ಸುದ್ದಿವಿಜಯ, ಜಗಳೂರು: ಸಿಇಟಿ ಜಾರಿಗೆ ತರುವ ಮೂಲಕ ಶೈಕ್ಷಣೀಕ ಕ್ಷೇತ್ರದಲ್ಲಿ ಕ್ರಾಂತಿ ಮಾಡಿದವರು ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಹ್ಲಿ ಅವರು. ಇಂದು ಕಟ್ಟಕಡೆಯ ವ್ಯಕ್ತಿಯ ಮಗ ಎಂಬಿಬಿಎಸ್ ಮುಗಿಸಲು ಅನೇಕ ಮಾರ್ಪಾಟುಗಳನ್ನು ಮಾಡಿದ ಕಾಂತಿಕಾರಿ ನಾಯಕ ಅವರು ಎಂದು ಶಾಸಕ ಬಿ.ದೇವೇಂದ್ರಪ್ಪ ಮೆಚ್ಚುಗೆ ವ್ಯಕ್ತಪಡಿಸಿದರು.
ಪಟ್ಟಣದ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಶನಿವಾರ 2023-24ನೇ ಸಾಲಿನ ಸಾಂಸ್ಕøತೀಕ ಕ್ರೀಡಾ ಚಟುವಟಿಕೆಗಳ ಉದ್ಘಾಟನೆ ಮತ್ತು ಪ್ರಥಮ ಪಿಯು ವಿದ್ಯಾರ್ಥಿಗಳಿಗೆ ಸ್ವಾಗತ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ನನ್ನ ಪುತ್ರ ಎಂ.ಡಿ.ವಿಜಯ್‍ಕುಮಾರ್‍ಗೆ ಪಿಯು ಮತ್ತು ಸಿಇಟಿ ರ್ಯಾಂಕ್ ಆಧಾರದ ಮೇಲೆ ಎಂಬಿಬಿಎಸ್ ಸೀಟು ದೊರಕಿತು. ಎಂಬಿಬಿಎಸ್ ಮುಗಿದ ನಂತರ ಐಆರ್‍ಎಸ್ ನಾಗರೀಕ ಸೇವಾ ಪರೀಕ್ಷೆಯಲ್ಲಿ ಉತ್ತೀರ್ಣರಾದ ಮೇಲೆ ಇಂದು ಆಧಾಯ ತೆರಿಗೆ ಅಧಿಕಾರಿಯಾಗಿದ್ದಾರೆ.
ಒಬ್ಬ ಡಿದರ್ಜೆ ನೌಕರನ ಮಗ ಸರಕಾರಿ ಸಿಟು ತೊರಜಕಲು ಅಷ್ಟು ಸುಲಭವಾದ ಮಾತಲ್ಲ. ಆದರೆ ವೀರಪ್ಪ ಮೊಯ್ಲಿ ಅವರು ಸಿಎಂ ಆಗಿದ್ದಾಗ ಸಿಇಟಿ ಜಾರಿಗೆ ತಂದರು. ಇತ್ತೀಚೆಗೆ ಬೆಂಗಳೂರಿನಲ್ಲಿ ನಡೆದ ನೂತನ ಶಾಸಕರಿಗೆ ವಿಧಾನ ಸಭಾ ನಡಾವಳಿಗಳ ಬಗ್ಗೆ ಟ್ರೈನಿಂಗ್ ನೀಡುವಾಗ ಸಿಇಟಿ ಜಾರಿಗೆ ತಂದ ವಿಚಾರದ ಬಗ್ಗೆ ಪ್ರಸ್ತಾಪ ಮಾಡಿದರು.
ನಿಜಕ್ಕೂ ಇದೊಂದು ದೊಡ್ಡ ಶೈಕ್ಷಣೀಕ ಕ್ರಾಂತಿಯಾಗಿದ್ದು, ಪ್ರತಿಭಾವಂತ ವಿದ್ಯಾರ್ಥಿಗಳಿಗಳ ಪರಿಶ್ರಮಕ್ಕೆ ತಕ್ಕ ಫಲ. ಒಬ್ಬ ದೂರ ದೃಷ್ಟಿಯ ನಾಯಕನಿಗೆ ಸಲ್ಲುವ ಗೌರವ ಎಂದು ಶ್ಲಾಘಿಸಿದರು.
ನಾನು ಸಹ ಇದೇ ಕಾಲೇಜಿನ ವಿದ್ಯಾರ್ಥಿ. ನನ್ನ ಮಕ್ಕಳಾದ ಎಂ.ಡಿ.ಕೀರ್ತಿಕುಮಾರ್, ಎಂ.ಡಿ.ವಿಜಯ್ ಕುಮಾರ್ ಇದೇ ಸರಕಾರಿ ಕಾಲೇಜಿನಲ್ಲಿ ಓದಿದವರು. ಈ ಕಾಲೇಜಿನಲ್ಲಿ ಓದಿದ ಅನೇಕರು ದೊಡ್ಡ ದೊಡ್ಡ ಹುದ್ದೆಯಲ್ಲಿದ್ದಾರೆ.
ನಾಲಂದ ಪದವಿ ಪೂರ್ವ ಕಾಲೇಜಿನಲ್ಲಿ 33 ವರ್ಷಗಳ ಕಾಲ ಗಂಟೆ, ಕಸ ಗೂಡಿಸಿ ಸೇವೆ ಮಾಡಿದೆ. ನಂತರ ಈ ಕ್ಷೇತ್ರದ ಜನ ಸೇವೆ ಮಾಡುವ ಭಾಗ್ಯ ಸಿಕ್ಕಿತು.
ಮನುಷ್ಯನನ್ನು ಮನುಷ್ಯನನ್ನಾಗಿ ಮಾಡುವ ಕ್ಷೇತ್ರ ಎಂದರೆ ಅದು ಶಿಕ್ಷಣ ಮಾತ್ರ. ವಿದ್ಯೆಯಿಂದ ಧನ, ಸುಖ, ಶಾಂತಿ ಸಿಗುತ್ತದೆ. ನಾನು ಶಾಸಕನಾಗಿ ಐದು ವರ್ಷಗಳ ಕಾಲದ ನನ್ನ ಸೇವೆಯಲ್ಲಿ ಹೆಚ್ಚು ಶೈಕ್ಷಣೀಕ ಅಭಿವೃದ್ಧಿಗಾಗಿ ಮೀಸಲಿಡುತ್ತೇನೆ.
ಈ ಕಾಲೇಜಿಗೆ ಗುಣಮಟ್ಟದ ಲೈಬ್ರರಿ ಮತ್ತು ಭರತ ನಾಟ್ಯ ಕಲಿಯುವ ಆಸಕ್ತಿಯಿದ್ದರೆ ಭರತ ನಾಟ್ಯ ತರಬೇತಿ ಶಾಲೆ ತೆರೆಯಲು ಸಿದ್ಧನಿದ್ದೇನೆ ಎಂದರು.
ಇನ್‍ಸ್ಪೆಕ್ಟರ್ ಎಂ.ಶ್ರೀನಿವಾಸ್‍ರಾವ್ ಮಾತನಾಡಿ, ನುಡಿಯ ಮೇಲೆ ನಮ್ಮ ವ್ಯಕ್ತಿತ್ವ ಇರುತ್ತದೆ. 18 ತುಂಬಿದ ಮೇಲೆ ನಾನು ಸರ್ವ ಸ್ವತಂತ್ರರು ಎಂಬುದು ತಪ್ಪು. ಕಾನೂನಿನ ಮೀರಿ ಯಾರೆ ತಪ್ಪು ಮಾಡಿದರೂ ಶಿಕ್ಷೆ ತಪ್ಪಿದ್ದಲ್ಲ.
ನಿಮ್ಮ ಮೇಲೆ ಭರವಸೆಯಿಟ್ಟು ನಿಮ್ಮ ಪೋಷಕರು ಕಾಲೇಜಿಗೆ ಕಳುಹಿಸುತ್ತಾರೆ. ಪ್ರೀತಿ, ಪ್ರೇಮ ಎಂದು ನಿಮ್ಮ ಬದುಕನ್ನು ಹಾಳು ಮಾಡಿಕೊಳ್ಳಬೇಡಿ ಎಂದು ವಿದ್ಯಾರ್ಥಿಗಳಿಗೆ ತಿಳಿ ಹೇಳಿದರು.
ಪದವಿ ಪೂರ್ವ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಎಂ.ಶಿವರಾಜ್, ಉತ್ತಮ ಅಂಕಗಳನ್ನು ಪಡೆದು ಉನ್ನತ ಹುದ್ದೆಗೆ ಹೋಗುವ ಹಾಗೆ ಸಾಧನೆ ಮಾಡಿ. ಆಗ ಮಾತ್ರ ನಿಮ್ಮ ಪೋಷಕರಿಗೆ ನೀವು ಸಲ್ಲಿಸುವ ಗೌರವ ಎಂದರು.
ಕಾರ್ಯಕ್ರಮದಲ್ಲಿ ಪ್ರಾಂಶುಪಾಲ ಸಿ.ಪಿ.ಜಗದೀಶ್ ಅಧ್ಯಕ್ಷತೆ ವಹಿಸಿದ್ದರು. ಉಪ ಪ್ರಾಂಶುಪಾಲ ಡಿ.ಡಿ.ಹಾಲಪ್ಪ, ಕಾಲೇಜು ಅಭಿವೃದ್ಧಿ ಸಮಿತಿ ಉಪಾಧ್ಯಕ್ಷ ಬಿ.ಟಿ.ಶ್ರೀನಿವಾಸ್‍ರೆಡ್ಡಿ, ಕೆಪಿಸಿಸಿ ಸದಸ್ಯ ಕಲ್ಲೇಶ್‍ರಾಜ್ ಪಟೇಲ್, ಕಾಂಗ್ರೆಸ್ ಮುಖಂಡರಾದ ಪಲ್ಲಾಗಟ್ಟೆ ಶೇಖರಪ್ಪ, ಉಪನ್ಯಾಸಕ ಮಂಜುನಾಥ್, ಸಿದ್ದೇಶ್, ಮಾರುತಿ ಟಿ. ಜಗದೀಶ್, ಸೈಯದ್ ನಸ್ರುಲ್ಲಾ, ಷಕೀಲ್ ಅಹ್ಮದ್, ಪಪಂ ಚೀಫ್ ಆಫೀಸರ್ ಲೋಕ್ಯಾನಾಯ್ಕ್, ಪಪಂ ಸದಸ್ಯ ಅರಿಶಿಣಗುಂಡಿ ಮಂಜುನಾಥ್ ಸೇರಿದಂತೆ ಅನೇಕರು ಇದ್ದರು.
ಸಾಂಸ್ಕøತಿ ಕಲರವ:
ಭರತ ನಾಟ್ಯ ಪ್ರವೀಣೆ ಸ್ಪೂರ್ತಿ ಸಾಂಸ್ಕøತಿ ಕ್ರೀಡಾ ಹಬ್ಬದಲ್ಲಿ ಭರತನಾಟ್ಯ ಮಾಡುವ ಮೂಲಕ ವಿದ್ಯಾರ್ಥಿಗಳ ಮನ ಸೆಳೆದರು. ಜೂನಿಯರ್ ವಿಷ್ಣುವರ್ಧನ್ ಎಂದೇ ಖ್ಯಾತಿ ಪಡೆದಿರುವ ಜಗಳೂರು ಗೊಲ್ಲರಹಟ್ಟಿಯ ಮೊಹಮದ್ ಅಲಿ ಅವರು ಡಾ.ವಿಷ್ಣುವರ್ಧನ್ ಅವರು ನಟಿಸಿದ ಅನೇಕ ಹಾಡುಗಳಿಗೆ ನೃತ್ಯ ಮಾಡಿ ವಿದ್ಯಾರ್ಥಿಗಳನ್ನು ರಂಜಿಸಿದರು.