ಜಗಳೂರು: ಸರಕಾರಿ ಶಾಲೆಗಳಲ್ಲಿ ಫಲಿತಾಂಶ ಕುಸಿತ, ಕಾರಣಗಳೇನು?

Suddivijaya
Suddivijaya May 9, 2024
Updated 2024/05/09 at 1:03 PM

ಸುದ್ದಿವಿಜಯ, ಜಗಳೂರು: ಪ್ರತಿವರ್ಷದಂತೆ ಈ ವರ್ಷವೂ ಸಹ ಎಸ್‍ಎಸ್‍ಎಲ್‍ಸಿ ಪರೀಕ್ಷಾ ಫಲಿತಾಂಶದಲ್ಲಿ ಜಗಳೂರು ತಾಲೂಕಿನ ಸರಕಾರಿ ಶಾಲೆಗಳ ರಿಸಲ್ಟ್ ಕುಸಿದಿದೆ.

ಕಳೆದ 5 ವರ್ಷಗಳಲ್ಲಿ ಜಿಲ್ಲೆಯಲ್ಲೇ ಫಸ್ಟ್ ಎಂಬ ಪಟ್ಟ ಬಿಟ್ಟು ಕೊಡದ ಜಗಳೂರು ಕ್ಷೇತ್ರದಲ್ಲಿ ಈ ಬಾರಿ ಭಾರಿ ಪ್ರಮಾಣದಲ್ಲಿ ಅಂಕಗಳ ಕುಸಿತ ಪೋಷಕರಲ್ಲಿ ಮತ್ತು ಶಿಕ್ಷಣ ಇಲಾಖೆ ಅಧಿಕಾರಿಗಳಲ್ಲಿ ದಿಗ್ಭ್ರಮೆ ಮೂಡಿಸಿದೆ.

ನಾಲ್ಕನೇ ಸ್ಥಾನಕ್ಕೆ ಕುಸಿಯಲು ಕಾರಣಗಳೇನು ಎಂದು ಒಂದೊಂದಾಗಿ ಪಟ್ಟಿ ಮಾಡುತ್ತಾ ಹೋದರೆ ಶಿಕ್ಷಣದಲ್ಲಿ ಅದರಲ್ಲೂ ಸರಕಾರಿ ಶಾಲೆಗಳಲ್ಲಿ ಶಿಕ್ಷಕರ ಕೊರತೆ, ಮೂಲ ಸೌಕರ್ಯಗಳ ಕೊರತೆ,

ತಜ್ಞ ಶಿಕ್ಷಕರ ಕೊರತೆ, ಖಾಸಗಿ ಶಾಲೆಗಳ ಪೈಪೋಟಿ, ಸರಕಾರಿ ಶಾಲೆಗಳಲ್ಲಿ ಶಿಕ್ಷಕರ ನಿರ್ಲಕ್ಷ್ಯ, ಖಾಸಗಿ ಶಾಲೆಗಳ ಬೆನ್ನು ಹತ್ತುತ್ತಿರುವ ಪೋಷಕರು, ಹೀಗೆ ಹತ್ತು ಹಲವು ಕಾರಣಗಳು ಕಾಡುತ್ತಿವೆ.

ಸರಕಾರಿ ಶಾಲೆಗಳಲ್ಲಿ ಶಿಕ್ಷಣ ಸುಧಾರಣೆ ಎಂಬುದು ಬರೀ ಮಾತಿನಲ್ಲೇ ಹೊರೆತು ಕಾರ್ಯರೂಪಕ್ಕೆ ಬರುವುದು ಆಮೆಯ ನಡಿಗೆಯಂತಾಗಿದೆ.

ಅದರಲ್ಲೂ ಈ ಬಾರಿ ಪರೀಕ್ಷಾ ಕೊಠಡಿಗಳಲ್ಲಿ ಅಳವಡಿಸಿದ್ದ ಕ್ಯಾಮರಾಗಳು ಕಾಪಿಗೆ ಅವಕಾಶ ಕೊಟ್ಟಿಲ್ಲ. ಅಂದರೆ ಪ್ರತಿವರ್ಷವೂ ಫಸ್ಟ್ ಬರಲು ಅತಿಯಾದ ಕಾಪಿಯೇ ಕಾರಣವೇ ಎಂಬುದು ಚರ್ಚಿತ ವಿಷಯವಾಗಿದೆ.

ಕಡಿಮೆ ರಿಸಲ್ಟ್ ಬಂದ ಸರಕಾರಿ ಶಾಲೆಗಳು:

ದೊಡ್ಡಮೊಮ್ಮನಹಳ್ಳಿ(ಶೇ.89), ಯರಲಕಟ್ಟೆ(69), ದೊಣೆಹಳ್ಳಿ(73), ದೇವಿಕೆರೆ(18.18), ಹೊಸಕೆರೆ(59), ಮೆದಕೇರನಹಳ್ಳಿ(65), ಗೌರಿಪುರ(67), ದಿದ್ದಿಗೆ(73), ಬಿಳಿಚೋಡು(57), ರಸ್ತೆಮಾಚಿಕೆರೆ(37),

ತಮಲೇಹಳ್ಳಿ(67), ಮರಿಕುಂಟೆ(58), ಗುರುಸಿದ್ದಾಪುರ(65), ಸರಕಾರಿ ಪದವಿ ಪೂರ್ವ ಕಾಲೇಜು ಜಗಳೂರು(56), ಮೊರಾರ್ಜಿ ಶಾಲೆ ಮೆದಗಿನಕೆರೆ(88), ಸೊಕ್ಕೆ ಚನ್ನಮ್ಮ ವಸತಿ ಶಾಲೆ(88), ಜಗಳೂರು ಮೌಲಾನ ಅಜಾದ್ ಶಾಲೆ(60),

ಅಲ್ಪಸಂಖ್ಯಾತರ ಬಾಲಕಿಯರ ಶಾಲೆ ಜಗಳೂರು(81), ಬಿದರಕೆರೆ ಅಂಬೇಡ್ಕರ್ ವಸತಿ ಶಾಲೆ(92.5), ಪಲ್ಲಾಗಟ್ಟೆ ಸಿದ್ದಮ್ಮ ಶಾಲೆ(74), ಜೆಪಿ ಶಾಲೆ ಮಲ್ಲಾಪುರ(77), ಸಿಎಂ ಹೊಳೆ ಬಸವೇಶ್ವರ ಶಾಲೆ(97), ಮಾರುತಿ ಶಾಲೆ ಸೊಕ್ಕೆ (59),

ಎಚ್‍ಎಂ ಹೊಳೆ ತಿರುಮಲೇಶ್ವರ ಶಾಲೆ (92), ಅಣಬೂರು ಶಾಲೆ (73), ಹನುಮಂತಾಪುರ ರಾಜೀವ್ ಗಾಂಧಿ ಶಾಲೆ (72), ಬೇಡರಕಣ್ಣಪ್ಪ, ಜಗಳೂರು(50), ಮುಸ್ಟೂರು ಹುಚ್ಚನಾಗಲಿಂಗೇಶ್ವರ ಶಾಲೆ(78), ಉಜ್ಜಿನಿ ಶಾಲೆ(29),

ಚದರಗೊಳ್ಳ ಉಮಾಮಹೇಶ್ವರ ಶಾಲೆ (66), ದಿವ್ಯಭಾರತಿ ಜಗಳೂರು(46), ಅಸಗೋಡು ಶಂಭುಲಿಂಗೇಶ್ವರ ಶಾಲೆ (70), ಭರಮಸಮುದ್ರ ವಲ್ಲಭಭಾಯಿ ಶಾಲೆ (80), ಹನುಮಂತರೆಡ್ಡಿ ಶಾಲೆ (47), ಗುರುಸಿದ್ದೇಶ್ವರ ಶಾಲೆ ಬಿದರಕೆರೆ(70),

ಹಾಲೇಕಲ್ಲು ಗವಿ ಸಿದ್ದೇಶ್ವರ (82), ಉಜ್ಜಪ್ಪವಡೇರಹಳ್ಳಿ ಶಾಲೆ(62), ಬಸವನಕೋಟೆ ಶಾಲೆ(83), ಕಲ್ಲೇದೇವರಪುರ ಶಾಲೆ(81), ಅಂಬೇಡ್ಕರ್ ಶಾಲೆ(39) ರಷ್ಟು ಫಲಿತಾಂಶ ಸರಕಾರಿ ಶಾಲೆಗಳಿಂದ ಬಂದಿದೆ.

 

Share this Article
Leave a comment

Leave a Reply

Your email address will not be published. Required fields are marked *

error: Content is protected !!