ಸುದ್ದಿವಿಜಯ,ಜಗಳೂರು:ಸೋಲಾರ್ ದೀಪ ಅಳವಡಿಸುವ ವಿಚಾರವಾಗಿ ಗ್ರಾಮ ಪಂಚಾಯಿತಿಯ ಉಪಾಧ್ಯಕ್ಷೆಯ ಮೇಲೆ ಹಲ್ಲೆ ಮಾಡಿರುವ ಘಟನೆ ತಾಲೂಕಿನ ಚಿಕ್ಕಬನ್ನಿಹಟ್ಟಿ ಗ್ರಾಮದಲ್ಲಿ ನಡೆದಿದೆ.
ನಿಂಗಮ್ಮ ಹಲ್ಲೆಗೊಳಗಾದ ಉಪಾಧ್ಯಕ್ಷೆ. ಅದೇ ಗ್ರಾಮದ ಮಾರಪ್ಪ ಹಲ್ಲೆ ಮಾಡಿದ ವ್ಯಕ್ತಿಯಾಗಿದ್ದು ಜಗಳೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹೊಸಕೆರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚಿಕ್ಕಬನ್ನಿಹಟ್ಟಿ ಗ್ರಾಮದಲ್ಲಿ ಪಂಚಾಯಿತಿಯ ವತಿಯಿಂದ ಸೋಲಾರ್ ದೀಪ ಅಳವಡಿಸಿದ್ದಾರೆ.
ಇದೇ ವಿಚಾರವನ್ನಿಟ್ಟುಕೊಂಡ ಮಾರಪ್ಪ ನಮ್ಮ ಮನೆಯ ಮುಂದೆ ಸೋಲಾರ್ ದೀಪ ಅಳವಡಿಸಬೇಕು. ಇಲ್ಲದಿದ್ದಾರೆ ಎಲ್ಲಾ ಕಂಬಗಳನ್ನು ಮುರಿದು ಹಾಕುತ್ತೇನೆ ಎಂದು ಉಪಾಧ್ಯಕ್ಷೆ ನಿಂಗಮ್ಮ ಅವರೊಂದಿಗೆ ಜಗಳವಾಡಿದ್ದಾನೆ.
ಮನೆಯಲ್ಲಿ ಒಬ್ಬಳೆ ಇರುವಾಗ ಏಕಾಏಕಿ ನುಗ್ಗಿದ ಮಾರಪ್ಪ ನಿಂಗಮ್ಮಳನ್ನು ಹಿಗ್ಗಾಮುಗ್ಗ ಹೊಡೆದ ಹಲ್ಲೆ ಮಾಡಿದ್ದಾನೆ. ಅಲ್ಲದೇ ಅವ್ಯಾಚ್ಯ ಶಬ್ದಗಳಿಂದ ನಿಂದಿಸಿ ಕೊಲೆ ಬೆದರಿಕೆ ಹಾಕಿದ್ದಾನೆ.
ಗಾಯಗೊಂಡಿದ್ದ ನಿಂಗಮ್ಮ ಅವರನ್ನು ಜಗಳೂರಿನ ಸರಕಾರಿ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.