ಬುಳ್ಳನಹಳ್ಳಿ ಸರಕಾರಿ ಶಾಲೆಗೆ ಮೂಲಭೂತ ಸೌಲಭ್ಯ ಕೊರತೆ

Suddivijaya
Suddivijaya July 17, 2024
Updated 2024/07/17 at 1:25 PM

suddivijayanews17/07/2024
ಸುದ್ದಿವಿಜಯ, ಜಗಳೂರು: ವಿದ್ಯಾರ್ಥಿಗಳಿಗೆ ಕಲಿಕೆಗೆ ಪೂರಕವಾದ ವಾತಾವರಣ ನಿರ್ಮಿಸುವ ಜವಾಬ್ದಾರಿ ಅಧಿಕಾರಿಗಳು ಮತ್ತು ರಾಜಕಾರಣಿಗಳ ಮೇಲೆ ಇರುತ್ತದೆ. ಆದರೆ ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಸೌಲಭ್ಯ ಕಾಣದೆ ಕಲಿಯುವ ಮಕ್ಕಳಿಗೆ ಕಲುಷಿತ ವಾತಾವರಣ ನಿರ್ಮಾಣವಾಗಿದೆ.

ತಾಲೂಕಿನ ಬುಳ್ಳನಹಳ್ಳಿ ಗ್ರಾಮದಲ್ಲಿ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ದುಃಸ್ಥಿತಿಯ ಆಗರವಾಗಿದೆ. ಶಾಲೆ ಸುಮಾರು 83ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ.

4 ಜನ ಶಿಕ್ಷಕರು ಕಾರ್ಯನಿರ್ವಹಿಸುತ್ತಿದ್ದಾರೆ. ಈ ಶಾಲೆಗೆ 2 ಹಳೆಯ ಕೊಠಡಿಗಳಿದ್ದು, ಅವುಗಳು ಸಹ ಬೀಳುವಂತಹ ಸ್ಥಿತಿಯಲ್ಲಿವೆ. ಇನ್ನು ಶಿಕ್ಷಕರು ಮತ್ತು ವಿದ್ಯಾರ್ಥಿಗಳಿಗೆ ಶೌಚಾಲಯಗಳಲ್ಲಿ ಇನ್ನು ಪಠ್ಯೇತರ ಚಟುವಟಿಕೆ ನಡೆಸಲು ಯಾವುದೇ ಆಟದ ಮೈದಾನವಿಲ್ಲ.

ಮಳೆ ಬಂತೆಂದರೆ ಶಾಲೆಯ ಮುಂಭಾಗ ನೀರು ನಿಂತು ಕೆಸರು ಗದ್ದೆಯಾಗುತ್ತದೆ. ಇಂತಹ ವಾತಾವರಣ ಮಕ್ಕಳ ಕಲಿಕೆಗೆ ಪೂರಕವೇ ಎಂಬ ಪ್ರಶ್ನೆ ಅಲ್ಲಿನ ಸಾರ್ವಜನಿಕರ ಕಾಡುತ್ತಿದೆ.

ಒಂದೆರೆಡು ವರ್ಷಗಳ ಹಿಂದೆ ಅಲ್ಲಿ ಕಾರ್ಯನಿರ್ವಹಿಸುವ ಶಿಕ್ಷಕರಾದ ಮೀನಾಕ್ಷಿ ಎಂಬುವವರ ಮನೆಗೆ ಅಂದಿನ ಶಾಸಕರಾದ ಎಸ್.ವಿ.ರಾಮಚಂದ್ರಪ್ಪನವರು ಖಾಸಗಿ ಕಾರ್ಯಕ್ರಮಕ್ಕೆ ಬಂದ ಸಂದರ್ಭದಲ್ಲಿ ನನಗೆ ಮನೆ ಇಲ್ಲದೇ ಇದ್ದರೂ ಪರವಾಗಿಲ್ಲ ಆದರೆ ನಾವು ಕಾರ್ಯನಿರ್ವಹಿಸುವ ಶಾಲೆ ದುಃಸ್ಥಿತಿಯಲ್ಲಿದೆ ಮಳೆಗಾಲದಲ್ಲಿ ಏನಾದರೂ ತೊಂದರೆ ಗೀಡಾದರೆ ದೊಡ್ಡ ಅನಾಹುತವಾಗುತ್ತದೆ.

ಹಾಗಾಗಿ ಕೊಠೆಡಿಗಳ ನಿರ್ಮಾಣಕ್ಕೆ ಅನುದಾನ ಕೊಡಿ ಎಂದು ಕೇಳಿದ ಪರಿಣಾಮ ಒಂದು ಕೊಠಡಿ ನಿರ್ಮಾಣವಾಗಿತ್ತು. ಆದರೆ ಶಾಲೆಗೆ ಸುತ್ತು ರಕ್ಷಣ ಗೋಡೆ, ಶೌಚಾಲಯ, ಆಟದ ಮೈದಾನ ಇಲ್ಲವಾಗಿದೆ.

ಆ ಕೊಠಡಿ ಸುತ್ತು ಮೆಕ್ಕೆಜೋಳ ಬಿತ್ತನೆಯಾಗಿದ್ದು, ಮಕ್ಕಳು ತೀವ್ರ ತರವಾದ ತೊಂದರೆಯಾಗಿದ್ದು, ಕಾಡುಪ್ರಾಣಿಗಳು, ವಿಷಜಂತುಗಳು ವಾಸಸ್ಥಾನವಾದರೆ ಮಕ್ಕಳ ಮತ್ತು ಶಿಕ್ಷಕರ ಜೀವಕ್ಕೆ ಹೊಣೆ ಯಾರು ಎಂದು ಪೋಷಕರು ಆತಂಕ ವ್ಯಕ್ತಪಡಿಸಿದ್ದಾರೆ.

 ಜಗಳೂರು ತಾಲೂಕಿನ ಬುಳ್ಳನಹಳ್ಳಿ ಸರಕಾರಿ ಶಾಲೆಯ ದುಸ್ಥಿತಿ
 ಜಗಳೂರು ತಾಲೂಕಿನ ಬುಳ್ಳನಹಳ್ಳಿ ಸರಕಾರಿ ಶಾಲೆಯ ದುಸ್ಥಿತಿ

ಕ್ಷೇತ್ರ ಶಿಕ್ಷಣಾಧಿಕಾರಿಗಳು ಒಂದು ಬಾರಿ ಶಾಲೆಗೆ ಭೇಟಿ ನೀಡಿದರೆ ಅಲ್ಲಿನ ವಾಸ್ತವ ಸ್ಥಿತಿ ಅರಿಯಬಹುದು. ಹಾಗೂ ಅದಕ್ಕೆ ಪರಿಹಾರವನ್ನು ಕಂಡುಕೊಳ್ಳಬಹುದು. ಆದರೆ ಒಮ್ಮೆಯೂ ಭೇಟಿ ನೀಡಿಲ್ಲ, ಸಮಸ್ಯೆಯನ್ನು ಆಲಿಸದ ಪರಿಣಾಮ ಸಮಸ್ಯೆ ಇನ್ನು ಜೀವಂತವಾಗಿಯೇ ಉಳಿದೆ.

ಈಗಲಾದರೂ ಕ್ಷೇತ್ರ ಶಿಕ್ಷಣಾಧಿಕಾರಿಗಳು ಇಂತಹ ಶಾಲೆಗಳನ್ನು ಗುರುತಿಸಿ ಅವುಗಳನ್ನು ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಕ್ರಮ ಕೈಗೊಂಡಾಗ ಮಾತ್ರ ಸರಕಾರಿ ಶಾಲೆಗಳು ಉಳಿಯಬಹುದು.

ಇಲ್ಲಾವಾದರೆ ಸರಕಾರಿ ಶಾಲೆ ಮೂಲ ಸೌಕರ್ಯಗಳಿಂದ ವಂಚಿತವಾಗಿ ವಿದ್ಯಾರ್ಥಿಗಳನ್ನು ಸರಕಾರಿ ಶಾಲೆಗೆ ಸೇರಿಸುವ ಬದಲು ಖಾಸಗಿ ಶಾಲೆಗಳತ್ತ ಚಿತ್ತ ಹರಿಸಲು ಪೋಷಕರು ಮುಂದಾಗುತ್ತಾರೆ.

ಶಾಸಕರಾದ ಬಿ.ದೇವೇಂದ್ರಪ್ಪ ಮತ್ತು ಅಧಿಕಾರಿಗಳು ದುಸ್ಥಿತಿಯ ಸರಕಾರಿ ಶಾಲೆಗಳತ್ತ ಚಿತ್ತ ಹರಿಸಲಿ ಎಂದು ಗ್ರಾಮಸ್ಥರ ಕಳಕಳಿಯಾಗಿದೆ.
ಶಾಲೆಗೆ ಶೀಘ್ರವೇ ಭೇಟಿ: 

ಶಾಲೆಗಳ ರಿಪೇರಿಗೆ ಸಂಬಂಧಿಸಿದಂತೆ ಸರಕಾರಕ್ಕೆ ಪತ್ರ ಬರೆದಿದ್ದೇವೆ. ಇಂತಹ ಸಾಕಷ್ಟು ಶಾಲೆಗಳಿಗೆ ಅನುದಾನದ ಅಗತ್ಯವಿದೆ. ಈಗಾಗಲೇ 66 ಲಕ್ಷ ರೂ ಅನುದಾನ ಬಿಡುಗಡೆಯಾಗಿದೆ.

ಬುಳ್ಳನಹಳ್ಳಿ ಸರಕಾರಿ ಶಾಲೆಗೆ ಶೀಘ್ರವೇ ಬಿಇಓ ಈ. ಹಾಲಮೂರ್ತಿ ಜೊತೆ ಭೇಟಿ ನೀಡಿ ಸಮಸ್ಯೆಗೆ ಸ್ಪಂದಿಸುವುದಾಗಿ ಕ್ಷೇತ್ರ ಶಿಕ್ಷಣ ಸಮನ್ವಯಾಧಿಕಾರಿ ಡಿ.ಡಿ.ಹಾಲಪ್ಪ ವಿಕಗೆ ಪ್ರತಿಕ್ರಿಯೆ ನೀಡಿದರು.

Share this Article
Leave a comment

Leave a Reply

Your email address will not be published. Required fields are marked *

error: Content is protected !!