮಕ್ಕಳಿಗೆ ಜಾನಪದ ಗೀತೆಗಳು, ದೇಶಭಕ್ತಿ ಗೀತೆಗಳು ಹಾಡಿಸುವ ಜೊತೆಗೆ ನೃತ್ಯ ಮಾಡಿಸಿ ಅವರಲ್ಲಿರುವ ಪ್ರತಿಭೆಗಳನ್ನು ಗುರುತಿಸಿ ಹೊರತೆಗೆದಿದ್ದಾರೆ. ಮಕ್ಕಳಿಗೆ ದಿನ ಪತ್ರಿಕೆಗಳನ್ನು ಓದಿಸಿ ಮಕ್ಕಳಲ್ಲಿ ಸಾಮಾನ್ಯ ಜ್ಞಾನ ವೃದ್ಧಿಗೆ ನೆರವಾಗಿದ್ದಾರೆ.ಪೇಪರ್ ಕಟ್ಟಿಂಗ್ ಮಾಡಿಸಿ ವಿವಿಧ ಬಗೆಯ ಹೂವುಗಳನ್ನು ಬಿಡಿಸುವ ಕಲೆಯ ತರಬೇತಿಯನ್ನು ಕಲಿಸಿದ್ದಾರೆ. ಬೇಸಿಗೆಯಲ್ಲಿ ನೀರಿನ ಮಿತಬಳಕೆ, ಪರಿಸರ ಸಂರಕ್ಷಣೆಯಿಂದ ಆಗುವ ಲಾಭಗಳ ಬಗ್ಗೆ ಬೋಧಿಸಿದ್ದಾರೆ.
ಇದಕ್ಕೆ ಕಾರಣ ಮುಖ್ಯ ಶಿಕ್ಷಕ ಕುಬೇಂದ್ರಪ್ಪ ಅವರಾಗಿದ್ದು, ಮಕ್ಕಳ ಮೇಲಿರುವ ಕಾಳಜಿಯಿಂದ ವಿದ್ಯಾವಂತ ಯುವಕ ಯುವತಿಯರ ಸಹಾಯದಿಂದ ಮಕ್ಕಳಲ್ಲಿರುವ ಸೂಪ್ತ ಪ್ರತಿಭೆಯನ್ನು ಅನಾವರಣಗೊಳಿಸಿದ್ದಾರೆ.
ಮಕ್ಕಳಲ್ಲಿ ವ್ಯಕ್ತಿತ್ವ ವಿಕಸನಕ್ಕೆ ಬೇಸಿಗೆಯಲ್ಲು ಕೌಶಲ ಆಧಾರಿತ ಶಿಕ್ಷಣ ನೀಡಿರುವುದಕ್ಕೆ ಮುಖ್ಯ ಶಿಕ್ಷಕ ಕುಬೇಂದ್ರಪ್ಪ ಮತ್ತು ಸಹ ಶಿಕ್ಷಕರ ಕಾರ್ಯಕ್ಕೆ ಗ್ರಾಮಸ್ಥರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಬೇಸಿಗೆಯಲ್ಲಿ ಮಕ್ಕಳು ಸುಮ್ಮನೆ ಕಾಲಹರಣ ಮಾಡುತ್ತಾರೆ ಎನ್ನುವ ಉದ್ದೇಶದಿಂದ ಯುವಕರಾದ ಮಮತಾ ಮತ್ತು ಸಾಹಿಲ್ ಅವರನ್ನು ಶಾಲೆಗೆ ಕರೆಸಿ ಮಕ್ಕಳಿಗೆ ವಿಶೇಷ ಕೌಶಲ ಆಧಾರತಿ ಶಿಕ್ಷಣ ನೀಡಿದ್ದರಿಂದ ಮಕ್ಕಳಲ್ಲಿ ಸಾಂಸ್ಕøತಿಕವಾಗಿ ಮತ್ತು ಬೌದ್ಧಿಕವಾಗಿ ಶಿಕ್ಷಣ ಪಡೆದಿರುವುದು ನಿಜಕ್ಕೂ ಹೆಮ್ಮೆಯ ವಿಷಯ ಎಂದು ಮುಖ್ಯ ಶಿಕ್ಷಕ ಕುಬೇಂದ್ರಪ್ಪ ಪ್ರತಿಕ್ರಿಯೆ ನೀಡಿದರು.