ಸುದ್ದಿವಿಜಯ, ಜಗಳೂರು: ತಾಲೂಕಿನ ಯರಲಕಟ್ಟೆ ಗ್ರಾಮದ ಪ್ರೌಢಶಾಲೆ ವಿದ್ಯಾರ್ಥಿನಿಯರು ಬಾಲಕೀಯರ ಬಾಲ್ ಬ್ಯಾಡ್ಮಿಂಟನ್‍ನಲ್ಲಿ ಜಿಲ್ಲಾ ಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದು ವಿಭಾಗೀಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ದಾವಣಗೆರೆಯಲ್ಲಿ ನಡೆದ ಜಿಲ್ಲಾಮಟ್ಟದ ಬ್ಯಾಡ್ಮಿಂಟನ್ ಕ್ರೀಡೆಯಲ್ಲಿ ಪ್ರಥಮ ಸ್ಥಾನಗಳಿಸುವ ಮೂಲಕ ಅವರು ಅದ್ವಿತೀಯ ಸಾಧನೆ ಮಾಡಿದ್ದಾರೆ. ಸಂಜನಾ, ನಮ್ರತಾ, ರಚನಾ, ಪೂರ್ಣಿಮ, ರಂಜಿತ, ತನುಜ, ಇವರು ಜಿಲ್ಲಾ ಮಟ್ಟದ ಪ್ರೌಢಶಾಲಾ ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆದಿದ್ದಾರೆ. ಇದೇ ದಸರಾ ಕ್ರೀಡಾಕೂಟದಲ್ಲೂ ಇದೇ ತಂಡ ಆಟ ಆಡಿ ಪ್ರಥಮ ಸ್ಥಾನ ಪಡೆದು ಡಿವಿಜನ್ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ಕಳೆದ ಬಾರಿ ಸಾಲಿನಲ್ಲೂ ಜಿಲ್ಲಾ ಮಟ್ಟದಲ್ಲಿ ಪ್ರಥಮ ಸ್ಥಾನ ಪಡದು ಡಿವಿಜನ್ ಮಟ್ಟಕ್ಕೆ ಆಯ್ಕೆಯಾಗಿ ಬೆಂಗಳೂರು ಡಿವಿಜನ್ ಹಂತ ತುಮಕೂರಿನಲ್ಲಿ ನಡೆದ ಬಾಲಕಿಯರ ಬಾಲ್ ಬ್ಯಾಡ್ಮಿಟನ್‍ನಲ್ಲಿ ಕೊನೆಯ ಹಂತದಲ್ಲಿ ಸೋತಿದ್ದನ್ನು ಸ್ಮರಿಸಬಹುದು.ಜಿಲ್ಲಾ ಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದು ವಿಜೇತರಾದ ವಿದ್ಯಾರ್ಥಿನಿಯರಿಗೆ ಯರಲಕಟ್ಟೆ ಪ್ರೌಢಾಶಾಲೆಯ ಮುಖ್ಯಶಿಕ್ಷಕ ಮಹಾಂತೇಶ್, ಎಸ್‍ಡಿಎಂಸಿ ಅಧ್ಯಕ್ಷರು, ಪದಾಧಿಕಾರಿಗಳು, ಸಹಶಿಕ್ಷಕರುಗಳು, ಗ್ರಾಮಸ್ಥರು ಬೆಂಗಳೂರು ಡಿವಿಜನ್ ಹಂತದಲ್ಲೂ ಗೆಲುವು ಸಾಧಿಸಲೆಂದು ಶುಭಕೋರಿದ್ದಾರೆ.
ಗ್ರಾಮದಲ್ಲಿ ಪಿಯು ಕಾಲೇಜು ನಿರ್ಮಾಣಕ್ಕೆ ಆಗ್ರಹ:
ಶೈಕ್ಷಣೀಕ ಮತ್ತು ಕ್ರೀಡೆಯಲ್ಲಿ ಮುಂಚೂಣಿಯಲ್ಲಿರುವ ಉನ್ನತೀಕರಿಸಿದ ಪಿಯುಸಿ ಕಾಲೇಜಿಗೆ ಸರಕಾರಕ್ಕೆ ವರದಿ ಕಳಿಸಲಾಗಿದೆ. ಕಾಲೇಜಿಗಾಗಿ 2 ಎಕರೆ 22 ಗುಂಟೆ ಜಮೀನಿದೆ. 10 ಸುಸಜ್ಜಿತವಾದ ಕೊಠಡಿಗಳ ವ್ಯವಸ್ಥೆ ಇದೆ. 8,9,10 ನೇ ತರಗತಿವರೆಗೆ ಸ್ಮಾಟ್ ಕ್ಲಾಸ್ ಶಿಕ್ಷಣದ ವ್ಯವಸ್ಥೆ ಇದೆ. ಹೀಗಾಗಿ ಕಾಲೇಜು ಮಂಜೂರು ಮಾಡಿಸಿ ಎಂದು ಗ್ರಾಮಸ್ಥರು ಶಾಸಕ ಬಿ.ದೇವೇಂದ್ರಪ್ಪ ಅವರಿಗೆ ಮನವಿ ಮಾಡಲಾಗುವುದು ಎಂದು ಗ್ರಾಮದ ಮುಖಂಡ ಬೋರ್‍ವೆಲ್ ಮಂಜಣ್ಣ ತಿಳಿಸಿದ್ದಾರೆ.