ರಾಜ್ಯ ಸರಕಾರದಿಂದ ನೌಕರರ ಬೇಡಿಕೆಗಳಿಗೆ ನಕಾತ್ಮಾಕ ಸ್ಪಂದನೆ: ರಾಜ್ಯಾಧ್ಯಕ್ಷ ಷಡಾಕ್ಷರಿ ಬೇಸರ

Suddivijaya
Suddivijaya March 24, 2023
Updated 2023/03/24 at 1:20 PM

ಸುದ್ದಿವಿಜಯ, ಜಗಳೂರು:  ಸರಕಾರಿ ನೌಕರರಲ್ಲಿ ಹಲವು ಬೇಡಿಕೆಗಳಿವೆ ಅವುಗಳನ್ನು ಈಡೇರಿಸುವಲ್ಲಿ ರಾಜ್ಯ ಸರಕಾರ  ಪೂರ್ಣ ಪ್ರಮಾಣದಲ್ಲಿ ಸಹಕಾರ ನೀಡಿಲ್ಲ ಎಂದು ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘದ ರಾಜ್ಯಾದ್ಯಕ್ಷ ಸಿ.ಎಸ್. ಷಡಾಕ್ಷರಿ ಬೇಸರ ವ್ಯಕ್ತಪಡಿಸಿದರು.

ಪಟ್ಟಣದ ತರಳಬಾಳು ಕೇಂದ್ರದಲ್ಲಿ ಶುಕ್ರವಾರ ರಾಜ್ಯ ಸರ್ಕಾರಿ ನೌಕರರ ಸಂಘ ತಾಲೂಕು ಶಾಖೆಯ ವತಿಯಿಂದ ಹಮ್ಮಿಕೊಂಡಿದ್ದ ವಾಣಿಜ್ಯ ಮಳಿಗೆಗಳ ಶಂಕಸ್ಥಾಪನೆ, ಮಹಿಳಾ ದಿನಾಚರಣೆ, ಪ್ರಜಾಸ್ನೇಹಿ ಅಡಳಿತ ಸುಧಾರಣೆಯಲ್ಲಿ ಸರಕಾರಿ ನೌಕರರ ಪಾತ್ರ ವಿಚಾರ ಸಂಕೀರ್ಣ ಹಾಗೂ ಸೇವಾರತ್ನ ಪುರಸ್ಕಾರ ಪ್ರಧಾನ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.

ಕಳೆದ ಎರಡು ವರ್ಷಗಳಿಂದಲೂ ನಿರಂತರ ಹೋರಾಟದ ಫಲವಾಗಿ ಸರಕಾರವು 27 ಆದೇಶಗಳನ್ನು ಜಾರಿಗೊಳಿದಿದೆ.

ಇತ್ತೀಚಿಗೆ ಮಹಿಳೆಯರಿಗೆ 6 ತಿಂಗಳ ಶಿಶುಪಾಲನಾ ಭತ್ಯೆಯ ಸಹಿತ ರಜೆಯನ್ನು ನೀಡುತ್ತಿದ್ದು ಎನ್‌ಪಿಎಸ್ ಸೇರಿದಂತೆ ಶೇ.17 ರಷ್ಟು ಮಧ್ಯಂತರ ವೇತನ ಹೆಚ್ಚಳ ಮಾಡಿಸಲಾಗಿದ್ದು,

ಒಂದು ವೇಳೆ ನೌಕರರು ಕರ್ತವ್ಯಕ್ಕೆ ಹೋಗುವಾಗ ಅಪಘಾತ ಇಲ್ಲವೇ ಹೃದಯಾಘಾತದಿಂದ ಮೃತಪಟ್ಟರೇ ಶವ ಸಂಸ್ಕಾರಕ್ಕೆ 15 ಸಾವಿರ ಮತ್ತು ಮೃತರ ಕುಟುಂಬ ವರ್ಗಕ್ಕೆ 1 ಕೋಟಿ ಹಣವನ್ನು ನೀಡುವಂತೆ ಈಗಾಗಗಲೇ ರಾಜ್ಯ ಸರಕಾರದ ಮೇಲೆ ಒತ್ತಡ ತರಲಾಗಿದೆ ಎಂದರು.

ರೋಗಕ್ಕೆ ಒಳಗಾದ  ನೌಕರರಿಗೆ 1200 ಕ್ಕೂ ಹೆಚ್ಚು ಖಾಯಿಲೆಗಳಿಗೆ ಉಚಿತ ಚಿಕಿತ್ಸಾ ಸೌಲಭ್ಯವನ್ನು ಪಡೆದುಕೊಳ್ಳುವ ಯೋಜನೆಯನ್ನು ಸರಕಾರ ಜಾರಿಗೊಳಿಸಿದೆ.

ಜಗಳೂರು ಪಟ್ಟಣದ ತರಳಬಾಳು ಕೇಂದ್ರದಲ್ಲಿ ರಾಜ್ಯ ಸರ್ಕಾರಿ ನೌಕರರ ಸಂಘದ ವಿವಿಧ ಕಾರ್ಯಕ್ರಮಗಳ ಪ್ರಧಾನ ಸಮಾರಂಭವನ್ನು ರಾಜ್ಯಾಧ್ಯಕ್ಷ ಷಡಾಕ್ಷರಿ ಉದ್ಘಾಟಿಸಿದರು. ಸಾಧಕ ನೌಕರರನ್ನು ಈ ವೇಳೆ ಸನ್ಮಾನಿಸಲಾಯಿತು
ಜಗಳೂರು ಪಟ್ಟಣದ ತರಳಬಾಳು ಕೇಂದ್ರದಲ್ಲಿ ರಾಜ್ಯ ಸರ್ಕಾರಿ ನೌಕರರ ಸಂಘದ ವಿವಿಧ ಕಾರ್ಯಕ್ರಮಗಳ ಪ್ರಧಾನ ಸಮಾರಂಭವನ್ನು ರಾಜ್ಯಾಧ್ಯಕ್ಷ ಷಡಾಕ್ಷರಿ ಉದ್ಘಾಟಿಸಿದರು. ಸಾಧಕ ನೌಕರರನ್ನು ಈ ವೇಳೆ ಸನ್ಮಾನಿಸಲಾಯಿತು

ಸರಕಾರಿ ನೌಕರರ ನ್ಯಾಯಯುತ ಹಕ್ಕುಗಳಿಗಾಗಿ ಸಂಘಟಿತ ಹೊರಾಟ ಅಗತ್ಯ. ವ್ಯಾಪಕವಾಗಿ ಬೆಂಬಲಿಸಿ ಎಂದು ಕರೆ ನೀಡಿದರು.

ಕಳೆದ ದಶಕಗಳಿಂದ ಅನೇಕಬಾರಿ ಮುಷ್ಕರ ನಡೆಸಿದರೂ  ಯಾವುದೇ ಪ್ರಯೋಜನವಾಗಿಲ್ಲ.ನನ್ನ ಅಧ್ಯಕ್ಷತೆಯ ನಂತರ ರಾಜ್ಯವ್ಯಾಪಿ ಸಂಚರಿಸಿ ಸರಕಾರಿ ನೌಕರರ ಸಮಸ್ಯೆಗಳ ಆಲಿಸಿ ನಂತರ  ಸಮಯೋಚಿತವಾಗಿ ಮುಷ್ಕರಕ್ಕೆ ಕರೆ ನೀಡಿದ್ದಕ್ಕೆ.ಸಂಘಟನೆ ಶಕ್ತಿಗೆ ಸ್ಪಂದಿಸಿದ
ಆಡಳಿತ ಸರಕಾರ 22 ಆದೇಶಗಳನ್ನು ಹೊರಡಿಸಿದೆ.

7 ನೇ ವೇತನ ಪರಿಷ್ಕರಣೆ  ಬೇಡಿಕೆಗೆ ಶೇ.17 ರಷ್ಟು ಮಧ್ಯಂತರ ವೇತನ ಜಾರಿಗೊಳಿಸಿದೆ. ಏಪ್ರಿಲ್ 23 ರ ವೇಳೆಗೆ ಶೇ.40 ರಷ್ಟು ಹೆಚ್ಚಿಸುವ ನಿರೀಕ್ಷೆಯಿದೆ.

ಎನ್ ಪಿ ಎಸ್ ರದ್ದತಿಗೂ ಶಿಫಾರಸ್ಸುಮಾಡಿದೆ.ಇದು  ನನ್ನ ಸೇವೆಯಾಗಿದ್ದು. ಸಂಘಟನೆ ದಿಕ್ಕು ತಪ್ಪಿಸುವ ವದಂತಿಗಳಿಗೆ ಕಿವಿಗೊಡಬೇಡಿ ನಂಬಿಕೆ ಯಿಟ್ಟು ಕೈಜೋಡಿಸಿ ನಿಮ್ಮ ಧ್ವನಿಯಾಗಿರುವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಸಂಘಟನೆಗಳನ್ನು ಒಡೆದಾಳುವ ಸರಕಾರಗಳು:
ಪ್ರಸಕ್ತವಾಗಿ ಆಡಳಿತ ಸರಕಾರಗಳು ನೌಕರರ ಸಂಘಟನೆಗಳನ್ನು ಒಡೆದಾಳುತ್ತವೆ.ಇದಕ್ಕೆ ಕೆಎಸ್ ಆರ್ ಟಿಸಿ ನೌಕರರ ಹೊರಾಟವೇ ಸಾಕ್ಷಿಯಾಗಿದೆ.

ತಮಿಳುನಾಡಿನಲ್ಲಿ ಆಡಳಿತ ಸರಕಾರ  ಎಸ್ಮಾ ಜಾರಿಗೊಳಿಸಿ ಸರಕಾರಿ ನೌಕರರ ಹೊರಾಟವನ್ನು ಹತ್ತಿಕ್ಕಿದೆ.

ಆದರೆ ನಮ್ಮ ರಾಜ್ಯದ ಎಲ್ಲಾ ಇಲಾಖೆಗಳ ನೌಕರರ ಒಕ್ಕೋರಲಿನ ಸಹಕಾರದಿಂದ ಹೊರಾಟ ಯಶಸ್ವಿಯಾಗುತ್ತಿವೆ.

ನಾನು ಮುಖ್ಯಮಂತ್ರಿಗಳಿಗೆ ಆತ್ಮೀಯನಾಗಿರುವೆ ಯಾವುದೇ ಒಪ್ಪಂದರಹಿತ ದಿಟ್ಟ ಹೊರಾಟನ ನನ್ನದು ನಾನು ಸಂಘಟನೆಗೆ ವೈಯಕ್ತಿಕ ವೃತ್ತಿ ಕಳೆದಕೊಳ್ಳಲು ಸಿದ್ದನಾಗಿರುವೆ ಎಂದು ಆತ್ಮವಿಶ್ವಾಸ ವ್ಯಕ್ತಪಡಿಸಿದರು.

ಶಾಸಕ ಎಸ್.ವಿ.ರಾಮಚಂದ್ರ ಮಾತನಾಡಿ,ಸರಕಾರಿ ನೌಕರರು ಆಡಳಿತ ವ್ಯವಸ್ಥೆಗೆ ಬೆನ್ನೆಲುಬಾಗಿದ್ದು. ರಾಜ್ಯಾಧ್ಯಕ್ಷ ಷಡಾಕ್ಷರಿ ನೇತೃತ್ವದಲ್ಲಿ ಇಲಾಖೆಗಳ ಅಭಿವೃದ್ದಿ ಕೆಲಸಗಳಿಗೆ ಕುಂಠಿತವಾಗದಂತೆ ಆರೋಗ್ಯಕರವಾಗಿ ಹೊರಾಟ ನಡೆಸಿರುವುದು ಶ್ಲಾಘನೀಯ ಎಂದರು.

ಸರಕಾರಿ ನೌಕರರ ಶ್ರೇಯೊಭಿವೃದ್ದಿಗೆ ಬದ್ದ:
ಪಟ್ಟಣದಲ್ಲಿ  10 ಲಕ್ಷ ರೂ ವೆಚ್ಚದ ವಾಣಿಜ್ಯ ಮಳಿಗೆಗೆಳ ಕಟ್ಟಡಕ್ಕೆ ಅನುದಾನ ಒದಗಿಸಿದ್ದು.

ಅಲ್ಲದೆ ಲೊಕೋಪಯೋಗಿ ಇಲಾಖೆಯಡಿ 5 ಕೋಟಿ ರೂ ವೆಚ್ಚದ ಸರಕಾರಿ ನೌಕರರ ಭವನ ನಿರ್ಮಾಣಕ್ಕೆ ಪ್ರಸ್ತಾವನೆ‌ ಸಲ್ಲಿಸಲಾಗಿದೆ.

ಮೂರು ಬಾರಿ  ಶಾಸಕನನ್ನಾಗಿಸಲು ಸಹಕರಿಸಿದ ತಮಗೆ ಚಿರ ಋಣಿಯಾಗಿರುವೆ,ಈ ಬಾರಿ ವಿಧಾನಸಭೆ ಚುನಾವಣೆಯಲ್ಲಿ ಮತ್ತೊಮ್ಮೆ

ಆಶೀರ್ವಾದಿಸಬೇಕು.ನಾನೊಬ್ಬ ಶಾಸಕನಾಗಿ ಸರಕಾರಿ ವೇತ‌ನ ಪಡೆಯುವ ನೌಕರನಾಗಿರುವೆ.ತಾಲೂಕಿನ ಸರಕಾರಿ ನೌಕರರ ಶ್ರೇಯೊಭಿವೃದ್ದಿಗೆ ಸದಾ ಬದ್ದನಾಗಿರುವೆ ಎಂದು ಭರವಸೆ ನೀಡಿದರು.

ಸರಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಬಿ.ಪಾಲಾಕ್ಷಿ,
ಪ್ರೌಢಶಾಲಾ ಸಹಶಿಕ್ಷಕರ ಸಂಘದ ರಾಜ್ಯಾಧ್ಯಕ್ಷ ಬಿ. ಸಿದ್ದಬಸಪ್ಪ,ಉಪಾಧ್ಯಕ್ಷಎಸ್.ಬಸವರಾಜ್,ಮಾತನಾಡಿದರು.

ನೌಕರರ ಸಂಘದ ತಾಲೂಕು ಅಧ್ಯಕ್ಷ ಬಿ.ಆರ್  ಚಂದ್ರಪ್ಪ ಕಾರ್ಯಕ್ರಮ ಅಧ್ಯಕ್ಷತೆ ವಹಿಸಿದ್ದರು.ಈ ವೇಳೆ ವಿವಿಧ ಇಲಾಖೆಗಳ ಸಾಧಕರಿಗೆ ಸನ್ಮಾನಿಸಿ ಗೌರವಿಸಲಾಯಿತು.

ಸಂದರ್ಭದಲ್ಲಿ ದಾವಣಗೆರೆ ದಕ್ಷಿಣ ವಲಯ ಬಿಇಓ ದಾರುಕೇಶ್, ಕೇಂದ್ರ ಸಂಘದ ರಾಜ್ಯ ಉಪಾಧ್ಯಕ್ಷರಾದ ಸಿದ್ದೇಶ್,ಪೊಲೀಸ್ ವೃತ್ತ ನಿರೀಕ್ಷಕ ಶ್ರೀನಿವಾಸ್,ಶಿವಮೊಗ್ಗ ಸರಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಕೃಷ್ಣಮೂರ್ತಿ,ಲೊಕೋಪಯೋಗಿ ಎಇಇ ರುದ್ರಪ್ಪ,ತಾಲೂಕು ಸರಕಾರಿ ನೌಕರರ ಸಂಘದ ಮಾಜಿ ಅಧ್ಯಕ್ಷರಾದ ಅಜ್ಜಪ್ಪ ನಾಡಿಗರ್,

ರವಿಕುಮಾರ್,ಕುಮಾರ್,ಶಶಿಧರ್,ತಿಪ್ಪೇಸ್ವಾಮಿ,ಗುರುಮೂರ್ತಿ,ದ್ವಾರಕೇಶ್,ಡಿಡಿ ಹಾಲಪ್ಪ,ತಿಪ್ಪೇಸ್ವಾಮಿ,ನಿವೃತ್ತ ನೌಕರರ ಸಂಘದ ಪಾಲಯ್ಯ,

ನೌಕರರ ಸಂಘದ ಗೌರವಾಧ್ಯಕ್ಷ, ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಬಿ.ಮಹೇಶ್ವರಪ್ಪ,ರುದ್ರೇಶ್,ತಿಪ್ಪೇಸ್ವಾಮಿ,ಸತೀಶ್,ರುದ್ರೇಶ್,ಹನುಮಂತೇಶ್ ಉಪಸ್ಥಿತರಿದ್ದರು.

Share this Article
Leave a comment

Leave a Reply

Your email address will not be published. Required fields are marked *

error: Content is protected !!