ಸುದ್ದಿವಿಜಯ, ಜಗಳೂರು: ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಮಂಗಳವಾರ ಮಧ್ಯಾಹ್ನ ಕ್ಲಿಷ್ಟಕರ ಹೆರಿಗೆ ಮಾಡಿಸಿ 4.6ಕೆಜಿ ಮಗುವನ್ನು ಹೊರತೆಗೆದು ಮಗುವನ್ನು ಬದುಕಿಸುವಲ್ಲಿ ವೈದ್ಯರು ಯಶಸ್ವಿಯಾಗಿದ್ದಾರೆ.
ತಾಲ್ಲೂಕಿನ ಬಿಳಿಚೂಡು ಗ್ರಾಮದ ಪೂಜಾ ನಾಗರಾಜ್ ಎಂಬ ಮಹಿಳೆ ಹೆರಿಗೆಗಾಗಿ ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ ಮಗು ಹೆಚ್ಚು ತೂಕವಿದೆ ಎಂದು ಮನಗಂಡ ಸ್ತ್ರೀ ರೋಗ ತಜ್ಞ ಡಾ. ಸಂಜಯ್ ನೇತೃತ್ವದ ವೈದ್ಯರು ಸಿಜೇರಿಯನ್ ಮೂಲಕ ಹೆರಿಗೆ ಮಾಡಿಸಲು ಆಲೋಚಿಸಿದ್ದರು.
ಆದರೆ ಸಮಯ ಇರಲಿಲ್ಲ. ಆದರೂ ಪಟ್ಟು ಬಿಡದ ವೈದ್ಯರು ತಾಯಿ ಮತ್ತು ಮಗು ರಕ್ಷಣ ಮಾಡಲು ಸಾಮಾನ್ಯ ಹೆರಿಗೆ ಮಾಡಿಸಿ ಮಗು ಹೊರತೆಯುವಲ್ಲಿ ಯಶಸ್ವಿಯಾಗಿದ್ದಾರೆ.ಜನನವಾದ ಮಗುವಿಗೆ ತಕ್ಷಣವೇ ಉಸಿರಾಟ ತೊಂದರೆ ಕಾಣಿಸಿಕೊಂಡಿತ್ತು. ಸಾವು ಬದುಕಿನ ಮಧ್ಯೆ ಹೋರಾಟ ನಡೆಸುತ್ತಿದ್ದ ಮಗುವಿಗೆ ಎನ್‍ಬಿಎಸ್‍ಯು ವೈದ್ಯರ ತಂಡ ತುರ್ತು ಚಿಕಿತ್ಸೆ ಕ್ರಮ ಕೈಗೊಂಡು ಮಗುವಿನ ಪ್ರಾಣ ಉಳಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಈ ವೇಳೆ ಮಕ್ಕಳ ತಜ್ಞ ಡಾ.ಜಯಕುಮಾರ್, ಇಎನ್‍ಟಿ ತಜ್ಞರಾದ ಡಾ. ಕಿರಣ್, ಆಡಳಿತ ವೈದ್ಯಧಿಕಾರಿ ಡಾ ಷಣ್ಮುಖ, ದಾದಿಯರಾದ ದೀಪಾ, ಜೋತಿ, ಶೈಲಜಾ ಸೇರಿದಂತೆ ಸಿಬ್ಬಂದಿ ತಾಯಿ ಮಗು ಉಳಿಸುವಲ್ಲಿ ಪ್ರಮುಖ ಪಾತ್ರವಹಿಸಿದ್ದು ಪ್ರಶಂಸೆ ವ್ಯಕ್ತವಾಗಿದೆ.
ತಾಯಿ ಮುಗು ಆರೋಗ್ಯಕರವಾಗಿದ್ದು, ಹೆಚ್ಚಿನ ಚಿಕಿತ್ಸೆಗೆ ದಾವಣಗೆರೆ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ.